twitter
    For Quick Alerts
    ALLOW NOTIFICATIONS  
    For Daily Alerts

    ಚಿರಂಜೀವಿ ವಿರುದ್ಧ ಗಂಭೀರ ಆರೋಪ ಮಾಡಿದ್ದ ಸ್ಟಾರ್ ದಂಪತಿಗೆ 12 ವರ್ಷಗಳ ಬಳಿಕ ಜೈಲು ಶಿಕ್ಷೆ!

    |

    ಚಿರಂಜೀವಿ ತೆಲುಗು ಚಿತ್ರರಂಗದ ಮೆಗಾಸ್ಟಾರ್. ಚಿತ್ರರಂಗದಲ್ಲಿ ಯಾವುದಾದರೂ ವಿವಾದವಾದರೆ ಅಥವಾ ಮನಸ್ತಾಪಗಳಾದರೆ ಅದಕ್ಕೆ ಪರಿಹಾರ ಹುಡುಕುವ ಹಾಗೂ ಸಂಧಾನ ಮಾಡುವ ಜವಾಬ್ದಾರಿ ಹೊತ್ತಿರುವ ನಟ ಚಿರಂಜೀವಿ. ಇಂತಹ ಉನ್ನತ ಸ್ಥಾನದಲ್ಲಿರುವ ಚಿರಂಜೀವಿ ವಿರುದ್ಧವೇ ವಿವಾದವೊಂದನ್ನು ಎಬ್ಬಿಸಿತ್ತು ಅದೇ ತೆಲುಗು ಚಿತ್ರರಂಗದ ನಟ ಹಾಗೂ ನಟಿ ದಂಪತಿ ಮಾಡಿದ್ದ ಒಂದು ದೊಡ್ಡ ಆರೋಪ.

    ಹೌದು, ನಟ ಚಿರಂಜೀವಿ ಒಡೆತನದ ರಕ್ತ ನಿಧಿ ( ಚಿರಂಜೀವಿ ಬ್ಲಡ್ ಬ್ಯಾಂಕ್ ) ವಿರುದ್ಧ ರಾಜಶೇಖರ್ ಹಾಗೂ ಜೀವಿತಾ ದಂಪತಿ 2011ರಲ್ಲಿ ಗಂಭೀರ ಆರೋಪವನ್ನು ಮಾಡಿದ್ದರು. ಚಿರಂಜೀವಿ ಬ್ಲಡ್ ಬ್ಯಾಂಕ್ ನಿಯಮವನ್ನು ಮೀರಿ ವರ್ತಿಸುತ್ತಿದೆ, ಅಲ್ಲಿ ಶೇಕರಿಸಲಾದ ರಕ್ತವನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ರಾಜಶೇಖರ್ ಹಾಗೂ ಜೀವಿತಾ ಮಾಡಿದ್ದ ಈ ಆರೋಪದಿಂದ ಮೆಗಾಸ್ಟಾರ್ ಫ್ಯಾನ್ಸ್ ಕೆಂಡಾಮಂಡಲವಾಗಿದ್ದರು.

    Actor Rajashekhar and his wife Jeevitha sentenced to 1 year jail in Chiranjeevi Blood bank case

    ಹೀಗೆ ರಾಜಶೇಖರ್ ಹಾಗೂ ಜೀವಿತಾ ಚಿರಂಜೀವಿ ಬ್ಲಡ್ ಬ್ಯಾಂಕ್ ವಿರುದ್ಧ ಮಾಡಿದ ಆರೋಪದ ವಿರುದ್ಧ ಸಿಡಿದೆದ್ದಿದ್ದ ಚಿರಂಜೀವಿ ಸಂಬಂಧಿ ಅಲ್ಲು ಅರವಿಂದ್ ಕಾನೂನು ಹೋರಾಟಕ್ಕೆ ಮುಂದಾಗಿದ್ದರು. ರಾಜಶೇಖರ್ ಹಾಗೂ ಜೀವಿತಾ ಹೇಳಿಕೆ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು.

