•  

ವಿಷ್ಣು, ಅಂಬಿ ಜೊತೆ ಆಚಾರ್ಯರರ ಒಡನಾಟ

ಶನಿವಾರ, ಫೆಬ್ರವರಿ 25, 2012, 15:00 [IST]
ಇದು ಕುಚಿಕು ಗೆಳೆಯರಿಬ್ಬರ ಜೊತೆ ವಿ.ಎಸ್.ಆಚಾರ್ಯ ಚಿತ್ರರಂಗದ ಬಗ್ಗೆ, ಸಿನಿಮಾಗಳ ಬಗ್ಗೆ ಚರ್ಚಿಸಿದ ಕಥೆ. ಗೃಹ ಸಚಿವರಾಗಿದ್ದ ಆಚಾರ್ಯರು ಮೈಸೂರಿಗೆ ಪ್ರಯಾಣಿಸುತ್ತಿದ್ದರು. ಸಚಿವರ ಭದ್ರತೆ ಮತ್ತು ಬೆಂಗಾವಲಿಗಿದ್ದ ಪೊಲೀಸರ ವಾಹನಗಳು ಸಚಿವರ ಕಾರು ನಿಂತಾಗ ತಕ್ಷಣ ಧಾವಿಸಿದರು.

ಮಂಡ್ಯದ ಬಳಿಯ ಹೈವೆ ಹೋಟೆಲ್‌ವೊಂದರಲ್ಲಿ ಕನ್ನಡ ಚಿತ್ರರಂಗದ ಕುಚಿಕು ಗೆಳೆಯರಾದ ವಿಷ್ಣುವರ್ಧನ್ ಮತ್ತು ಅಂಬರೀಶ್ ಶುಗರ್‌ಲೆಸ್ ಕಾಫಿ ಹೀರುತ್ತಾ ಕೂತಿದ್ದರು. ಅವರೊಂದಿಗೆ ಸೇರಿಕೊಳ್ಳಲು ಆಚಾರ್ಯ ತಮ್ಮ ಪ್ರಯಾಣವನ್ನು ನಿಲ್ಲಿಸಿದ್ದರು. ಅವರೊಂದಿಗೆ ಕಾಫಿ, ಚಿತ್ರರಂಗದ ಬಗ್ಗೆ ಮಾತು ಮುಗಿಸಿ ಮತ್ತೆ ತಮ್ಮ ಪ್ರಯಾಣ ಮುಂದುವರೆಸಿದರು.

ಹೀಗೆ ಆಚಾರ್ಯರು ವಿಷ್ಣು, ಅಂಬಿ ಜೋಡಿಯನ್ನು ಬೆಂಗಳೂರು ಮೈಸೂರು ನಡುವೆ ಪ್ರಯಾಣಿಸುವಾಗ ಮೂರು ಬಾರಿ ನೋಡಿದ್ದರಂತೆ. ರಾಜಕೀಯದಲ್ಲಿದ್ದ ಮೇಲೆ ಅಂಬರೀಶ್ ಬೇರೆ ಪಕ್ಷದವರಾದರೂ ಆಚಾರ್ಯರಿಗೆ ಪರಮಾಪ್ತ ಗೆಳೆಯರಾಗಿದ್ದರು. ಇಂದು ಆಚಾರ್ಯರು ನಮ್ಮೊಂದಿಗಿಲ್ಲ. ವಿಷ್ಣು ಬಾರದ ಲೋಕಕ್ಕೆ ಹೋಗಿದ್ದಾರೆ. ಇಂತಹಗಳು ಕೇವಲ ನೆನಪುಗಳು ಮಾತ್ರ. (ಒನ್‌ಇಂಡಿಯಾ ಕನ್ನಡ)
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
    Upcoming Matches
SL Vs PAK - 2nd Twenty20 Sun 3rd Jun Int2020
ENG Vs WI - 3rd Test at Edgbaston Thu 7th Jun Test
SL Vs PAK - 1st ODI at R Premadasa Stadium Thu 7th Jun ODI
Follow Oneindia Kannada on Twitter
Oneindia Kannada Facebook fan page
Write Comments on this Article