twitter
    For Quick Alerts
    ALLOW NOTIFICATIONS  
    For Daily Alerts

    ಡಾ.ವಿಷ್ಣು ಹುಟ್ಟುಹಬ್ಬ ಐದು ವಿಶೇಷ ಕಾರ್ಯಕ್ರಮಗಳು

    By Rajendra
    |

    ಅಭಿನಯದಲ್ಲಿ ಸರಿಸಾಟಿಯಿಲ್ಲದಂತೆ, ವ್ಯಕ್ತಿತ್ವದಲ್ಲಿ ಮೇರು ಮಟ್ಟ ತಲುಪಿ ಅಭಿಮಾನಿಗಳ ಆರಾಧ್ಯ ದೈವವಾಗಿ ಕನ್ನಡಿಗರ ಮನೆ, ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ನಟ ಸಾಹಸಸಿಂಹ ಡಾ.ವಿಷ್ಣುವರ್ಧನ್. ಅವರ ಹುಟ್ಟುಹಬ್ಬದ (ಸೆ.18) ಹಿನ್ನೆಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಅವುಗಳ ಮೇಲೊಂದು ಇಣುಕು ನೋಟ.

    ಸಾಹಸಸಿಂಹ ಡಾ. ವಿಷ್ಣುವರ್ಧನ್ ಇಂದು ನಮ್ಮೊಂದಿಗೆ ಇದ್ದಿದ್ದರೆ ತಮ್ಮ 62ನೇ ಹುಟ್ಟುಹಬ್ಬವನ್ನು (ಸೆಪ್ಟೆಂಬರ್ 18, 2012) ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡು ಸಂಭ್ರಮಿಸುತ್ತಿದ್ದರು. ಅಭಿಮಾನಿಗಳ ಪಾಲಿಗೆ ಇದಕ್ಕಿಂತಲೂ ಸಂಭ್ರಮ ಇರುತ್ತಿರಲಿಲ್ಲ.

    ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಜನಶಕ್ತಿ ಜನಕಲ್ಯಾಣ

    ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಜನಶಕ್ತಿ ಜನಕಲ್ಯಾಣ

    ವಿಷ್ಣು 62ನೇ ಜನ್ಮ ದಿನ ಪ್ರಯುಕ್ತ 'ಜನಶಕ್ತಿ-ಜನಕಲ್ಯಾಣ' ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸಾ ಶಿಬಿರಗಳು (ದಂತ, ಇಸಿಜಿ, ನೇತ್ರ ಶಸ್ತ್ರಚಿಕಿತ್ಸೆಗಳು), ಉಚಿತ ಸಾಮಾನ್ಯ ಔಷಧಿಗಳ ವಿತರಣೆ, ಕೃತಕ ಅವಯವಗಳ ವಿತರಣೆ, ಹಿರಿಯ ನಾಗರೀಕರ ಕಾರ್ಡ್ ವಿತರಣೆ, ಹೃದ್ರೋಗಿಗಳಿಗೆ ರಿಯಾಯಿತಿ ದರದಲ್ಲಿ ಶುಶ್ರೂಷೆ ಹಾಗೂ ವಿವಿಧ ಸರ್ಕಾರೇತರ ಸಂಸ್ಥೆಗಳಿಂದ ಸಾಮಾಜಿಕ ವಿಷಯಗಳನ್ನು ಕುರಿತಾದ ಮಾಹಿತಿ ನೀಡಲಾಗುತ್ತದೆ. ಸ್ಥಳ: ಅಭಿಮಾನ ಸ್ಟುಡಿಯೋ, ಸೆಪ್ಟೆಂಬರ್ 18, 2012, ಬೆಳಗ್ಗೆ 8.30ರಿಂದ ಸಂಜೆ 4 ಗಂಟೆಯವರೆಗೆ.

