•  

ಐಶೂಗೆ ಒಂದು ಗಂಟೆಗೆ ಸರ್ಕಾರ ಕೊಟ್ಟಿದ್ದು 10 ಲಕ್ಷ

ಶುಕ್ರವಾರ, ಫೆಬ್ರವರಿ 3, 2012, 10:27 [IST]
ಬೆಳಗಾವಿಯಲ್ಲಿ ನಡೆದ ಎರಡನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಬಾಲಿವುಡ್ ತಾರೆ ಐಶ್ವರ್ಯ ರೈ ಅವರನ್ನು ಆಹ್ವಾನಿಸಿದ್ದು ನೆನಪಿರಬಹುದು. ಕಳೆದ ವರ್ಷ ಮಾರ್ಚ್‌ನಲ್ಲಿ ನಡೆದ ಈ ವರ್ಣರಂಜಿತ ಸಮಾರಂಭಕ್ಕೆ ಸರ್ಕಾರ ಲಕ್ಷಾಂತರ ರುಪಾಯಿ ಖರ್ಚು ಮಾಡಿತ್ತು. ಆದರೆ ಐಶ್ವರ್ಯ ರೈಗೆ ಕೊಟ್ಟದ್ದೆಷ್ಟು?

ಮಾಹಿತಿ ಹಕ್ಕು ಕಾಯಿದೆಯಡಿ ಪಡೆದ ಮಾಹಿತಿ ಹೀಗಿದೆ. ಐಶ್ವರ್ಯ ರೈ ಬಂದು ಹೋಗಲು ವಿಮಾನ ಶುಲ್ಕ ಸೇರಿದಂತೆ ಹಾಗೂ ಆಕೆ ಒಂದು ಗಂಟೆ ಕಾಲ ಸಮ್ಮೇಳನದಲ್ಲಿ ಕಳೆಯಲು ರು.10 ಲಕ್ಷ ನೀಡಲಾಗಿದೆ. ಅದೇ ಕನ್ನಡ ಚಿತ್ರರಂಗದ ಕಲಾವಿದರು ಮೂರು ದಿನಗಳ ಕಾಲ ಕುಣಿದು ಕುಪ್ಪಳಿಸಿದ್ದಕ್ಕೆ ಸರ್ಕಾರ ಖರ್ಚು ಮಾಡಿರುವುದು ರು. 7.93 ಲಕ್ಷ.

ಈ ಎಲ್ಲಾ ಮಾಹಿತಿಯನ್ನು ಸಮಾಜ ಸೇವಕ ಭೀಮಪ್ಪ ಗದಗ ಅವರು ಪಡೆದಿದ್ದಾರೆ. ಇನ್ನೊಂದು ಮುಖ್ಯವಾದ ಸಂಗತಿ ಎಂದರೆ, ಸಮಾರಂಭದಲ್ಲಿ 3,000 ಹಾಡುಗಳ ವಿಧವಿಧದ ಆಡಿಯೋಗಳನ್ನು ತಂದಿರುವ ಲಹರಿ ಆಡಿಯೋ ಕಂಪನಿಗೆ ಸರ್ಕಾರ ರು.25 ಲಕ್ಷ ನೀಡಿದೆ. (ಏಜೆನ್ಸೀಸ್)

User Comments
RSJ 03 Feb 2012 01:41 pm
ನಮ್ಮ ವಿಶ್ವ ಕನ್ನಡ ಸಮ್ಮೇಳನಕ್ಕೆ ಸ್ವಂತ್ ಇಚ್ಚೆ ಇಂದ ಕನ್ನಡಿಗರು ಬೇಕಾಗಿದ್ದರೆ ಹೊರತೂ ದುಡ್ಡಿ ಗೊಸ್ಕರ ಬಂದವರು ಅಥವಾ ತಂದರು ಬೇಕಾಗಿರಲ್ಲಿಲ್ಲ ಸರ್. ನಮ್ಮ ಸರ್ಕಾರಕ್ಕೆ ಎಲ್ಲವೂ ಒಂದು ಥರಾ ದುಡ್ಡು ಮಾಡುವ ಅಥವಾ ತೋರಿಕೆಗಾಗಿ ಮಾಡುವ ಅಭ್ಯಾಸ ಇದೆ ಹೊರತು ಜನ ಗೋಸ್ಕರ ಅಲ್ಲ . . . . . . . ಹಾಗಾದರೆ ನಮ್ಮ ಯಡ್ಡಿ ಸಾಹೇಬರು ತಮ್ಮ ಪಕ್ಕದಲ್ಲಿ ತೂಕು ಕೊಳ್ಳೋಕೆ ಎಷ್ಟು ಕೊಟ್ಟಿರಬಹುದು.
[ ಅಭಿಪ್ರಾಯ ಬರೆಯಿರಿ ]
   
    Upcoming Matches
SL Vs PAK - 1st Twenty20 Fri 1st Jun Int2020
SL Vs PAK - 2nd Twenty20 Sun 3rd Jun Int2020
ENG Vs WI - 3rd Test at Edgbaston Thu 7th Jun Test
Follow Oneindia Kannada on Twitter
Oneindia Kannada Facebook fan page
Write Comments on this Article