ಸೂಪರ್ ಸ್ಟಾರ್ ಉಪೇಂದ್ರ ಜೊತೆ ಸೂಪರ್ ಚಿತ್ರದಲ್ಲಿ ಅಭಿನಯಿಸಿ ಮೆಚ್ಚುಗೆಗೆ ಪಾತ್ರರಾಗಿದ್ದ ನಯನತಾರಾ ಇನ್ನೊಂದು ಕನ್ನಡ ಚಿತ್ರಕ್ಕೆ ಸಹಿ ಹಾಕಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಿಗ್ ಬಜೆಟ್ ಚಿತ್ರವೊಂದಕ್ಕೆ ನಾಯಕಿಯಾಗುವ ಸಾಧ್ಯತೆಗಳಿವೆ ಎನ್ನುತ್ತವೆ ಮೂಲಗಳು.
ಆದರೆ ಸದ್ಯಕ್ಕೆ ನಯನತಾರಾ ಅಭಿನಯಿಸಲಿರುವ ಚಿತ್ರದ ಬಗ್ಗೆ ವಿವರಗಳು ಲಭ್ಯವಿಲ್ಲ. ಸಂಪೂರ್ಣ ವಿವರಗಳು ಸಿಗಬೇಕಾದರೆ ಸ್ವಲ್ಪ ಸಮಯ ಕಾಯಬೇಕು. ತೆಲುಗಿನ ಶ್ರೀರಾಮರಾಜ್ಯಂ ಎಂಬ ಪೌರಾಣಿಕ ಚಿತ್ರದಲ್ಲಿ ಅಭಿನಯಿಸಿದ್ದ ಬಳಿಕ ನಯನಿ ಚಿತ್ರರಂಗಕ್ಕೆ ಗುಡ್ ಬೈ ಹೇಳಲು ನಿರ್ಧರಿಸಿದ್ದರು.
ಬಳಿಕ ಪ್ರಭುದೇವ ಮತ್ತು ನಯನಿ ನಡುವೆ ಏನಾಯಿತೋ ಏನೋ ಇಬ್ಬರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ. ಈಗ ಈ ಬಿರುಕನ್ನು ಮುಚ್ಚುವ ಪ್ರಯತ್ನಗಳು ನಡೆಯುತ್ತಿವೆ. ಇದರ ಜೊತೆ ಜೊತೆಗೆ ನಯನಿ ಕೆಲವು ಚಿತ್ರಗಳಿಗೆ ಸಹಿ ಹಾಕಲಿರುವ ಅಂಶಗಳೂ ಬೆಳಕು ಕಾಣುತ್ತಿವೆ. (ಏಜೆನ್ಸೀಸ್)