•  

ಕರಿಬಸವಯ್ಯ ಕಾರು ಆಕ್ಸಿಡೆಂಟ್; ಡಿಂಗ್ರಿ ಹೇಳಿದ ಸತ್ಯ

ಶನಿವಾರ, ಫೆಬ್ರವರಿ 4, 2012, 15:19 [IST]
ಇನ್ನೇನು ಬೆಳಕರಿಯುತ್ತಿದೆ 4, 5ಗಂಟೆ ಆಗೋಗುತ್ತದೆ ಎಂದು ಹೇಳಿ ಕಾರು ತಾನೇ ಚಾಲನೆ ಮಾಡಿಕೊಂಡು ಹೊರಟಿದ್ದಾನೆ. ಕಾರು ತಲಘಟ್ಟಪುರ ಬಳಿ ಬರಬೇಕಾದರೆ ರಸ್ತೆಗುಂಡಿ ತಪ್ಪಿಸಲು ಹೋಗಿ ರಸ್ತೆ ಪಕ್ಕದಲ್ಲಿದ್ದ ಮರಕ್ಕೆ ಕಾರು ಡಿಕ್ಕಿ ಹೊಡೆದಿದೆ. ಅಲ್ಲೇ ಟರ್ನಿಂಗ್‌ನಲ್ಲೇ ಮರ ಇರುವ ಕಾರಾಣ ಅದು ಅಷ್ಟಾಗಿ ಕಾಣಿಸುವುದಿಲ್ಲ. ಎತ್ತರದ ಪ್ರದೇಶ ಬೇರೆ.

ಡಿಕ್ಕಿ ಹೊಡೆದ ರಭಸಕ್ಕೆ ಕಾರು ಆಕ್ಷನ್ ಫಿಲಂನಲ್ಲಿ ತೋರಿಸುವಂತೆ ಉರುಳಿಕೊಂಡು ಹೋಗಿ ಕೆಳಗೆ ಬಿದ್ದಿದೆ. ಬಳಿಕ 5 ಗಂಟೆ ಸಮಯದಲ್ಲಿ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಾಪಾರಿ ಹುಡುಗರು ಕೆಳಗೆ ಬಿದ್ದಿದ್ದ ಕಾರಿನ ಇಂಡಿಕೇಟರ್ ಮಿಣಮಿಣ ಎನ್ನುತ್ತಿರುವುದನ್ನು ನೋಡಿದ್ದಾರೆ. ಯಾವುದೋ ಕಾರು ಕೆಳಗೆ ಬಿದ್ದಿದೆ ಬನ್ರೋ ಎಂದು ಹೋಗಿ ನೋಡಿದ್ದಾರೆ.

ಕರಿಬಸವಯ್ಯನದೇ ಮೊಬೈಲನ್ನು ತೆಗೆದುಕೊಂಡು ಅವರು ಕೊನೆಯದಾಗಿ ಮಾಡಿದ್ದ ಕರೆಗೆ ಫೋನು ಮಾಡಿದ್ದಾರೆ (ಕೆಬಿ ಕೊನೆಯದಾಗಿ ಅವರ ಪತ್ನಿಗೆ ಫೋನು ಮಾಡಿದ್ದರು). ಇಂತಹ ಕಡೆ ಕಾರು ಅಪಘಾತವಾಗಿದೆ. ಕಾರಿನಲ್ಲಿರುವ ವ್ಯಕ್ತಿ ಏನಾಗಿದ್ದಾನೋ ಗೊತ್ತಿಲ್ಲ. ದಯವಿಟ್ಟು ಬನ್ನಿ ಎಂದು ಎಲ್ಲ ವಿವರಗಳನ್ನೂ ಹೇಳಿದ್ದಾನೆ. ಕಾರು ಉರುಳಿಬಿದ್ದ ರಭಸಕ್ಕೆ ಕೆಬಿ ತಲೆ ಎರಡು ಸೀಟುಗಳ ನಡುವೆ ಸಿಕ್ಕಿಹಾಕಿಕೊಂಡಿತ್ತಂತೆ.

