twitter
    For Quick Alerts
    ALLOW NOTIFICATIONS  
    For Daily Alerts

    ನೊಂದ ಮನಗಳಿಗೆ ಮದ್ದಾದ ಜಗ್ಗೇಶ್ ಟಾಪ್ 9ಚಿತ್ರಗಳು

    |

    ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ಕಲಾವಿದ ನವರಸನಾಯಕ ಜಗ್ಗೇಶ್. ತುರುವೇಕೆರೆ ತಾಲೂಕು ಜಡೇ ಮಾಯಸಂದ್ರದಿಂದ ಕಲೆಯನ್ನು ಅರಸಿ ಬೆಂಗಳೂರಿಗೆ ಬಂದು ಕಷ್ಟಪಟ್ಟು ಚಿತ್ರರಂಗದಲ್ಲಿ ನೆಲೆಕಂಡ ಶ್ರಮಜೀವಿ.

    1986ರಲ್ಲಿ ಸಹಾಯಕ ನಿರ್ದೇಶಕ ಕೆ ವಿ ರಾಜು ಜಗ್ಗೇಶ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಸಣ್ಣ ಪಾತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಜಗ್ಗೇಶ್ ನಂತರ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು. ಖಳ ನಟನಾಗಿ, ಹಾಸ್ಯ ನಟನಾಗಿ ಕಾಣಿಸಿಕೊಂಡು ಕನ್ನಡದ ಅಮೂಲ್ಯ ಕಲಾರತ್ನರಾದರು.

    1989ರಲ್ಲಿ ಕಾಶೀನಾಥ್ ನಿರ್ದೇಶಿಸಿದ 'ಮನ್ಮಥ ರಾಜ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕರಾದ ಜಗ್ಗೇಶ್, 'ಆಡು ಮುಟ್ಟದ ಸೊಪ್ಪಿಲ್ಲ' ಎನ್ನುವ ಹಾಗೆ ಜಗ್ಗೇಶ್ ಮಾಡದ ಪಾತ್ರವಿಲ್ಲ ಎನ್ನುವಂತೆ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡರು.

    ಎದ್ದೇಳು ಮಂಜುನಾಥ

    ಎದ್ದೇಳು ಮಂಜುನಾಥ

    2009ರಲ್ಲಿ ಬಿಡುಗಡೆಯಾದ ಜಗ್ಗೇಶ್, ಗುರುಪ್ರಸಾದ್ ಕಾಂಬಿನೇಶನಿನ ಮತ್ತೊಂದು ಚಿತ್ರ. ಸನತ್ ಕುಮಾರ್ ನಿರ್ಮಿಸಿದ್ದ ಈ ಚಿತ್ರದಲ್ಲಿ ಯಜ್ಞಾ ಶೆಟ್ಟಿ, ತಬಲಾ ನಾಣಿ, ಎ ಎಸ್ ಮೂರ್ತಿ ಮತ್ತು ಒನ್ ಇಂಡಿಯಾ ಎಡಿಟರ್ ಶ್ಯಾಮ್ ಸುಂದರ್ ಉಳಿದ ತಾರಾಗಣದಲ್ಲಿದ್ದರು.

    ಮಠ

    ಮಠ

    2006ರಲ್ಲಿ ಗುರುಪ್ರಸಾದ್ ನಿರ್ದೇಶನದ ಚಿತ್ರ. ಈ ಚಿತ್ರ ನಿರ್ದೇಶಕರಿಗೆ ಯಾವ ಮಟ್ಟಿಗೆ ಹೆಸರು ತಂದು ಕೊಟ್ತಿತ್ತಂದರೆ ಚಿತ್ರ ಬಿಡುಗಡೆಯ ನಂತರ 'ಮಠ ಗುರುಪ್ರಸಾದ್' ಎಂದೇ ಜನಪ್ರಿಯರಾದರು. ಜಗ್ಗೇಶ್, ಸುದರ್ಶನ್, ವೈಜಯಂತ್ ಬಿರಾದರ್, ತಬಲಾ ನಾಣಿ, ಮಂಡ್ಯ ರಮೇಶ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ವಿ ಮನೋಹರ್ ಸಂಗೀತ ನೀಡಿದ್ದರು. ಜಗ್ಗೇಶ್ ಅವರ 100ನೇ ,ಮತ್ತು ವೈಜಯಂತ್ ಬಿರಾದರ್ ಅವರ 200ನೇ ಚಿತ್ರವಿದು.

