Englishবাংলাગુજરાતીहिन्दीമലയാളംதமிழ்తెలుగు

ಮನಸುಗಳ ಮಾತು ಮಧುರ ಆನಂದ್ 'ಜೈ ಹೋ..'

Written by: * ಶ್ರೀರಾಮ್ ಭಟ್
Published: Wednesday, February 15, 2012, 16:08 [IST]
 

ವರದಕ್ಷಿಣೆ ಕಿರುಕುಳ, ಅಕ್ರಮ ಸಂಬಂಧ ಆರೋಪಗಳಿಂದ ನ್ಯಾಯಾಲಯ ಮುಕ್ತ ಗೊಳಿಸಿದ ನಂತರ ನಟ ಆನಂದ್ ಈಗ ಮತ್ತೆ ವೃತ್ತಿ ಜೀವನದತ್ತ ಮರಳುತ್ತಿದ್ದಾರೆ. ನಿರೂಪಕ, ನಟರಾಗಿ ವೃತ್ತಿಜೀವನದಲ್ಲಿ ಒಂದು ಹಂತಕ್ಕೆ ಬಂದು ಇನ್ನೇನು ಮೇಲೇರಬೇಕು ಎನ್ನುತ್ತಿದ್ದಂತೆ ವೈಯಕ್ತಿಕ ಸಮಸ್ಯೆಯ ಸುಳಿಗೆ ಸಿಕ್ಕಿ ನಲುಗಿಹೋಗಿದ್ದರು ಆನಂದ್. ಇದೀಗ 'ಆರೋಪ ಮುಕ್ತ'ರಾಗಿ ನಿರಾಳವಾಗಿರುವ ಆನಂದ್ ಸದ್ಯದಲ್ಲೇ ಹೊಸ ಚಿತ್ರವೊಂದರಲ್ಲಿ ನಾಯಕರಾಗಿ ನಟಿಸಲಿದ್ದಾರೆ.

ಇದೀಗ ಆನಂದ್ ಮೊದಲಿನಂತಿಲ್ಲ. 'ರಫ್ ಅಂಡ್ ಟಫ್' ಪಾತ್ರಕ್ಕೂ ಸೈ ಎನ್ನುವಂತೆ ದೇಹವನ್ನು ಹುರಿಗೊಳಿಸಿದ್ದಾರೆ. 'ಸಿಕ್ಸ್ ಪ್ಯಾಕ್ ಆಬ್ಸ್' ಹೊಂದಿ ಗುರುತು ಸಿಗದಷ್ಟು ಹ್ಯಾಂಡ್ ಸಮ್ ಆಗಿದ್ದಾರೆ. ಚಿತ್ರರಂಗದಿಂದ ಅನಿರೀಕ್ಷಿತವಾಗಿ ಸಿಕ್ಕ 'ಶಾರ್ಟ್ ಬ್ರೇಕ್' ನಲ್ಲಿ ಆನಂದ್ ದೇಹ ಹಾಗೂ ನಟವಳಿಕೆ ನಂಬಲಾಗದಷ್ಟು ಬೆಳೆದಿದೆ, ಬದಲಾಗಿದೆ. ಮುಖದಲ್ಲಿ ಮೊದಲಿಗಿಂತ ಹೆಚ್ಚು ಆತ್ಮವಿಶ್ವಾಸ ಮನೆಮಾಡಿದೆ. ಸಾಕ್ಷಿ ಬೇಕಾದರೆ ಫೋಟೋ ನೋಡಿ.

ಆನಂದ್ ಗೆಳೆಯ ಹಾಗೂ ನಟ ತರುಣ್ ಸುಧೀರ್, ಆನಂದ್ ಗಾಗಿ ಚಿತ್ರವೊಂದನ್ನು ಸದ್ಯದಲ್ಲಿಯೇ ನಿರ್ದೆಶಿಸಲಿದ್ದಾರೆ. ಖಾಸಗಿ ಕೆಲಸದ ಕಾರಣಕ್ಕೆ ಇಂದು (ಫೆಬ್ರವರಿ 15, 2012) ವಿದೇಶಕ್ಕೆ ಹೊರಟಿರುವ ಆನಂದ್, ಮರಳಿಬಂದ ನಂತರ ಹೊಸ ಚಿತ್ರದ ಮುಹೂರ್ತ ದಿನ ನಿಗದಿಯಾಗಲಿದೆ. ಈ ವಿಷಯವನ್ನು ಸ್ವತಃ ಆನಂದ್, 'ಒನ್ ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.

ಇದೀಗ ಆತ್ಮವಿಶ್ವಾಸಕ್ಕೆ ಇನ್ನೊಂದು ಹೆಸರು ಎಂಬಂತಿರುವ ಆನಂದ್ ನೋಡಿದರೆ ಆಶ್ಚರ್ಯವಾಗುವುದು ಖಂಡಿತ. ಬಂದ ಸಮಸ್ಯೆಯನ್ನು ಧೈರ್ಯದಿಂದ ಎದುರಿಸಿ, ಮತ್ತೆ ಹೇಗೆ ಪುನರ್ಜನ್ಮ ಪಡೆದು ಮಿಂಚಬೇಕೆಂದು ಆನಂದ್ ನೋಡಿ ಕಲಿಯಬೇಕೆಂದರೆ ಅತಿಶಯೋಕ್ತಿ ಅಲ್ಲ. ಅವರನ್ನೀಗ ನೋಡದರೆ 'ಆದದ್ದೆಲ್ಲಾ ಒಳಿತೇ ಆಯಿತು...' ಎಂಬ ಪುರಂದರ ದಾಸರ ಹಾಡು ಬೇಡಬೇಡವೆಂದರೂ ನೆನಪಾಗುವಂತಿದೆ.

English summary
Manasugala Matu Madhura movie fame actor Anand to act in Tarun Sudhir movie very shortly. Now he has come back with six packs abs Abs.
ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada
Subscribe Newsletter
Coupons