•  

ಜೀವ ಇರುವವರೆಗೆ ಕರ್ನಾಟಕಕ್ಕೆ ದುಡಿಯಲು ಸಿದ್ಧ

ಬುಧವಾರ, ಫೆಬ್ರವರಿ 22, 2012, 18:35 [IST]
ನಮ್ಮ ಕುಟುಂಬದ ಪ್ರತಿಯೊಬ್ಬರು ತಮ್ಮ ಜೀವ ಇರುವವರೆಗೆ ಕರ್ನಾಟಕ್ಕೆ ದುಡಿಯಲು ಸಿದ್ಧ ಎಂದಿದ್ದಾರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಅವರು ಬೆಂಗಳೂರಿನ ಜನಯನಗರ 9ನೇ ಬ್ಲಾಕ್‌ನಲ್ಲಿ ಕನ್ನಡ ಅಭಿಮಾನಿಗಳ ಸಂಘ ಹಮ್ಮಿಕೊಂಡಿದ್ದ ಡಾ.ರಾಜ್ ಕುಮಾರ್ ಕಂಚಿನ ಪುತ್ತಳಿ ಅನಾವರಣ ಸಂದರ್ಭದಲ್ಲಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಶಿವಣ್ಣ ಮಾತನಾಡುತ್ತಾ, ಜನರ ಪ್ರೀತಿ, ವಿಶ್ವಾಸ ಅಪ್ಪಾಜಿ ಅವರ ಕುಟುಂಬಕ್ಕೆ ಸಿಕ್ಕಿರುವುದು ಪುಣ್ಯ ಎಂದರು. ಕನ್ನಡ ಚಿತ್ರರಂಗ, ಸಿನಿಮಾಗಳು ಮತ್ತು ಕಲಾವಿದರ ಮೇಲೆ ಅಭಿಮಾನಿಗಳ ವಿಶ್ವಾಸವಿರಲಿ. ಹೆಚ್ಚುಹೆಚ್ಚು ಕನ್ನಡ ಚಿತ್ರಗಳನ್ನು ವೀಕ್ಷಿಸುವ ಮೂಲಕ ಕನ್ನಡ ಚಿತ್ರರಂಗವನ್ನು ಬೆಳಸಬೇಕೆಂದು ಮನವಿ ಮಾಡಿದರು.

ಹಿರಿಯ ನಟಿ ತಾರಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಶಾಸಕ ಬಿಎನ್ ವಿಜಯ್ ಕುಮಾರ್, ಬಿಬಿಎಂಪಿ ಸದಸ್ಯರಾದ ಬಿ ಸೋಮಶೇಖರ್, ಮುನಿ ಸಂಜೀವಯ್ಯ, ಬಿಕೆ ರಾಮಮೂರ್ತಿ ಹಾಗೂ ತಾರಾ ಅವರನ್ನು ಸನ್ಮಾನಿಸಲಾಯಿತು. (ಏಜೆನ್ಸೀಸ್)
User Comments
basava 05 Mar 2012 10:24 pm
ಸೂಪರ್ ಶಿವಣ್ಣನಿಗೆ ಜೈ
Sudeep 23 Feb 2012 12:27 pm
ಎಲ್ಲ ಬುರುಡೆ
[ ಅಭಿಪ್ರಾಯ ಬರೆಯಿರಿ ]
IPL, Himachal Pradesh Cricket Association Stadium, Dharmasala
Chennai Super Kings: 44 / 3, 9 Overs
1st Test , Lord's Cricket Ground, St John's Wood
West Indies: 32 / 2, 16 Overs
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article