Englishবাংলাગુજરાતીहिन्दीമലയാളംதமிழ்తెలుగు

ಬದಲಾದ 'ಡರ್ಟಿ ಪಿಚ್ಚರ್ ' ಹೆಸರು ಸಖತ್ ಆಗಿದೆ ಮಗಾ !

Posted by:
Updated: Monday, January 7, 2013, 13:45 [IST]
 

ಬದಲಾದ 'ಡರ್ಟಿ ಪಿಚ್ಚರ್ '  ಹೆಸರು ಸಖತ್ ಆಗಿದೆ  ಮಗಾ !

ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ 'ಡರ್ಟಿ ಪಿಚ್ಚರ್' ಟೈಟಲ್ ಬದಲಿಸುವಂತೆ ಬಾಂಬೆ ಹೈಕೋರ್ಟ್ ಕನ್ನಡದ ನಿರ್ಮಾಪಕರಿಗೆ ಸೂಚಿಸಿದೆ.

ಹಿಂದಿಯಲ್ಲಿ ವಿದ್ಯಾ ಬಾಲನ್ ನಟಿಸಿದ್ದ 'ದಿ ಡರ್ಟಿ ಪಿಚ್ಚರ್' ಹೆಸರನ್ನು ಕನ್ನಡದಲ್ಲಿ ಬಳಸದಂತೆ ನಿರ್ಮಾಪಕಿ ಏಕ್ತಾ ಕಪೂರ್ ಕೋರ್ಟ್ ಮೆಟ್ಟಲೇರಿದ್ದರು. ಈಗ ನ್ಯಾಯಾಲಯ ತೀರ್ಪು ನೀಡಿದ್ದು 'ದಿ ಡರ್ಟಿ ಪಿಚ್ಚರ್' ಟೈಟಲ್ ಬಳಸಬೇಡಿ ಎಂದು ಕನ್ನಡದಲ್ಲಿ ಚಿತ್ರ ನಿರ್ಮಿಸುತ್ತಿರುವ ಅಕ್ಷಯ್ ಪ್ರೊಡಕ್ಷನ್ ಬ್ಯಾನರಿಗೆ ಆದೇಶ ನೀಡಿದೆ.

ಈಗ ಚಿತ್ರತಂಡ ಡರ್ಟಿ ಪಿಚ್ಚರ್ ಬದಲು 'ಸಿಲ್ಕ್' ಎಂಬ ಟೈಟಲ್ ಇಟ್ಟು 'ಸಖತ್ ಹಾಟ್ ' ಎಂದು ಟ್ಯಾಗ್ ಲೈನ್ ಇಡಲು ನಿರ್ಧರಿಸಿದೆ.

ಕೋರ್ಟ್ ನೀಡಿರುವ ತೀರ್ಪಿಗೆ ನಾವು ಬದ್ದ. ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರಲಿದ್ದೇವೆ. ಬಾಂಬೆ ಕೋರ್ಟಿಗೆ ನಮ್ಮ ಚಿತ್ರದ ಸ್ಕ್ರಿಪ್ಟ್ ಕೂಡಾ ನೀಡಿದ್ದೆವು. ಕೋರ್ಟ್ ಆದೇಶದ ವಿರುದ್ದ ಕಾನೂನು ಹೋರಾಟ ನಡೆಸುವಷ್ಟು ನಮಗೆ ಸಮಯಾವಕಾಶವಿಲ್ಲ ಚಿತ್ರದ ನಿರ್ದೇಶಕ ತ್ರಿಶೂಲ್ ಹೇಳಿದ್ದಾರೆ.

ನಮ್ಮ ಚಲನಚಿತ್ರಮಂಡಳಿ ಕೋರ್ಟ್ ವಿಚಾರದಲ್ಲಿ ನಮಗೆ ಸಹಕಾರ ನೀಡಲಿಲ್ಲ. ಕೋರ್ಟ್ ಸಮಸ್ಯೆಯನ್ನು ಬಗೆಹರಿಸಲು ಟಿಪ್ಸ್ ಕೂಡಾ ನೀಡಿಲ್ಲ ಎಂದು ನಿರ್ದೇಶಕರು ಬೇಸರ ವ್ಯಕ್ತಪಡಿಸಿದ್ದಾರೆ.

ಏನಾದರೂ ಮಾಡಿಕೊಳ್ಳಿ, ಒಟ್ಟಿನಲ್ಲಿ ವೀಣಾ ಮಲಿಕ್ ಮೈಮಾಟ, ಲಿಪ್ ಲಾಕ್ ದೃಶ್ಯಗಳಿಗೆ ಮಾತ್ರ ಕತ್ತರಿ ಹಾಕಬೇಡಿ ಎಂದು ಪಡ್ಡೆಗಳು ಅಭಿಪ್ರಾಯ ಪಟ್ಟರೆ ಆಶ್ಚರ್ಯ ಪಡಬೇಕಾಗಿಲ್ಲ

So, ಡರ್ಟಿ ಪಿಚ್ಚರ್ ಹೋಗಿ ' ಸಿಲ್ಕ್ - ಸಖತ್ ಹಾಟ್ ' ಎಂದು ಚಿತ್ರದ ಹೆಸರು ಬದಲಾಗಿದೆ.

Story first published:  Monday, January 7, 2013, 13:21 [IST]
English summary
As per Bombay High Court order, Kannada 'Dirty Picture' renamed as 'Silk Sakat Hot'.
ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada
Subscribe Newsletter
Coupons