ಇನ್ನೇನು ಡಿಸೆಂಬರ್ ಹೊತ್ತಿಗೆ ಪ್ರೇಕ್ಷಕರ ಮುಂದೆ ಬರಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೊಚ್ಚ ಹೊಸ ಚಿತ್ರ 'ಯಾರೇ ಕೂಗಾಡಲಿ' ಸಿದ್ಧವಾಗುತ್ತಿದೆ. ಈ ಚಿತ್ರ ತಮಿಳಿನ ಯಶಸ್ವಿ 'ಪೊರಾಲಿ' ಚಿತ್ರದ ರೀಮೇಕ್. ಆದರೂ ಕನ್ನಡದಲ್ಲಿ ಹೇಗೆ ಮೂಡಿಬಂದಿರಬಹುದು, ಪುನೀತ್ ಅಭಿನಯ ಹೇಗಿರಬಹುದು ಎಂಬ ಬಗ್ಗೆ ಕುತೂಹಲ ಇದ್ದೇ ಇದೆ.
ಮೂಲ ಚಿತ್ರವನ್ನು ನಿರ್ದೇಶಿಸಿದ್ದ ಸಮುದ್ರ ಖಣಿ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ಡಿಸೆಂಬರ್ 21ಕ್ಕೆ ತೆರೆಕಾಣುವ ಸಾಧ್ಯತೆಗಳಿವೆ. 'ಹುಡುಗರು' ಚಿತ್ರದ ಬಳಿಕ ಮತ್ತೊಮ್ಮೆ ಲೂಸ್ ಮಾದ ಯೋಗೇಶ್ ಅವರು ಪುನೀತ್ ಗೆ ಈ ಚಿತ್ರದಲ್ಲೂ ಸಾಥ್ ನೀಡಿದ್ದಾರೆ.
ಪೂರ್ಣಿಮಾ ಎಂಟರ್ ಪ್ರೈಸಸ್ ಲಾಂಛನದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ನಾಯಕಿ ಭಾವನಾ. ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರು ಈ ಚಿತ್ರದಲ್ಲಿ ವಿಶೇಷ ಪಾತ್ರವನ್ನು ಪೋಷಿಸಿದ್ದಾರೆ.
ವರನಟ ಡಾ.ರಾಜ್ ಕುಮಾರ್ ಅಭಿನಯದ 'ಸಂಪತ್ತಿಗೆ ಸವಾಲ್' ಚಿತ್ರದಲ್ಲಿನ ಜಯಪ್ರಿಯ ಗೀತೆ "ಯಾರೇ ಕೂಗಾಡಲಿ ಊರೇ ಹೋರಾಡಲಿ...". ಈ ಹಾಡಿನ ಸಾಲನ್ನೇ ಚಿತ್ರಕ್ಕೆ ಶೀರ್ಷಿಕೆಯಾಗಿ ಇಡಲಾಗಿದೆ. ವಿ ಹರಿಕೃಷ್ಣ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಈ ಚಿತ್ರದ ಲೇಟೆಸ್ಟ್ ಫೋಟೋಗಳು ಇಲ್ಲಿವೆ ನೋಡಿ.

