    ಕುಬೇರ

    ಕುಬೇರ

    1999ರಲ್ಲಿ ಬಿಡುಗಡೆಯಾದ ಮತ್ತೊಂದು ಹಾಸ್ಯಪ್ರಧಾನ ಚಿತ್ರ. ಶಿವಮಣಿ ನಿರ್ಮಿಸಿ, ನಿರ್ದೇಶಿಸಿದ್ದ ಈ ಚಿತ್ರಕ್ಕೆ ರಾಜೇಶ್ ರಾಮನಾಥನ್ ಸಂಗೀತ ನೀಡಿದ್ದರು. ಜಗ್ಗೇಶ್, ದೊಡ್ಡಣ್ಣ, ನಗ್ಮಾ, ಉಮೇಶ್ ಪ್ರಮುಖ ತಾರಾಗಣದಲ್ಲಿದ್ದಾರೆ.

    ಇಂದ್ರನ ಗೆದ್ದ ನರೇಂದ್ರ

    ಇಂದ್ರನ ಗೆದ್ದ ನರೇಂದ್ರ

    1994ರಲ್ಲಿ ಶ್ರೀದೇವಿ ಪಿಚ್ಚರ್ಸ್ ಬ್ಯಾನರಿನಲ್ಲಿ ಮೂಡಿ ಬಂಡ ಚಿತ್ರ. ಓಂ ಸಾಯಿ ಪ್ರಕಾಶ್ ನಿರ್ದೇಶಿಸಿದ್ದ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಜಗ್ಗೇಶ್, ಶ್ರೀನಾಥ್, ದೊಡ್ಡಣ್ಣ, ಉಮಾಶ್ರೀ ರಮೇಶ್ ಭಟ್, ಪ್ರಮೀಳಾ ಜೋಷಾಯಿ ಮುಂತಾದ ಕಲಾವಿದರ ದಂಡೇ ಇದೆ.

    ಸೂಪರ್ ನನ್ ಮಗ

    ಸೂಪರ್ ನನ್ ಮಗ

    ಜಗ್ಗೇಶ್, ಬ್ಯಾಂಕ್ ಜನಾರ್ಧನ್ ಪ್ರಮುಖ ಪಾತ್ರದಲ್ಲಿರುವ ಚಿತ್ರ. ಜಗ್ಗೇಶ್ ಹೆಡ್ ಪೋಲೀಸ್ ಕಾನ್ಸ್ಟೇಬಲ್ ಮಗನ ಪಾತ್ರದಲ್ಲಿ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 1993ರಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು.

    ಸರ್ವರ್ ಸೋಮಣ್ಣ

    ಸರ್ವರ್ ಸೋಮಣ್ಣ

    1993ರಲ್ಲಿ ಬಿಡುಗಡೆಯಾದ ಈ ಚಿತ್ರದ ನಿರ್ದೇಶಕರು ಕೆ ವಾಸು. ಹರಿಪ್ರಸಾದ್ ನಿರ್ಮಿಸಿದ್ದ ಈ ಚಿತ್ರಕ್ಕೆ ರಾಜ್ - ಕೋಟಿ ಸಂಗೀತ ನೀಡಿದ್ದರು. ಜಗ್ಗೇಶ್, ರಂಭಾ, ಶಿವರಾಂ, ಅಭಿಜಿತ್ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ.

    ತರ್ಲೆ ನನ್ ಮಗ

    ತರ್ಲೆ ನನ್ ಮಗ

    1992ರಲ್ಲಿ ಬಿಡುಗಡೆಯಾದ ಉಪೇಂದ ನಿರ್ದೇಶನದ ಚಿತ್ರ. ವಿ ಮನೋಹರ್ ಸಂಗೀತ ನೀಡಿದ್ದ ಚಿತ್ರಕ್ಕೆ ಅಂಜಲಿ ಸುಧಾಕರ್ ನಾಯಕಿಯಾಗಿದ್ದರು. ಬ್ಯಾಂಕ್ ಜನಾರ್ಧನ್, ಸತ್ಯಭಾಮ, ಟೆನಿಸ್ ಕೃಷ್ಣ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರ ಜಗ್ಗೇಶ್ ವೃತ್ತಿ ಜೀವನದ ಸೂಪರ್ ಹಿಟ್ ಚಿತ್ರಗಳಲ್ಲೊಂದು.

    ಭಂಡ ನನ್ನ ಗಂಡ

    ಭಂಡ ನನ್ನ ಗಂಡ

    1992ರಲ್ಲಿ ಬಿಡುಗಡೆಯಾದ ಚಿತ್ರ. ಜಗ್ಗೇಶ್, ಅಂಬರೀಶ್, ಆಶಾಲತಾ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಜಗ್ಗೇಶ್ ಅಂಬರೀಶ್ ಪಕ್ಕ ಅಭಿಮಾನಿ. 1992ರಲ್ಲಿ ಯಶಸ್ಸು ಕಂಡ ಚಿತ್ರಗಳಲ್ಲಿ ಈ ಚಿತ್ರವೂ ಒಂದು.

