•  

ಗೀತಪ್ರಿಯ ಆರೋಗ್ಯ ಗಂಭೀರ; ಶುಭ ಹಾರೈಸಿರಿ

ಶನಿವಾರ, ಫೆಬ್ರವರಿ 4, 2012, 6:15 [IST]
Lyricist, director Geethapriya
ಬೆಂಗಳೂರು, ಫೆ. 4 : 'ಮಣ್ಣಿನ ಮಗ' ಅಂತಹ ರಾಷ್ಟ್ರಪ್ರಶಸ್ತಿ ಚಿತ್ರ ಮತ್ತು 'ಹೊಂಬಿಸಿಲು' ಚಿತ್ರದಂಥ ಸದಭಿರುಚಿಯ ಚಿತ್ರ ನೀಡಿದ ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಿರ್ದೇಶಕ, ಗೀತರಚನೆಕಾರರಲ್ಲೊಬ್ಬರಾದ ಗೀತಪ್ರಿಯ (81) ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ದೇಹಸ್ಥಿತಿ ಗಂಭೀರವಾಗಿದೆ.

1978ರಲ್ಲಿ ಬಂದ ಹೊಂಬಿಸಿಲು ಚಿತ್ರದ ಜೀವ ವೀಣೆ ನೀಡು ಮಿಡಿತದ ಸಂಗೀತ, ಹೂವಿಂದ ಹೂವಿಗೆ ಹಾರುವ ದುಂಬಿ, 1968ರಲ್ಲಿ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಮಣ್ಣಿನ ಮಗ ಚಿತ್ರದ ಇದೇನ ಸಭ್ಯತೆ ಇದೇನ ಸಂಸ್ಕೃತಿ ಹಾಡುಗಳನ್ನು ಮರೆತವರುಂಟೆ. ಇಂಥ ಅಮರ ಗೀತೆಗಳನ್ನು ನೀಡಿದ ಗೀತಪ್ರಿಯ ಅವರು ಈಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

ಗಂಟಲಲ್ಲಿ ಕಾಣಿಸಿಕೊಂಡಿದ್ದ ಗಂಟಿನ ಆಪರೇಷನ್ ಆದನಂತರ ಬೆಂಗಳೂರಿನ ಮಹಾಲಕ್ಷ್ಮಿಪುರಂ ಮನೆಯಲ್ಲಿ ಲಕ್ಷ್ಮಣರಾವ್ ಮೋಹಿತೆ (ಗೀತಪ್ರಿಯ) ಹಾಸಿಗೆ ಹಿಡಿದಿದ್ದಾರೆ. ಆಪರೇಷನ್ ಕಾರಣದಿಂದಾಗಿ ಮಾತಾಡಲು ಬಾಯಿ ತೆಗೆದರೂ ಮಾತೇ ಹೊರಡುತ್ತಿಲ್ಲ.

ಅವರ ಆಪ್ತಮಿತ್ರ ರಾಘವೇಂದ್ರ ರಾಜು ಮತ್ತು ಅಭಿಮಾನಿಗಳು ಗೀತಪ್ರಿಯ ಅವರ ನಿವಾಸಕ್ಕೆ ಶುಕ್ರವಾರ ತೆರಳಿ ಅವರ ಆರೋಗ್ಯ ವಿಚಾರಿಸಿದರು. ಭಾವಸಾರ ಕ್ಷತ್ರಿಯ ಸಮಾದಾಯ ಗೀತಪ್ರಿಯ ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸಿ, 25 ಸಾವಿರ ರು. ನೀಡಿದೆ. ಖ್ಯಾತ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿಯವರು 1 ಲಕ್ಷ ರು. ನೀಡಿದ್ದಾರೆ.

ಅವರ ಚಿತ್ರಗೀತೆಗಳ ಅಭಿಮಾನಿಗಳು ಹಾಗು ಸದಭಿರುಚಿಯ ಕನ್ನಡ ಚಿತ್ರಗೀತ ಸಾಹಿತ್ಯಾಭಿಮಾನಿಗಳ ಪರವಾಗಿ ಒನ್ಇಂಡಿಯ ಕನ್ನಡ ಬಳಗ ಗೀತಪ್ರಿಯ ಅವರು ಶೀಘ್ರವಾಗಿ ಗುಣಮುಖರಾಗಲೆಂದು ಹಾರೈಸುತ್ತದೆ.

