twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡಕ್ಕೆ ಜೋಳದ ರೊಟ್ಟಿಯಾದ ತಮಿಳು ಪಿಜ್ಜಾ

    By Rajendra
    |

    Pizza movie still
    ತಮಿಳು, ತೆಲುಗು, ಮಲಯಾಳಂ ಭಾಷೆಗಳಿಂದ ಸಾಕಷ್ಟು ಚಿತ್ರಗಳು ಕನ್ನಡಕ್ಕೆ ರೀಮೇಕ್ ಆಗಿವೆ, ಆಗುತ್ತಿವೆ. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಎರವಲು ಪಡೆಯುತ್ತಿರುವುದು ಸಾಮಾನ್ಯ. ಈಗ ಈ ಪಟ್ಟಿಗೆ ಮತ್ತೊಂದು ತಮಿಳು ಚಿತ್ರ 'ಪಿಜ್ಜಾ' ಹೊಸ ಸೇರ್ಪಡೆ. ಈ ಚಿತ್ರದ ಕನ್ನಡ ರೀಮೇಕ್ ರೈಟ್ಸ್ ನಿರ್ದೇಶಕ ಪ್ರಶಾಂತ್ ರಾಜ್ ಪಾಲಾಗಿವೆ.

    ತಮಿಳಿನ ಪೊರಾಲಿ, ಕಾದಲ್ ಅಂಡ್ ಕಲಾವಣಿ, ನಾಡೋಡಿಗಳ್ ಚಿತ್ರಗಳು ಕನ್ನಡಕ್ಕೆ ರೀಮೇಕ್ ಆಗಿವೆ. 'ಪಿಜ್ಜಾ' ಚಿತ್ರ ಲೋ ಬಜೆಟ್ ಚಿತ್ರವಾದರೂ ಕಥೆಯ ದೃಷ್ಟಿಯಿಂದ ವಿಭಿನ್ನ ಪ್ರಯತ್ನ ಎನ್ನಬಹುದು. ಈ ಚಿತ್ರ ಕನ್ನಡಕ್ಕೆ ಭರ್ಜರಿ ಜೋಳದ ರೊಟ್ಟಿಯೇ ಆಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

    'ಲವ್ ಗುರು' ಚಿತ್ರವನ್ನು ನಿರ್ದೇಶಿಸಿದ್ದ ಪ್ರಶಾಂತ್ ರಾಜ್ ಅವರು 'ಪಿಜ್ಜಾ' ಚಿತ್ರದ ಕನ್ನಡ ರೀಮೇಕ್ ಹಕ್ಕುಗಳನ್ನು ರು.35 ಲಕ್ಷಕ್ಕೆ ಕೊಂಡುಕೊಂಡಿದ್ದಾರೆ. ಕನ್ನಡಕ್ಕೆ ಹೊಂದುವಂತೆ ಕಥೆಯಲ್ಲಿ ಅಲ್ಪಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡು ಚಿತ್ರವನ್ನು ಆರಂಭಿಸುವುದಾಗಿ ಹೇಳಿದ್ದಾರೆ. ಹಾಗಾಗಿ ಇನ್ನೂ ಚಿತ್ರಕ್ಕೆ ಶೀರ್ಷಿಕೆ, ಪಾತ್ರಗಳ ಆಯ್ಕೆ ಇನ್ನಷ್ಟೇ ನಡೆಯಬೇಕು.

    ಅಂದಹಾಗೆ ಕಥೆ ಏನೆಂದರೆ... ಪಿಜ್ಜಾ ಡೆಲಿವರಿ ಬಾಯ್ ಒಬ್ಬ ಗ್ರಾಹಕನೊಬ್ಬನಿಗೆ ಪಿಜ್ಜಾ ಡೆಲಿವರಿ ಮಾಡಲು ಹೋಗಿ ಇಕ್ಕಟ್ಟಿಗೆ ಸಿಕ್ಕಿಬೀಳುವ ಕಥಾವಸ್ತುವೇ ಪಿಜ್ಜಾ. ವಿಜಯ್ ಸೇಥುಪತಿ ಹಾಗೂ ರಮ್ಯಾ ನಂಬೀಸನ್ ಅಭಿನಯದ ಚಿತ್ರಕ್ಕೆ ಕಾರ್ತಿಕ್ ಸುಬ್ಬರಾಜ್ ಆಕ್ಷನ್ ಕಟ್ ಹೇಳಿರುವ ಚಿತ್ರ. ಇದೇ ಚಿತ್ರದ ತೆಲುಗು ರೀಮೇಕ್ ರೈಟ್ಸ್ ರು.72 ಲಕ್ಷಕ್ಕೆ ಮಾರಾಟವಾಗಿವೆ. (ಏಜೆನ್ಸೀಸ್)

    English summary
    Tamil hit film Pizza to be remade in Kannada. Director Prashanth Raj of Love Guru fame has acquired the Kannada rights of Pizza. As per the reports, the rights cost Rs 35 lakhs. However, the cast and crew are yet to be picked but the director has claimed that the story will be modified to suit the taste of the local audience.
    Monday, November 19, 2012, 15:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X