ನಿರ್ದೇಶಕ, ಅಂಬಾರಿ ಖ್ಯಾತಿಯ ಎ. ಪಿ. ಅರ್ಜುನ್ ಅವರ ಬರಲಿರುವ ಚಿತ್ರ 'ಅದ್ದೂರಿ'ಯ ಆಡಿಯೋ ಬಿಡುಗಡೆ ಫೆಬ್ರವರಿ ಮೊದಲ ಅಥವಾ ಎರಡನೇ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ದಟ್ಟವಾಗಿದೆ. ಅದ್ದೂರಿ ಚಿತ್ರದ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಅರ್ಜುನ್, ಈ ಬಾರಿ ಸಾಕಷ್ಟು ಸಿದ್ಧತೆಯೊಂದಿಗೆ 'ಅದ್ದೂರಿ'ಯಾಗಿ ಚಿತ್ರ ತೆರೆಗೆ ತರುವ ಯೋಚನೆಯಲ್ಲಿದ್ದಾರಂತೆ.
ಆಡಿಯೋ ಹಾಗೂ ಚಿತ್ರ ಬಿಡುಗಡೆಯನ್ನು ಸಾಕಷ್ಟು ಅಳೆದು, ತೂಗಿ ಮಾಡುವ ಐಡಿಯಾ ಅರ್ಜುನ್ ರದು. ಅಂಬಾರಿ ಮೂಲಕ ಯಶಸ್ವೀ ನಟ ಎನಿಸಿಕೊಂಡ ಅವರು ಅದ್ದೂರಿ ಮೂಲಕ ಇನ್ನೂ ಮೇಲೇರಲು ಬಯಸುತ್ತಿದ್ದಾರೆ. ನಾಯಕ ಧ್ರುವ ಸರ್ಜಾ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಲಿದ್ದಾರೆ. ನಾಯಕಿ ರಾಧಿಕಾ ಪಂಡಿತ್, ವೃತ್ತಿಯಲ್ಲಿ ಸಾಕಷ್ಟು ಮೇಲೇರಿದ್ದರೂ ಹೊಸಬರ ಜೊತೆಯೂ ತಾನು ನಟಿಸಬಲ್ಲೆ ಎಂದು ಅದ್ದೂರಿ ಮೂಲಕ ಸಾಬೀತುಪಡಿಸಿದ್ದಾರೆ.
ಹಾಡುಗಳು ಎಲ್ಲಾ ವರ್ಗದ ಜನರಿಗೆ ಇಷ್ಟವಾಗಲಿವೆ ಎಂಬುದು ಚಿತ್ರತಂಡದ ಪ್ರತಿಯೊಬ್ಬರ ಅನಿಸಿಕೆ. ಆಡಿಯೋ ಬಿಡುಗಡೆ ದಿನಾಂಕ ಸದ್ಯದಲ್ಲೇ ಘೋಷಣೆಯಾಗಲಿದೆ. ಸಿನಿಪ್ರೇಕ್ಷಕರು ತುಂಬಾ ದಿನಗಳಿಂದ ಕಾಯುತ್ತಿದ್ದಾರೆ ಎಂಬುದು ಅರ್ಜುನ್ ಗೂ ಗೊತ್ತು. ಹಾಗಾಗಿ ಸದ್ಯದಲ್ಲೇ ಆಡಿಯೋ ಬಿಡುಗಡೆ ಘೋಷಿಸಲಿದ್ದಾರೆ ಎ. ಪಿ. ಅರ್ಜುನ್. (ಒನ್ ಇಂಡಿಯಾ ಕನ್ನಡ)