ಕನ್ನಡ ಚಿತ್ರ 'ಕೊಟ್ಲಲ್ಲಪ್ಪೋ ಕೈ' ನಾಯಕಿ ನಟಿ ನಯನಾ ಕೃಷ್ಣ ಅವರು ನಿನ್ನೆ (03 ನವೆಂಬರ್ 2012) ತಮ್ಮ ಕೊಟ್ಲಲ್ಲಪ್ಪೋ ಕೈ ಚಿತ್ರದ ಸುದ್ದಿಗೋಷ್ಠಿ ವೇಳೆ ನಿರ್ದೇಶಕ ರಿಷಿ ಅವರಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ. ನಂತರ ಈ ಸಂಬಂಧ ನಿರ್ದೇಶಕ ಪಕ್ಕದಲ್ಲಿಯೇ ಇದ್ದ ಉಪ್ಪಾರ ಠಾಣೆ ಪೊಲೀಸ್ ಸ್ಟೇಷನ್ನಿನಲ್ಲಿ ದೂರು ದಾಖಲಿಸಿದ್ದರಿಂದ ನಟಿ ನಯನಾ ಕೃಷ್ಣರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಗಿದೆ. ನಿನ್ನೆ ಚಿತ್ರದ ಸುದ್ದಿಗೋಷ್ಠಿಯಲ್ಲಿ ತಮ್ಮಿಂದ ತೆಗೆದುಕೊಂಡ ಹಣವನ್ನು ವಾಪಸ್ ನೀಡಿಲ್ಲ ಎಂಬ ಕಾರಣಕ್ಕೆ ನಟಿ ನಯನಾ ಕೃಷ್ಣ ನಿರ್ದೇಶಕ ರಿಷಿಗೆ ಚಪ್ಪಲಿಯಿಂದ ಹೊಡೆದಿದ್ದರು,
ಪ್ರಾರಂಭವಾದಾಗಿನಿಂದಲೂ ಆಗಾಗ ವಿವಾದದ ಸುಳಿಯಲ್ಲಿಯೇ ಸಿಲುಕಿದ್ದ 'ಕೊಟ್ಲಲ್ಲಪ್ಪೋ ಕೈ' ಚಿತ್ರಕ್ಕೆ ಬರೋಬ್ಬರಿ 10 ರಿಂದ 12 ಜನ ನಿರ್ಮಾಪಕರು ಎಂಬುದೇ ಸಾಕಷ್ಟು ಅಚ್ಚರಿಯ ಸಂಗತಿಯಾಗಿದೆ. ಚಿತ್ರದ ನಾಯಕಿ ನಯನಾ ಕೃಷ್ಣ ಅವರು ಚಿತ್ರದ ನಿರ್ದೇಶಕ ರಿಷಿ ಅವರಿಗೆ ಚಿತ್ರಕ್ಕಾಗಿ ರು. 8 ಲಕ್ಷ ನೀಡಿದ್ದರಂತೆ. ಆಗ, ಹಣ ವಾಪಸ್ ನೀಡಬೇಕು ಅಥವಾ ಅದಕ್ಕೆ ಪ್ರತಿಯಾಗಿ ಕೆಲವು ಏರಿಯಾದ ವಿತರಣೆ ಹಕ್ಕನ್ನು ನೀಡಬೇಕೆಂದು ಷರತ್ತು ವಿಧಿಸಿದ್ದರು ಎನ್ನಲಾಗಿದೆ.
ಆದರೆ ಚಿತ್ರೀಕರಣ ಮುಗಿದು ಸೆನ್ಸಾರ್ ಆಗಿ, ಚಿತ್ರ ಬಿಡುಗಡೆ ಹಂತಕ್ಕೆ ಬಂದಿದ್ದರೂ ತಮಗೆ ಬರಬೇಕಿದ್ದ ಹಣ ವಾಪಸ್ ಬಂದಿಲ್ಲ, ಏರಿಯಾ ಹಕ್ಕನ್ನೂ ನೀಡುತ್ತಿಲ್ಲ. ಕೇಳಿದರೆ ಹೆಣ್ಣು ಮಗಳು ಎಂಬ ಅನುಕಂಪವೂ ಇಲ್ಲದೇ ಬಾಯಿಗೆ ಬಂದಂತೆ ಅಸಭ್ಯವಾಗಿ ಮಾತನಾಡುತ್ತಾರೆ ನಿರ್ದೇಶಕ ರಷಿ ಎಂಬುದು ನಿನ್ನೆ ಸುದ್ದಿಗೋಷ್ಠಿಯಲ್ಲಿ ನಟಿ ನಯನಾ ಕೃಷ್ಣ ಮಾಡಿದ ಆರೋಪ. ಅಲ್ಲಿಯೇ ನಡೆದ ಸಾಕಷ್ಟು ವಾದವಿವಾದಗಳ ನಂತರ ನಿನ್ನೆ ಈ 'ಚಪ್ಪಲಿ ಸೇವೆ' ರಾದ್ಧಾಂತ ನಡೆದಿತ್ತು. ಈ ಸುದ್ದಿಗೋಷ್ಠಿಯ ಚಿತ್ರಗಳನ್ನು ನೋಡಿ...












































