•  

ಹುಟ್ಟೂರು ತ್ಯಾಮಗೊಂಡ್ಲುನಲ್ಲಿ ಕರಿಬಸವಯ್ಯ ಅಂತ್ಯಕ್ರಿಯೆ

ಶುಕ್ರವಾರ, ಫೆಬ್ರವರಿ 3, 2012, 17:42 [IST]
ಕನ್ನಡ ಚಿತ್ರಗಳ ಜನಪ್ರಿಯ ಹಾಸ್ಯ ನಟ, ರಂಗಭೂಮಿ ಚೇತನ ಕರಿಬಸವಯ್ಯ ಅವರು ಅಂತ್ಯಕ್ರಿಯೆ ಶನಿವಾರ (ಫೆ.4)ರಂದು ಅವರ ಹುಟ್ಟೂರಾದ ತ್ಯಾಮಗೊಂಡ್ಲುವಿನಲ್ಲಿ ಮಧ್ಯಾಹ್ನ ನೆರವೇರಲಿದೆ.

ಕರಿಬಸವಯ್ಯ ಅವರ ಪಾರ್ಥೀವ ಶರೀರವನ್ನು ಶನಿವಾರ ಅವರ ಹುಟ್ಟೂರಿಗೆ ಕೊಂಡೊಯ್ಯಲಾಗುತ್ತದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು (ಫೆ.3) ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಕೊಡಿಗೆಹಳ್ಳಿಯಲ್ಲಿ ಕರಿಬಸವಯ್ಯ ಜನಿಸಿದ್ದರು. ಶೇಷಾದ್ರಿಪುರಂ ಕಾಲೇಜಿನಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸಿದ್ದರು. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

ನಟರಾದ ಅಂಬರೀಷ್, ಜಗ್ಗೇಶ್, ರಮೇಶ್ ಅರವಿಂದ್, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಎಸ್ ನಾರಾಯಣ್, ತಾರಾ ಸೇರಿದಂತೆ ಕನ್ನಡ ಚಿತ್ರರಂಗದ ಹಲವಾರು ಗಣ್ಯರು ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ. (ಒನ್‌ಇಂಡಿಯಾ ಕನ್ನಡ)

User Comments
nandisha chilaveri 04 Feb 2012 01:12 pm
ಸಾವು ಬಂದಾಗ ಸ್ವೀಕರಿಸಬೇಕು ,ನೆನಪು ಬಂದಾಗ ಸ್ಮರಿಸಬೇಕು ,ಇನ್ನೊಬ್ಬರಿಗೆ ಸಹಾಯ ಮಾಡಬೇಕು ,ಇದು ಮಾನವ ಧರ್ಮ ..........
canamedi 03 Feb 2012 07:07 pm
ಒಳ್ಳೆಯ ಹಾಸ್ಯ ನಟ ಕಲಾವಿದ.ಅವರ ಆತ್ಮಕ್ಕೆ ಶಾಂತಿ ಮತ್ತು ಕುಟುಂಬಕ್ಕೆ ನಸ್ತಭಾರಿಸುವ ಶಕ್ತಿ ಕೊಡಲೆಂದು ಭಗವಂತನಲ್ಲಿ ಪ್ರಾರ್ಥನೆ.
[ ಅಭಿಪ್ರಾಯ ಬರೆಯಿರಿ ]
   
    Upcoming Matches
SL Vs PAK - 1st Twenty20 Fri 1st Jun Int2020
SL Vs PAK - 2nd Twenty20 Sun 3rd Jun Int2020
ENG Vs WI - 3rd Test at Edgbaston Thu 7th Jun Test
Follow Oneindia Kannada on Twitter
Oneindia Kannada Facebook fan page
Write Comments on this Article