    ಡಾ.ವಿಷ್ಣುವರ್ಧನ್ ಜಾತ್ರಾ ಮೆರವಣಿಗೆ

    ಡಾ.ವಿಷ್ಣುವರ್ಧನ್ ಜಾತ್ರಾ ಮೆರವಣಿಗೆ

    ನ್ಯಾಷನಲ್ ಕಾಲೇಜು, ಬಸವನಗುಡಿಯಿಂದ ಅಭಿಮಾನ ಸ್ಟುಡಿಯೋವರೆಗೆ ಡಾ.ವಿಷ್ಣುವರ್ಧನ್ ಜಾತ್ರಾ ಮೆರವಣಿಗೆ, ಸೆಪ್ಟೆಂಬರ್ 18, 2012, ಬೆಳಗ್ಗೆ 8.30ರಿಂದ. ಈ ಎಲ್ಲಾ ಕಾರ್ಯಕ್ರಮಗಳ ಪ್ರಾಯೋಜಕರು ಲಯನ್ಸ್ ಕ್ಲಬ್, ಅದಮ್ಯ ಚೇತನ, ನಾರಾಯಣ ಹೃದಯಾಲಯ ಆಸ್ಪತ್ರೆ, ಚೈಲ್ಡ್ ಲೈನ್, ಎಚ್ ಸಿಜಿ, ಮೊಬಿಲಿಟಿ ಇಂಡಿಯಾ, ನೇಚರ್ ಮೆರಿಟ್, ಹೆಲ್ಪ್ ಏಜ್ ಇಂಡಿಯಾ, ಪ್ರಕೃತಿ, ಸುರುಚಿ ಹಾಗೂ ವಿಮೋಚನಾ ಸಂಸ್ಥೆಗಳು.

    ಡಾ.ವಿಷ್ಣುವರ್ಧನ್ ಛಾಯಾಚಿತ್ರೋತ್ಸವ

    ಡಾ.ವಿಷ್ಣುವರ್ಧನ್ ಛಾಯಾಚಿತ್ರೋತ್ಸವ

    ಸೆಪ್ಟೆಂಬರ್ 16, 17 ಹಾಗೂ 18, 2012ರಂದು ಒಟ್ಟು ಮೂರು ದಿನಗಳ ಕಾಲ ನಡೆಯಲಿದೆ. ಬೆಳಗ್ಗೆ 10.30ರಿಂದ ಸಂಜೆ 6ಗಂಟೆವರೆಗೆ. ಈ ಕಾರ್ಯಕ್ರಮದಲ್ಲಿ ವಿಷ್ಣುವರ್ಧನ್ ಅವರ ಅಪರೂಪದ ಫೋಟೋಗಳನ್ನು ಪ್ರದರ್ಶಿಸಲಾಗುತ್ತದೆ. ಅವರ ಅಭಿಮಾನಿಗಳು ಕಳುಹಿಸಿಕೊಟ್ಟಂತಹ ಅಪರೂಪದ ಫೋಟೋಗಳನ್ನೂ ಪ್ರದರ್ಶಿಸಲಾಗುತ್ತದೆ. ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರ ಪಾರ್ಕ್, ಬೆಂಗಳೂರು.

    ಗಿರೀಶ್ ಕಾಸರವಳ್ಳಿಯವರಿಂದ ಉಪನ್ಯಾಸ ಕಾರ್ಯಕ್ರಮ

    ಗಿರೀಶ್ ಕಾಸರವಳ್ಳಿಯವರಿಂದ ಉಪನ್ಯಾಸ ಕಾರ್ಯಕ್ರಮ

    ಹೆಸರಾಂತ ಚಿತ್ರ ನಿರ್ದೇಶಕ ಪದ್ಮಶ್ರೀ ಡಾ.ಗಿರೀಶ್ ಕಾಸರವಳ್ಳಿಯವರಿಂದ ಉಪನ್ಯಾಸ ಕಾರ್ಯಕ್ರಮವಿರುತ್ತದೆ. ವಿಷಯ: "ಭಾರತೀಯ ಚಿತ್ರರಂಗದ 100 ವರ್ಷಗಳು". ಸೆಪ್ಟೆಂಬರ್ 16ರ ಬೆಳಗ್ಗೆ 11.30ಕ್ಕೆ. ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರ ಪಾರ್ಕ್, ಬೆಂಗಳೂರು. ಅಧ್ಯಕ್ಷತೆಯನ್ನು ಖ್ಯಾತ ಸಾಹಿತಿ ಮತ್ತು ನಿರ್ದೇಶಕರಾದ ಡಾ.ಬರಗೂರು ರಾಮಚಂದ್ರಪ್ಪ ವಹಿಸಲಿದ್ದಾರೆ. ಪ್ರಸಿದ್ಧ ಛಾಯಾಚಿತ್ರಕಾರರಾದ ಕೆ.ಜಿ.ಸೋಮಶೇಖರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

