ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಹೊಡಿ ಮಗ ಹೊಡಿ ಮಗ ಬಿಡಬ್ಯಾಡ ಅವ್ರ್ನ ಎಂಬಂತಹ ಪರಿಸ್ಥಿತಿ ಎದುರಾಗಿದೆ. ಫೆಬ್ರವರಿ 5ರಂದು ಕೇರಳ ಸ್ಟ್ರೈಕರ್ಸ್ ತಂಡವನ್ನು ಸುದೀಪ್ ತಂಡ ವಿಶಾಖಪಟ್ಟಣಂನಲ್ಲಿ ಎದುರಾಗಲಿದೆ.
ಈಗಾಗಲೆ ಮುಂಬೈ ಹೀರೋಸ್ ತಂಡವನ್ನು ಮಣಿಸಿರುವ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಕೇರಳ ಸ್ಟ್ರೈಕರ್ಸ್ ತಂಡ ದೊಡ್ಡ ಸವಾಲೇನಲ್ಲ. ಆಡಿರುವ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಕೇರಳ ಸ್ಟ್ರೈಕರ್ಸ್ ಗೆದ್ದಿದೆ. ಕರ್ನಾಟಕ ಬುಲ್ಡೋಜರ್ಸ್ 4 ಪಂದ್ಯಗಳಲ್ಲಿ 2ನ್ನು ಗೆದ್ದಿದೆ.
ಪಾಯಿಂಟ್ಸ್ ಪಟ್ಟಿಯಲ್ಲಿ ಕರ್ನಾಟಕ ತಂಡ 4 ಹಾಗೂ ಕೇರಳ ತಂಡ 2 ಪಾಯಿಂಟ್ಸ್ ಅಂತರದಲ್ಲಿದೆ. ಕರ್ನಾಟಕ ತಂಡದ ನೆಟ್ ರನ್ ರೇಟ್ ಕೇರಳ ತಂಡಕ್ಕೆ ಹೋಲಿಸಿದರೆ ಸಾಕಷ್ಟು ಮುಂದಿದೆ. ಈ ಎಲ್ಲ ಅಂಕಿಅಂಶಗಳನ್ನು ಪರಿಗಣಿಸಿದರೆ ಸುದೀಪ್ ತಂಡ ಕೇರಳ ತಂಡವನ್ನು ಚೆನ್ನಾಗಿ ಚಚ್ಚುವ ಚಾನ್ಸ್ ಅಧಿಕವಾಗಿದೆ.
ಸುದೀಪ್ ತಂಡದಲ್ಲಿ ಚಿರಂಜೀವಿ ಸರ್ಜಾ, ಧ್ರುವ್ (ವೈಸ್ ಕ್ಯಾಪ್ಟನ್), ಪ್ರದೀಪ್, ತರುಣ್ ಚಂದ್ರ, ರಾಹುಲ್ ಅವರಂತಹ ಯುವ ಪಡೆ ಇದೆ. ಇದನ್ನು ಸಮರ್ಥವಾಗಿ ಬಳಸಿಕೊಂಡರೆ ಈ ಪಂದ್ಯವನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸಬಹುದು. ಮೊದಲ ಮತ್ತು ಎರಡನೇ ಸೆಮಿಫೈನಲ್ ಪಂದ್ಯ ಫೆಬ್ರವರಿ 11ರಂದು ಚೆನ್ನೈನಲ್ಲಿ ನಡೆಯಲಿದೆ. ಫೆಬ್ರವರಿ 12ರಂದು ಹೈದರಾಬಾದಿನಲ್ಲಿ ಫೈನಲ್ಸ್ ನಡೆಯಲಿದೆ. (ಒನ್‌ಇಂಡಿಯಾ ಕನ್ನಡ)