User Comments
kannadati 04 Feb 2012 04:14 pm
ಬೆಸುಗೆ, ಹೊಂಬಿಸಿಲು ಮುಂತಾದ ಸದಭಿರುಚಿಯ ಚಿತ್ರಗಳನ್ನು ಕನ್ನಡಕ್ಕೆ ಕೊಟ್ಟ ನಿರ್ದೇಶಕ ಗೀತಪ್ರಿಯ ಅನಾರೋಗ್ಯದಿಂದ ಬೇಗನೆ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಎಲ್ಲ ಕನ್ನಡಿಗರ ಪರವಾಗಿ ಪ್ರಾರ್ಥಿಸುತ್ತೇನೆ ..
Harish 04 Feb 2012 04:01 pm
ಗೀತಪ್ರಿಯ ತುಂಬ ಒಳ್ಳೆ ನಿರ್ದೇಶಕ ಮತ್ತು ಗೀತೆ ರಚೆನೆಕಾರ ಅವರ ಹೊಂಬಿಸಿಲು ಚಿತ್ರದ ಹಾಡುಗಳು ತುಂಬ ಗ್ರೇಟ್ ಅವರಿಗೆ ಭಗವಂತ ಅರೋಗ್ಯ ಕೊಡಲೆಂದು ನಾನು ಪ್ರಾರ್ಥಿಸುತ್ತೇನೆ
kannadati 04 Feb 2012 03:45 pm
ಬೆಸುಗೆ, ಹೊಂಬಿಸಿಲು ಮುಂತಾದ ಸದಭಿರುಚಿಯ ಚಿತ್ರಗಳನ್ನು ಕನ್ನಡಕ್ಕೆ ಕೊಟ್ಟ ನಿರ್ದೇಶಕ ಗೀತಪ್ರಿಯ ಅನಾರೋಗ್ಯದಿಂದ ಬೇಗನೆ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಎಲ್ಲ ಕನ್ನಡಿಗರ ಪರವಾಗಿ ಪ್ರಾರ್ಥಿಸುತ್ತೇನೆ ..
kannadati 04 Feb 2012 03:43 pm
ಬೆಸುಗೆ, ಹೊಂಬಿಸಿಲು ಮುಂತಾದ ಸದಭಿರುಚಿಯ ಚಿತ್ರಗಳನ್ನು ಕನ್ನಡಕ್ಕೆ ಕೊಟ್ಟ ನಿರ್ದೇಶಕ ಗೀತಪ್ರಿಯ ಅನಾರೋಗ್ಯದಿಂದ ಬೇಗನೆ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಎಲ್ಲ ಕನ್ನಡಿಗರ ಪರವಾಗಿ ಪ್ರಾರ್ಥಿಸುತ್ತೇನೆ ..
kannadati 04 Feb 2012 03:42 pm
ಬೆಸುಗೆ, ಹೊಂಬಿಸಿಲು ಮುಂತಾದ ಸದಭಿರುಚಿಯ ಚಿತ್ರಗಳನ್ನು ಕನ್ನಡಕ್ಕೆ ಕೊಟ್ಟ ನಿರ್ದೇಶಕ ಗೀತಪ್ರಿಯ ಅನಾರೋಗ್ಯದಿಂದ ಬೇಗನೆ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಎಲ್ಲ ಕನ್ನಡಿಗರ ಪರವಾಗಿ ಪ್ರಾರ್ಥಿಸುತ್ತೇನೆ ..
[ ಅಭಿಪ್ರಾಯ ಬರೆಯಿರಿ ]
   
    Upcoming Matches
SL Vs PAK - 1st Twenty20 Fri 1st Jun Int2020
SL Vs PAK - 2nd Twenty20 Sun 3rd Jun Int2020
ENG Vs WI - 3rd Test at Edgbaston Thu 7th Jun Test
Follow Oneindia Kannada on Twitter
Oneindia Kannada Facebook fan page
Write Comments on this Article