•  

ಸಾಫ್ಟ್‌ವೇರ್ ಕೆಲಸ ಹುಡುಕುತ್ತಾ ಅಮೆರಿಕಾಗೆ ಉಪೇಂದ್ರ

ಗುರುವಾರ, ಫೆಬ್ರವರಿ 16, 2012, 13:30 [IST]
ರಿಯಲ್ ಸ್ಟಾರ್ ಉಪೇಂದ್ರ ಅವರು ಸಾಫ್ಟ್‌ವೇರ್ ಕೆಲಸ ಹುಡುಕುತ್ತಾ ಅಮೆರಿಕಾ ಅಥವಾ ಯೂರೋಪ್ ರಾಷ್ಟ್ರಗಳಿಗೆ ಹೊರಡಲು ಸಿದ್ಧತೆ ನಡೆಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಮಹತ್ವವಾದದ್ದನ್ನು ಸಾಧಿಸಲು ಅವರು ಈ ಕೆಲಸಕ್ಕೆ ಕೈ ಹಾಕಿದ್ದಾರೆ. ಹಾಗಿದ್ದರೆ ಕನ್ನಡ ಚಿತ್ರರಂಗಕ್ಕೆ ಅವರು ಗುಡ್ ಬೈ ಹೇಳ್ತಾರಾ?

ಎಲ್ಲಾದರೂ ಉಂಟೇ? ಅವರು ಹೀಗೆ ಅಮೆರಿಕಾ, ಯೂರೋಪ್‌ಗೆ ಹೊರಡುತ್ತಿರುವುದು ಅವರ ಮುಂದಿನ ಚಿತ್ರಕ್ಕಾಗಿಯೇ! ಈ ಚಿತ್ರದಲ್ಲಿ ಉಪ್ಪಿ ಅವರದು ಸಾಫ್ಟ್‌ವೇರ್ ಇಂಜಿನಿಯರ್ ಪಾತ್ರ. ಕೆಲಸ ಹುಡುಕುತ್ತಾ ಅವರು ವಿದೇಶಕ್ಕೆ ಹಾರುತ್ತಾರೆ. ಮುಂದೇನಾಗುತ್ತದೆ ಎಂಬುದೇ ಚಿತ್ರದ ಕತೆ.

ಇದಿಷ್ಟು ಸಣ್ಣ ಎಳೆಯನ್ನು ನಿರ್ಮಾಪಕ ಅಣಜಿ ನಾಗರಾಜ್ ಬಿಟ್ಟುಕೊಟ್ಟಿದ್ದಾರೆ. ಚಿತ್ರದ ಹೆಸರು 'ಲಂಡನ್ ಗೌಡ'. ಈ ಚಿತ್ರದ ಶೇ.70ರಷ್ಟು ಚಿತ್ರೀಕರಣ ಅಮೆರಿಕಾ ಅಥವಾ ಯೂರೋಪ್‌ನಲ್ಲಿ ಚಿತ್ರಿಸಲು ಉದ್ದೇಶಿಸಲಾಗಿದೆ. ಕನ್ನಡ ಚಿತ್ರರಂಗದ ಬಹುತೇಕ ಹಾಸ್ಯ ಕಲಾವಿದರು ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣ ಶುರುವಾಗಲಿದೆ. (ಏಜೆನ್ಸೀಸ್)
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
IPL, Himachal Pradesh Cricket Association Stadium, Dharmasala
Chennai Super Kings: 43 / 3, 8.2 Overs
1st Test , Lord's Cricket Ground, St John's Wood
West Indies: 32 / 2, 15.3 Overs
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article