ಬಳಿಕ ಕರೆ ಮಾಡಿದ ಹುಡುಗ ಮೊಬೈಲ್ ಫೋನ್‌ನಿಂದ ಸಿಮ್ ತೆಗೆದು ಬಿಸಾಕಿ. ಮೊಬೈಲ್ ಸಮೇತ ಪರಾರಿಯಾಗಿದ್ದಾನೆ. ಬಳಿಕ ಅದೇ ರಸ್ತೆಯಲ್ಲಿ 6 ಗಂಟೆ ಸುಮಾರಿಗೆ ಬೆಳಗ್ಗೆ ಅವರನ್ನು 5 ಗಂಟೆಗೆ ಹೋಗಿ ಎಂದು ತಡೆದಿದ್ದ ವ್ಯಕ್ತಿ ಬಂದಿದ್ದಾರೆ. ಕಾರನ್ನು ನೋಡಿದವರೆ ಅಯ್ಯೋ ನಮ್ಮ ಕರಿಬಸವಣ್ಣನದಲ್ವೇ ಎಂದು ಹೋಗಿ ನೋಡಿದ್ದಾನೆ. ಪರಿಸ್ಥಿತಿ ಗೊತ್ತಾಗಿದೆ. ಅಲ್ಲೇ ಯಾವುದೋ ಸ್ಕಾರ್ಫಿಯೋ ಕಾರು ಹಿಡಿದು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಮುಂದಿನದೆಲ್ಲಾ ನಿಮಗೆ ಗೊತ್ತೇ ಇದೆ. ಐದಾರು ತಿಂಗಳಲ್ಲಿ ಅವನು ಚೇತರಿಸಿಕೊಳ್ಳುತ್ತಾನೆ ಎಂದುಕೊಂಡಿದ್ದೆವು. ಆದರೆ ಹೀಗಾಗುತ್ತದೆ ಎಂದು ಊಹಿಸಿರಲಿಲ್ಲ ಎಂದು ಡಿಂಗ್ರಿ ಮೌನಕ್ಕೆ ಶರಣಾದರು.
User Comments
avinash 08 Feb 2012 05:10 pm
ರಾತ್ರಿ ಹೊತ್ತು ಕಾರ್ ಅನ್ನು ಡ್ರೈವ್ ಮಾಡುವುದು ಅಪಾಯಕರ.
prasad 04 Feb 2012 08:16 pm
ಜವರಾಯ ಬಂದರೆ ಬರಿಗೈಯಲ್ಲಿ ಬರಲಿಲ್ಲ ಕುಡುಗೋಲು ಕೊಡಲಿ ಹೆಗಲೇರಿ ಒಳ್ಳೊಳ್ಳೆ ಮರನ ಕಡಿ ಬಂದ ,ಫಲ ಬಿಟ್ಟ ಮರನ ಕಡಿ ಬಂದ !!!!!!
Lokesh Kodancha 04 Feb 2012 04:57 pm
ಕನ್ನಡ ಚಿತ್ರರಂಗಕ್ಕೆ ಬಹಳ ದೊಡ್ಡ ಲಾಸ್. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥನೆ ಮಾಡುವ - ಲೋಕೇಶ ಕೊಡಂಚ
[ ಅಭಿಪ್ರಾಯ ಬರೆಯಿರಿ ]
   
    Upcoming Matches
SL Vs PAK - 1st Twenty20 Fri 1st Jun Int2020
SL Vs PAK - 2nd Twenty20 Sun 3rd Jun Int2020
ENG Vs WI - 3rd Test at Edgbaston Thu 7th Jun Test
Follow Oneindia Kannada on Twitter
Oneindia Kannada Facebook fan page
Write Comments on this Article