    ಡಾ.ವಿಷ್ಣುವರ್ಧನ್ ಸರ್ಕಲ್ ಅನಾವರಣ

    ಡಾ.ವಿಷ್ಣುವರ್ಧನ್ ಸರ್ಕಲ್ ಅನಾವರಣ

    ಸೆಪ್ಟೆಂಬರ್ 16, 2012ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಡಾ.ವಿಷ್ಣುವರ್ಧನ್ ಸರ್ಕಲ್ ಅನಾವರಣ ಮಾಡಲಿದೆ ಹೃದಯವಂತ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಸಂಘ. ಈ ಸಂಘ ಅಂದು ಮಧ್ಯಾಹ್ನ 1 ಗಂಟೆಗೆ ಅನ್ನದಾನ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದೆ. ಅಂದು ಸಂಜೆ 6 ಗಂಟೆಗೆ ಈಶ್ವರ್ ಮೆಲೋಡೀಸ್ ತಂಡದಿಂದ ವಾದ್ಯಗೋಷ್ಠಿಯನ್ನು ಏರ್ಪಡಿಸಲಾಗಿದೆ. ಸ್ಥಳ: ಯಳಚೇನಹಳ್ಳಿ, ಗೀತಾ ಕಾಲೋನಿ, ಕನಕನಗರ, 2ನೇ ಕ್ರಾಸ್, ಕನಕಪುರ ರಸ್ತೆ, ಬೆಂಗಳೂರು 560 078.


    ವಿಷ್ಣುವರ್ಧನ್ ಅವರ ಅನುಪಸ್ಥಿತಿಯಲ್ಲಿ ಅವರ ಅಭಿಮಾನಿಗಳು ಕಳೆದ ಎರಡು ವರ್ಷಗಳಿಂದ ಅವರ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾ ಬಂದಿದ್ದಾರೆ. ಅವರು ನಮ್ಮೊಂದಿಗಿಲ್ಲ ಎಂಬ ಕೊರತೆಯನ್ನು ಬಿಟ್ಟರೆ ಈಗಲೂ ಅಷ್ಟೇ ಸಂಭ್ರಮ ಸಡಗರದಿಂದ ಅವರ ಹುಟ್ಟುಹಬ್ಬ ಕಾರ್ಯಕ್ರಮ ಸಾಂಗವಾಗಿ ನೆರವೇರುತ್ತಿದೆ.

    ಈ ಬಾರಿಯ ವಿಷ್ಣುವರ್ಧನ್ ಹುಟ್ಟುಹಬ್ಬ ವಿಶೇಷಗಳು ಹೀಗಿವೆ. ಕರ್ನಾಟಕ ಸರ್ಕಾರ ವಾರ್ತಾ ಇಲಾಖೆ ಹಾಗೂ ವಿಭಾ ಚಾರಿಟಬಲ್ ಟ್ರಸ್ಟ್ ಹೆಮ್ಮೆಯಿಂದ ಈ ಬಾರಿಯ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿವಿಧ ಕಾರ್ಯಕ್ರಮಗಳ‌ ವಿವರಗಳು ಹೀಗಿವೆ.

    English summary
    The 62nd birth anniversary celebrations of late Kannada actor Dr. Vishnuvardhan held on 16th, 17th and 18th September 2012 at different locations in Bangalore. The different fans clubs of Vishnu has organised blood donation, eye donation and free ailment programms. Here is the Dr. Vishnuvardhan birthday details.
    Friday, December 21, 2012, 9:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X