•  

ಕ್ರೇಜಿಲೋಕದಲ್ಲಿ ಗೋಲ್ಡನ್ ಗರ್ಲ್ ರಮ್ಯಾ ಗಲಭೆ

ಶುಕ್ರವಾರ, ಫೆಬ್ರವರಿ 3, 2012, 10:42 [IST]
ಕ್ರೇಜಿ ಸ್ಟಾರ್ ರವಿಚಂದ್ರನ್ ಮುಖ್ಯಭೂಮಿಕೆಯಲ್ಲಿರುವ 'ಕ್ರೇಜಿಲೋಕ' ಚಿತ್ರದಲ್ಲಿ ಗೋಲ್ಡನ್ ಗರ್ಲ್ ರಮ್ಯಾ ಗಲಭೆ ಎಬ್ಬಿಸಿದ್ದಾರೆ. ಅಚ್ಚರಿ ಪಡಬೇಡಿ, ರಮ್ಯಾ ಗಲಭೆ ಎಬ್ಬಿಸಿರುವುದು ಹಾಡಿನ ಮೂಲಕ. ಈ ಹಾಡನ್ನು ಮೊದಲು ಐಟಂ ಹಾಡು ಎನ್ನಲಾಗಿತ್ತು. ಇದರಿಂದ ಕೆರಳಿದ ರಮ್ಯಾ, ಇದು ಐಟಂ ಹಾಡಲ್ಲ ಎಂದು ಸ್ಪಷ್ಟಪಡಿಸಿ, ತಮ್ಮ ಮೇಲೆ ಇನ್ನೇನು ಬೀಳಲಿದ್ದ ಐಟಂ ಮುದ್ರೆಯಿಂದ ಪಾರಾದರು.

ಚಿತ್ರದ ನಿರ್ದೇಶಕಿ ಕವಿತಾ ಲಂಕೇಶ್ ಅವರೂ ಇದು ಐಟಂ ಹಾಡಲ್ಲ ಎಂದು ಸ್ಪಷ್ಟಪಡಿಸಿದ್ದರು. ಬಳಿಕ ಎಲ್ಲವೂ ತಣ್ಣಗಾಗಿತ್ತು. ಈಗ 'ಕ್ರೇಜಿಲೋಕ' ಚಿತ್ರ ಆಡಿಯೋ ಮಾರುಕಟ್ಟೆಗೆ ಬಂದಿದೆ. "ಗಲಭೆ ಗಲಭೆ ನಾನು ಹೋದಲ್ಲೆಲ್ಲಾ ಗಲಭೆ..." ಹಾಡು ಎಲ್ಲೆಲ್ಲೂ ಕೇಳಿಸುತ್ತಿದೆ.

ಗೀತ ಸಾಹಿತಿ ಕವಿರಾಜ್ ಬರೆದಿರುವ ಈ ಹಾಡಿನ ಬಗ್ಗೆ ಚಿತ್ರ ಬಿಡುಗಡೆಯಾಗುವವರೆಗೂ ಯಾವುದೇ ಪ್ರಚಾರ ನೀಡಬಾರದು. ಹಾಗಂತ ರಮ್ಯಾ ಕಟ್ಟಪ್ಪಣೆ ಮಾಡಿದ್ದಾರಂತೆ. ಹಾಗಾಗಿ 'ಗಲಭೆ' ಸದ್ಯಕ್ಕೆ ತಣ್ಣಗಾಗಿದೆ ಎನ್ನುತ್ತವೆ ಮೂಲಗಳು. ಗಾಯಕಿ ಚಿತ್ರಾ ಹಾಡಿರುವ ಈ ಹಾಡಿನ ಚಿತ್ರೀಕರಣ ನಡೆದದ್ದು ಮೈಸೂರು ಲ್ಯಾಂಪ್ಸ್‌ ಪ್ರದೇಶದಲ್ಲಿ. ರಮ್ಯಾ ಜೊತೆಗೆ ಹಲವಾರು ಸಲ ಕಲಾವಿದರು ಈ ಹಾಟ್ ಹಾಡಿನಲ್ಲಿ ಕುಣಿದಿದ್ದಾರೆ. (ಏಜೆನ್ಸೀಸ್)

User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
    Upcoming Matches
SL Vs PAK - 1st Twenty20 Fri 1st Jun Int2020
SL Vs PAK - 2nd Twenty20 Sun 3rd Jun Int2020
ENG Vs WI - 3rd Test at Edgbaston Thu 7th Jun Test
Follow Oneindia Kannada on Twitter
Oneindia Kannada Facebook fan page
Write Comments on this Article