    ಅಂದು ಹೂಡಿದ್ದ ಮೊಕದ್ದಮೆಗೆ ನಿನ್ನೆ ( ಜುಲೈ 18 ) ನಾಂಪಲ್ಲಿ ನ್ಯಾಯಾಲಯ ತೀರ್ಪನ್ನು ನೀಡಿದ್ದು, ರಾಜಶೇಖರ್ ಹಾಗೂ ಜೀವಿತಾಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 5 ಲಕ್ಷ ದಂಡ ವಿಧಿಸಿದೆ. ಆದರೆ ದಂಪತಿ ಜಾಮೀನು ಪಡೆದುಕೊಂಡಿದ್ದು, ಸದ್ಯ ಉನ್ನತ ನ್ಯಾಯಾಲಯದಲ್ಲಿ ಈ ತೀರ್ಪನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಬಹುದಾಗಿದೆ.

    ಇನ್ನು ರಾಜಶೇಖರ್ ಹಾಗೂ ಚಿರಂಜೀವಿ ನಡುವೆ ಎಲ್ಲವೂ ಸರಿ ಇಲ್ಲ ಎಂಬ ವಿಷಯ ತೆಲುಗು ಸಿನಿ ರಸಿಕರಿಗೆ ಹಾಗೂ ಕಲಾವಿದರಿಗೆ ತಿಳಿದಿರುವ ವಿಷಯವೇ. ಈ ಹಿಂದೆ 2020ರಲ್ಲಿ ನಡೆದಿದ್ದ ತೆಲುಗು ಚಿತ್ರರಂಗದ ಕಲಾವಿದರ ಸಂಘ 'ಮಾ' ಕಾರ್ಯಕ್ರಮದಲ್ಲಿಯೂ ಸಹ ಈ ಇಬ್ಬರ ನಡುವೆ ವಾಕ್ಸಮರ ನಡೆದಿತ್ತು. ಈ ಸಂದರ್ಭದಲ್ಲಿ ನರೇಶ್ ಅಧ್ಯಕ್ಷರಾಗಿದ್ದರು.

    ಚಿರಂಜೀವಿ ಭಾಷಣ ಮಾಡುತ್ತಾ 'ಮಾ' ಕುರಿತು ಯಾರಾದರೂ ಒಳ್ಳೆಯದನ್ನು ಹೇಳಬೇಕೆಂದರೆ ಮೈಕ್‌ನಲ್ಲಿ ಹೇಳೋಣ, ಹಾಗೆಯೇ ಕೆಟ್ಟದ್ದೇನಾದರೂ ಇದ್ದರೆ ಅದನ್ನು ಕಿವಿಯಲ್ಲಿ ಹೇಳಿಕೊಳ್ಳೋಣ ಎಂದು ಹೇಳಿದ್ದರು.

    ಈ ಹೇಳಿಕೆ ಬರುತ್ತಿದ್ದಂತೆಯೇ ಎದ್ದ ರಾಜಶೇಖರ್ ಚಿರಂಜೀವಿ ಸೇರಿದಂತೆ ವೇದಿಕೆ ಮೇಲಿದ್ದ ಹಲವರ ಕಾಲನ್ನು ಮುಟ್ಟಿ ನಮಸ್ಕರಿಸಿ ಬಳಿಕ 'ಮಾ'ನಿಂದ ನನಗೆ ಹೆಚ್ಚೇನೂ ಒಳ್ಳೆಯದಾಗಿಲ್ಲ. ಮಾ ಬಗ್ಗೆ ಹಲವರಿಗೆ ಅಸಮಾಧಾನವಿದೆ, ಆದರೆ ಯಾರೂ ಸಹ ಅದನ್ನು ಹೇಳಿಕೊಳ್ಳಲು ಮುಂದೆ ಬರುತ್ತಿಲ್ಲ. ಮಾ ಒಡೆದು ಇಬ್ಭಾಗವಾಗಿದೆ, ಅದು ಯಾರಿಗೂ ಅರ್ಥವಾಗುತ್ತಿಲ್ಲ ಎಂದಿದ್ದರು.

    English summary
    Actor Rajashekhar and his wife Jeevitha sentenced to 1 year jail in Chiranjeevi Blood bank casea. Read on
    Wednesday, July 19, 2023, 12:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X