twitter
    For Quick Alerts
    ALLOW NOTIFICATIONS  
    For Daily Alerts

    ಮೈನಾ ಆಗಯಾ, ಚಿತ್ರಮಂದಿರದಿಂದ ಚಾರ್ಮಿನಾರ್ ಚಲಾಗಯಾ

    |

    Theater problem contines for Kannada movies
    ಇದು ವಿಷಾದದಿಂದ ಹೇಳುವ ಮಾತು. ಕನ್ನಡ ಚಿತ್ರಗಳಿಗಿದು ಇಂದು ನಿನ್ನೆಯ ಸಮಸ್ಯೆಯಲ್ಲ. ಸೂರ್ಯ ಚಂದ್ರರಿರುವರೆಗೂ ಕನ್ನಡ ಚಿತ್ರಗಳ ಥಿಯೇಟರ್ ಸಮಸ್ಯೆ ಬವಣೆ ಮುಗಿಯುವುದಿಲ್ಲವೇನೋ?

    ಪರಭಾಷೆಯ ಚಿತ್ರ ಪ್ರದರ್ಶನ ಮಾಡುವ ಚಿತ್ರಮಂದಿರಗಳು atleast ರಾಜ್ಯೋತ್ಸವದ ದಿನದಂದೂ ಕನ್ನಡ ಚಿತ್ರ ಪ್ರದರ್ಶನ ಮಾಡುವುದಿಲ್ಲ. ನಮ್ಮವರ ಹೋರಾಟಕ್ಕೆ ಬೆಲೆಯಿಲ್ಲ, ಒಳ್ಳೆ ಮನಸ್ಸಿನಿಂದ ಪ್ರತಿಭಟಿಸುವವರಿಲ್ಲ, ಚಿತ್ರೋದ್ಯಮದಲ್ಲಿ ಒಗ್ಗಟ್ಟಿಲ್ಲ, ಪರಭಾಷೆಯ ವ್ಯಾಮೋಹ ಬಿಡುವುದಿಲ್ಲ. ಒಟ್ಟಿನಲ್ಲಿ ಕನ್ನಡ ಚಿತ್ರಗಳ ಥಿಯೇಟರ್ ಸಮಸ್ಯೆ ಬಗೆಹರಿಯುವುದೇ ಇಲ್ಲ.

    ನಿರ್ದೇಶಕ ನಾಗಶೇಖರ್ ನಿರ್ದೇಶನದ ಮೈನಾ ಚಿತ್ರ ಶುಕ್ರವಾರ (ಫೆ 22) ರಾಜ್ಯದೆಲ್ಲೆಡೆ ಬಿಡುಗಡೆಯಾಯಿತು. ಸುಮಾರು 110 ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಚಿತ್ರಕ್ಕೆ ಮತ್ತೆ "ಕನ್ನಡ ಚಿತ್ರಗಳಿಗೆ ಕನ್ನಡ ಚಿತ್ರಗಳೇ ಪೈಪೋಟಿ"ಯಾಗುತ್ತಿರುವುದು ನೋವಿನ ವಿಷಯ.

    ಉತ್ತಮ ಪ್ರದರ್ಶನ ಕಾಣುತ್ತಿರುವ ಚಂದ್ರು ನಿರ್ದೇಶನದ ಚಾರ್ಮಿನಾರ್ ಚಿತ್ರಕ್ಕೆ ಮೈನಾ ಚಿತ್ರದಿಂದ ಹೊಡೆತ ಬಿದ್ದಿದೆ. ಬೆಂಗಳೂರು ನಗರದಲ್ಲಿ ಪ್ರದರ್ಶನ ಕಾಣುತ್ತಿದ್ದ ಹತ್ತು ಚಿತ್ರಮಂದಿರದಿಂದ ಚಾರ್ಮಿನಾರ್ ಚಿತ್ರವನ್ನು ಎತ್ತಂಗಡಿ ಮಾಡಿ ಮೈನಾ ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.

    ಮೂರನೇ ವಾರ ಚಾಲ್ತಿಯಲ್ಲಿರುವ ಚಾರ್ಮಿನಾರ್ ಚಿತ್ರಕ್ಕೆ ಬೆಂಗಳೂರಿನ ಒಂದೊಂದು ಚಿತ್ರಮಂದಿರದಿಂದ ಒಂದು ಲಕ್ಷಕ್ಕೂ ಹೆಚ್ಚಿನ ಆದಾಯ ಬರುತ್ತಿದೆ. ಆದರೂ ಮೈನಾ ಚಿತ್ರದ ಹಂಚಿಕೆದಾರು ನನ್ನ ಚಿತ್ರದ ವಿತರಕರ ಜೊತೆ ಹೊಂದಾಣಿಕೆ ಮಾಡಿಕೊಂಡು ಚಾರ್ಮಿನಾರ್ ಚಿತ್ರವನ್ನು ಎತ್ತಂಗಡಿ ಮಾಡಿಸುತ್ತಿದ್ದಾರೆ ಎಂದು ನಿರ್ದೇಶಕ ಚಂದ್ರು ನೋವು ವ್ಯಕ್ತ ಪಡಿಸುತ್ತಿದ್ದಾರೆ.

    ನನಗೆ ಮೈನಾ ಚಿತ್ರದ ಮೇಲೆ ಬೇಸರವಿಲ್ಲ. ಅದೂ ಕನ್ನಡ ಚಿತ್ರ, ಕನ್ನಡ ಚಿತ್ರ ಚೆನ್ನಾಗಿ ಓಡ ಬೇಕೆಂದು ಬಯಸುವವನು ನಾನು. ಹಾಗಂತ ಚಾರ್ಮಿನಾರ್ ಚಿತ್ರ ನಿರ್ಮಿಸಿದ ನನಗಾಗುವ ನಷ್ಟವನ್ನು ತುಂಬಿ ಕೊಡುವವರು ಯಾರು? ಎನ್ನುವುದು ಚಂದ್ರು ಪ್ರಶ್ನೆ.

    ಚಂದ್ರು ಕೇಳಿದ valid ಪ್ರಶ್ನೆಗೆ ಕನ್ನಡ ಚಿತ್ರೋದ್ಯಮದಲ್ಲಿ ಸಂಬಂಧ ಪಟ್ಟವರು ಯಾರಾದರೂ ಇದ್ದರೆ ದಯವಿಟ್ಟು ಉತ್ತರಿಸಿ.

    ಮೈನಾ ಚಿತ್ರ ವಿಮರ್ಶೆ ಮೈನಾ ಚಿತ್ರ ವಿಮರ್ಶೆ

    ಚಾರ್ಮಿನಾರ್ ಚಿತ್ರ ವಿಮರ್ಶೆ ಚಾರ್ಮಿನಾರ್ ಚಿತ್ರ ವಿಮರ್ಶೆ

    English summary
    Theater problem continues for Kannada movies. Mynaa film released on Friday
 (Feb 22) where successfully running Charminar Kannada movies was screening.
    Saturday, February 23, 2013, 10:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X