•  

ಪೊಲೀಸ್ ವಶಕ್ಕೆ ಚಲನಚಿತ್ರ ನಿರ್ಮಾಪಕ ಗೋವರ್ಧನ್

ಬುಧವಾರ, ಫೆಬ್ರವರಿ 22, 2012, 17:56 [IST]
ನಟ ವಿನೋದ್ ಕುಮಾರ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಚಲನಚಿತ್ರ ನಿರ್ಮಾಪಕ ಗೋವರ್ಧನ್ ಮೂರ್ತಿ ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸಲು 11ನೇ ಎಸಿಎಂಎಂ ನ್ಯಾಯಾಲಯ ಬುಧವಾರ (ಫೆ.22) ಆದೇಶಿಸಿದೆ.

ಸದ್ಯಕ್ಕೆ ಗೋವರ್ಧನ್ ಮೂರ್ತಿ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದಾರೆ. ಕೊಲೆ ಪ್ರಕರಣ ಸಾಕ್ಷಿ ಶಾಂತಕುಮಾರ್ ಎಂಬುವವರಿಗೆ ಜೈಲಿನಿಂದಲೇ ಗೋವರ್ಧನ್ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ಗೋವರ್ಧನ್ ಅವರನ್ನು ಒಂದು ದಿನದ ಮಟ್ಟಿಗೆ ಪೊಲೀಸರಿಗೆ ಒಪ್ಪಿಸಲಾಗಿದೆ.

'ಮಾದೇಶ' ಚಿತ್ರ ನಿರ್ಮಾಪಕ ಗೋವರ್ಧನ್ ಹಾಗೂ ಆತನ ಅಂಗರಕ್ಷಕರು ಅಕ್ಟೋಬರ್ 9, 2008ರ ಮಧ್ಯರಾತ್ರಿ ಬೆಂಗಳೂರಿನ ಹೊರವಲಯದ ಬಾಗಲೂರಿನ ಫಾರಂಹೌಸೊಂದರಲ್ಲಿ ವಿನೋದ್ ಕುಮಾರ್ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. (ಏಜೆನ್ಸೀಸ್)
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
IPL, Himachal Pradesh Cricket Association Stadium, Dharmasala
Chennai Super Kings: 43 / 3, 8.2 Overs
1st Test , Lord's Cricket Ground, St John's Wood
West Indies: 32 / 2, 15.3 Overs
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article