Englishবাংলাગુજરાતીहिन्दीമലയാളംதமிழ்తెలుగు

ವಿಕೃತಕಾಮಿ 'ಉಮೇಶ್ ರೆಡ್ಡಿ' ಚಿತ್ರದ ಫಸ್ಟ್ ಲುಕ್

Posted by:
Published: Tuesday, February 19, 2013, 17:07 [IST]
 

ಕನ್ನಡ ಚಿತ್ರೋದ್ಯಮ ನೈಜ ಘಟನೆ ಆಧಾರಿತ ಚಿತ್ರಗಳ ಕಡೆಗೆ ಹೆಚ್ಚು ಒಲವು ತೋರಿಸುತ್ತಿರುವಂತಿದೆ. ನೈಜ ಘಟನೆಗಳನ್ನು ಆಧರಿಸಿ ಹೊಸ ಹೊಸ ಕಥೆಗಳನ್ನು ಹೆಣೆದು ರೀಲು ಸುತ್ತಲಾಗುತ್ತಿದೆ. ಕೆಲವು ಚಿತ್ರಗಳು ಸದ್ದು ಮಾಡುತ್ತಿವೆ. ಈಗ ಅಂತಹದ್ದೇ ಒಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ ನಿರ್ದೇಶಕ ಸಾಯಿಕೃಷ್ಣ.

ಅವರು ಕೈಗೆತ್ತಿಕೊಂಡಿರುವ ಚಿತ್ರದ ಹೆಸರು 'ಉಮೇಶ್ ರೆಡ್ಡಿ'. ಕರ್ನಾಟಕವನ್ನು ಬೆಚ್ಚಿ ಬೀಳಿಸಿದ್ದ ವಿಕೃತಕಾಮಿಯೊಬ್ಬನ ಕಥೆಯನ್ನು ಅವರು ಬೆಳ್ಳಿತೆರೆಗೆ ತರುತ್ತಿದ್ದಾರೆ. ಇದಕ್ಕಾಗಿ ಅವರು ಅವರು ಹಲವಾರು ತಿಂಗಳುಗಳ ಕಾಲ ಶ್ರಮಿಸಿ ಕಥೆಯನ್ನು ಹೆಣೆದಿದ್ದಾರೆ.

ವಿಕೃತಕಾಮಿ 'ಉಮೇಶ್ ರೆಡ್ಡಿ' ಚಿತ್ರದ ಫಸ್ಟ್ ಲುಕ್

ಚಿತ್ರದಲ್ಲಿ ಉಮೇಶ್ ರೆಡ್ಡಿಯಾಗಿ ನಟ ರವಿ ಕಾಳೆ ಕಾಣಿಸಲಿದ್ದಾರೆ. ಈಗಾಗಲೆ ಅವರು ವಿಲನ್, ಪೊಲೀಸ್ ಪಾತ್ರಗಳಿಂದ ಕನ್ನಡ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದಾರೆ. ಈಗವರು ವಿಕೃತಕಾಮಿಯಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇದೊಂದು ಚಾಲೆಂಜಿಂಗ್ ರೋಲ್ ಎನ್ನುತ್ತಾರೆ ರವಿ ಕಾಳೆ.

ಅಂದಹಾಗೆ ಉಮೇಶ್ ರೆಡ್ಡಿ ಹುಟ್ಟಿ ಬೆಳೆದದ್ದೆಲ್ಲಾ ಚಿತ್ರದುರ್ಗದಲ್ಲಿ. ಹಾಗಾಗಿ ನಿರ್ದೇಶಕರು ಅಲ್ಲೇ ಮುಹೂರ್ತ ನೆರವೇರಿಸಿದ್ದರು. ಹಾಗೆಯೇ ಆತ ಎಲ್ಲೆಲ್ಲಿ ಅಪರಾಧಗಳನ್ನು ಎಸೆದಿದ್ದಾನೋ ಅಲ್ಲಲ್ಲೇ ಚಿತ್ರೀಕರಿಸುವುದಾಗಿಯೂ ತಿಳಿಸಿದ್ದಾರೆ.

ಉಮೇಶ್ ರೆಡ್ಡಿಯ ಅಪರಾಧಗಳ ಜಾಡನ್ನು ಹುಡುಕುತ್ತಾ ಹೊರಟರೆ ಕಾಶ್ಮೀರ, ಪುಣೆಯಲ್ಲೂ ಚಿತ್ರೀಕರಣ ಮಾಡಬೇಕಾಗುತ್ತದೆ. ತಾವು ಅದಕ್ಕೂ ಸಿದ್ಧ ಎನ್ನುತ್ತಾರೆ ಚಿತ್ರದ ನಿರ್ಮಾಪಕ ರಮೇಶ್. ಚಿತ್ರದ ಪ್ರಮುಖ ಪಾತ್ರದಲ್ಲಿ ರೂಪಿಕಾ ಅಭಿನಯಿಸುತ್ತಿದ್ದಾರೆ. (ಏಜೆನ್ಸೀಸ್)

English summary
Ravi Kale will be playing the title role in forthcoming Kannada movie Umesh Reddy, a biopic on rapist and serial killer of the same name. It is his third film which is based on real-life incidents, after Cyanide and Dandupalya.
ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada
Subscribe Newsletter