•  

ಫೆ. 23ಕ್ಕೆ ಇಡೀ ಭಾರತೀಯ ಚಿತ್ರೋದ್ಯಮ ಬಂದ್

ಬುಧವಾರ, ಫೆಬ್ರವರಿ 15, 2012, 18:14 [IST]
Movie Reel Iamge
ಫೆಬ್ರವರಿ 23, 2012ರಂದು, ಕೇಂದ್ರ ಸರ್ಕಾರದ ಸೇವಾ ತೆರಿಗೆ ನೀತಿ ವಿರೋಧಿಸಿ ದೇಶದ ಎಲ್ಲಾ ಭಾಷೆಗಳ ಚಿತ್ರೋದ್ಯಮಗಳು ದೇಶಾದ್ಯಂತ 'ಸಾಂಕೇತಿಕವಾಗಿ ಒಂದು ದಿನದ ಬಂದ್' ಆಚರಿಸಲು ತೀರ್ಮಾನಿಸಿವೆ. ಇದನ್ನು ಕರ್ನಾಟಕದ ವಾಣಿಜ್ಯ ಮಂಡಳಿಯೂ ಕೂಡ ಬೆಂಬಲಿಸಿದೆ.

ಈ ಹಿನ್ನೆಲೆಯಲ್ಲಿ ಚಿತ್ರೀಕರಣ, ಪ್ರದರ್ಶನ ಸೇರಿದಂತೆ ಚಿತ್ರೋದ್ಯಮಕ್ಕೆ ಸಂಬಂಧಪಟ್ಟ ಎಲ್ಲಾ ಚಟುವಟಿಕೆಗಳೂ ಸ್ಥಗಿತಗೊಳ್ಳಲಿವೆ. ಈ ಬಂದ್ ಆಚರಣೆಗೆ ಎಲ್ಲಾ ಸಿನಿಮಾ ಕಲಾವಿದರು, ನಿರ್ಮಾಪಕರು, ವಿತರಕರು, ಪ್ರದರ್ಶಕರು, ನಿರ್ದೇಶಕರು, ತಂತ್ರಜ್ಞರು, ಹಾಗೂ ಕಾರ್ಮಿಕರು ಸಹಕರಿಸಬೇಕೆಂದು ಮಂಡಳಿ ಕೋರಿದೆ.

ಭಾರತೀಯ ಚಲನಚಿತ್ರ ಒಕ್ಕೂಟ (ಎಫ್ ಎಫ್ ಐ), ಫೆ. 21ರಂದು ಹೊಸದಿಲ್ಲಿಯಲ್ಲಿ ಕಾರ್ಯಕಾರಿ ಸಮಿತಿ ಸಭೆ ಆಯೋಜಿಸಿದ್ದು, ಅಲ್ಲಿ ಸೇವಾ ತೆರಿಗೆ ಕುರಿತು ಚರ್ಚಿಸಿ, ಸಂಬಂಧಪಟ್ಟ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಹಾಗೂ ಇನ್ನಿತರ ಅಧಿಕಾರಿಗಳನ್ನು ಭೇಟಿ ಮಾಡಿ ಈ ತೆರಿಗೆಯಿಂದ ಉದ್ಯಮಕ್ಕೆ ಆಗುವ ಅನಾನುಕೂಲತೆಗಳನ್ನು ತಿಳಿಸುವ ಮನವಿ ಪತ್ರಗಳನ್ನು ಸಲ್ಲಿಸಲು ತೀರ್ಮಾನಿಸಲಾಗಿದೆ. (ಒನ್ ಇಂಡಿಯಾ ಕನ್ನಡ)

User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
IPL, Himachal Pradesh Cricket Association Stadium, Dharmasala
Chennai Super Kings: 40 / 2, 7.2 Overs
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article