ಸರ್ಜಾ ಕುಟುಂಬದ ಮತ್ತೊಂದು ಕುಡಿ ಬೆಳ್ಳಿಪರದೆ ಅಲಂಕರಿಸುತ್ತಿದೆ. ಈಗಾಗಲೆ ಅರ್ಜುನ್ ಸರ್ಜಾ ಅವರ ಸೋದರಳಿಯರಾದ ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದಾರೆ. ಈಗ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅರ್ಜುನ್ ಎಂಟ್ರಿ ಕೊಡುತ್ತಿದ್ದಾರೆ.
ತಮಿಳಿನ ವಿಶಾಲ್ ಕೃಷ್ಣ ಅವರ ಜೊತೆ ಐಶ್ವರ್ಯಾ ಅವರು ಅಭಿನಯಿಸಲಿದ್ದಾರೆ. ಭೂಪತಿ ಪಾಂಡ್ಯನ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ 'ಪಟ್ಟಥು ಯಾನೈ' (ಪಟ್ಟದ ಆನೆ) ಎಂದು ಹೆಸರಿಡಲಾಗಿದೆ. ಈ ಚಿತ್ರದ ನಾಯಕಿ ಐಶ್ವರ್ಯಾ ಅವರ ಲೇಟೆಸ್ಟ್ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ.
ಇದೇ ಗುರುವಾರ (ಜ.3) ಅರ್ಜುನ್ ಸರ್ಜಾ ಅವರು ತಮ್ಮ ಪುತ್ರಿ ಐಶ್ವರ್ಯಾ ಅವರನ್ನು ಮಾಧ್ಯಮಗಳಿಗೆ ಪರಿಚಯಿಸಿದರು. ಇದೇ ಸಂದರ್ಭದಲ್ಲಿ ಐಶ್ವರ್ಯಾ ಅವರ ಲೇಟೆಸ್ಟ್ ಫೋಟೋಗಳನ್ನು ಮಾಧ್ಯಮಗಳಿಗೆ ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಚಿತ್ರದಲ್ಲಿ ಆ ಫೋಟೋಗಳನ್ನು ಕಾಣಬಹುದು.









