    ಮನ್ಮಥರಾಜ

    ಮನ್ಮಥರಾಜ

    ಕಾಶೀನಾಥ್ ನಿರ್ದೇಶನದ ಈ ಚಿತ್ರ 1989ರಲ್ಲಿ ಬಿಡುಗಡೆಯಾಗಿತ್ತು. ಕಾಶೀನಾಥ್ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದರು. ಬಾಕ್ಸ್ ಆಫೀಸ್ ನಲ್ಲಿ ಈ ಚಿತ್ರ ಕೂಡಾ ಉತ್ತಮ ಗಳಿಕೆ ಕಂಡಿತ್ತು.

    1992ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿದ 'ತರ್ಲೆ ನನ್ಮಗ' ಚಿತ್ರ ಜಗ್ಗೇಶ್ ವೃತ್ತಿ ಜೀವನಕ್ಕೆ ಹೊಸ ತಿರುವು ನೀಡಿದ ಚಿತ್ರ. ಬಾಕ್ಸ್ ಆಫೀಸ್ ನಲ್ಲಿ ಹಿಗ್ಗಾಮುಗ್ಗಾ ಹಿಟ್ಟಾದ ಈ ಚಿತ್ರ ಜಗ್ಗೇಶ್ ಜೊತೆ ಉಪೇಂದ್ರಗೂ ಸ್ಟಾರ್ ನಿರ್ದೇಶಕ ಪಟ್ಟ ದಕ್ಕಿಸಿ ಕೊಟ್ಟಿತು.

    ಜಗ್ಗೇಶ್ ಪಾತ್ರದಲ್ಲಿ ತನ್ನನ್ನು ತೊಡಗಿಸಿ ಕೊಳ್ಳುತ್ತಿದ್ದ ರೀತಿ, ಹಾವಭಾವ, ಬಾಡಿ ಲಾಂಗ್ವೇಜ್ ಎಲ್ಲರೂ ಮೆಚ್ಚು ಕೊಳ್ಳುವಂತದ್ದು ಅಲ್ಲದೆ ಅವರಿಂದ ಕಲಿಯುವಂತದ್ದೂ ಕೂಡಾ. ರಾಘವೇಂದ್ರ ಸ್ವಾಮಿಯ ಮಹಾನ್ ಭಕ್ತರಾಗಿರುವ ಜಗ್ಗೇಶ್ ಡಾ.ರಾಜ್ ಮತ್ತು ರಜನೀಕಾಂತ್ ಅವರ ಅಪ್ಪಟ ಅಭಿಮಾನಿ ಕೂಡಾ.

    ನೊಂದ ಮನಗಳಿಗೆ ಅದೆಷ್ಟೋ ಬಾರಿ ಜಗ್ಗೇಶ್ ಹಾಸ್ಯ ದೃಶ್ಯಗಳು ಮದ್ದಾಗಿದೆ. ಉದಯ ಟಿವಿಯಲ್ಲಿ ಪ್ರಸಾರವಾದ 'ಕೈಯಲ್ಲಿ ಕೋಟಿ ಹೇಳ್ಬಿಟ್ಟು ಹೊಡೀರಿ' ಎನ್ನುವ ಕಾರ್ಯಕ್ರಮದ ನಿರೂಪಕರಾಗಿ ಜಗ್ಗೇಶ್ ಕಾಣಿಸಿಕೊಂಡಿದ್ದರು.

    ಜಗ್ಗೇಶ್, ಪರಿಮಳಾ ದಂಪತಿಗಳಿಗೆ ಯತಿರಾಜ್ ಮತ್ತು ಗುರುರಾಜ್ ಎನ್ನುವ ಇಬ್ಬರು ಮಕ್ಕಳು. ಇಬ್ಬರೂ ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದುವರೆಗೆ ಜಗ್ಗೇಶ್ 115 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಬಿಜೆಪಿಯಿಂದ ನಾಮನಿರ್ದೆಶಕರಾಗಿರುವ (ವಿಧಾನಪರಿಷತ್ತು) ಜಗ್ಗೇಶ್, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷರೂ ಆಗಿದ್ದಾರೆ.

    ಗುರುರಾಯರ ಆಶೀರ್ವಾದ ಕನ್ನಡ ಚಿತ್ರರಂಗ ಕಂಡ ಉತ್ತಮ ಕಲಾವಿದನ ಮೇಲಿರಲಿ, ಕನ್ನಡ ಚಿತ್ರರಸಿಕರನ್ನೂ ರಂಜಿಸುತ್ತಿರಲಿ. ಟಚಿಂಗ್.. ಟಚಿಂಗ್.. ಐತಲಕಡಿ ಜುಮ್ಮಾ...

    ನೀವು ನೋಡಿದ ಜಗ್ಗೇಶ್ ಚಿತ್ರಗಳಲ್ಲಿ ನಿಮಗಿಷ್ಟವಾದ ಚಿತ್ರಯಾವುದು?

    English summary
    Top nine films of Navarasa nayaka Jaggesh. Jaggesh has started his career in 1989 with film Manmatha Raja.
    Sunday, January 20, 2013, 13:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X