•  

ದರ್ಶನ್ ಬುಲ್ ಬುಲ್ ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಷ್

ಗುರುವಾರ, ಫೆಬ್ರವರಿ 2, 2012, 10:43 [IST]
ರೆಬೆಲ್ ಸ್ಟಾರ್ ಅಂಬರೀಷ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಟ್ಟಿಗೆ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ದರ್ಶನ್ ಮುಂದಿನ ಚಿತ್ರ 'ಬುಲ್ ಬುಲ್' ಚಿತ್ರದ ಮೂಲಕ. ದರ್ಶನ್ ಅವರ ಹೋಂ ಬ್ಯಾನರ್ ಚಿತ್ರ ಇದಾಗಿದೆ.

ಈ ಹಿಂದೆ 'ಅಣ್ಣಾವ್ರು' ಚಿತ್ರದಲ್ಲಿ ಅಂಬರೀಷ್ ಜೊತೆ ದರ್ಶನ್ ಅಭಿನಯಿಸಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿದ್ದ 'ದೇವರ ಮಗ' ಚಿತ್ರದಲ್ಲೂ ಅಂಬರೀಷ್ ಜೊತೆ ದರ್ಶನ್ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ದರ್ಶನ್ ನೆಗೆಟೀವ್ ಪಾತ್ರವನ್ನು ಪೋಷಿಸಿದ್ದರು.

ತೆಲುಗಿನ ಹಿಟ್ ಚಿತ್ರ 'ಡಾರ್ಲಿಂಗ್' ರೀಮೇಕ್ ಬುಲ್ ಬುಲ್. ಈ ಚಿತ್ರಕ್ಕೆ ಎಂಡಿ ಶ್ರೀಧರ್ ಆಕ್ಷನ್ ಕಟ್ ಹೇಳಿದ್ದಾರೆ. ದಿನಕರ್ ತೂಗುದೀಪ ನಿರ್ಮಾಣದ ಚಿತ್ರ. ವಿ ಹರಿಕೃಷ್ಣ ಸಂಗೀತ, ಕೃಷ್ಣ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. ಅಂಬರೀಷ್ ಅವರು ದರ್ಶನ್‌ಗೆ ತಂದೆಯಾಗಿ ಚಿತ್ರದಲ್ಲಿ ಕಾಣಿಸಲಿದ್ದಾರೆ. ಚಿತ್ರದ ನಾಯಕಿಯ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. (ಏಜೆನ್ಸೀಸ್)

User Comments
nalini 10 Apr 2012 05:03 pm
i ಲೈಕ್ ದರ್ಶನ್ ಮತ್ತು ಆವರು ತುಂಬಾ ಚನ್ನಗೀ ಇದ್ದರೆ ಹಾವರ ಮೇಲೆ ತುಂಬಾ ನಂಬಿಕೆ ಇದ್ದೆ. ಹವ್ರು ಯಾರಿಗೂ ಮೋಸ ಮಾಡುವುದಿಲ್ಲ ನಿರ್ದೇಶಕರು ದಯವಿಟ್ಟು ಅವರನ್ನು ನಂಬಿ! ಹೇ ಇಸ್ ವೆರಿ ಗುಡ್ ಅಚ್ತೊರ್ ! ಆಲ್ ದಿ ಬೆಸ್ಟ್ ಟು ದರ್ಶನ್ ಅಂಡ್ ಅಮ್ಭಿ ಅಣ್ಣ
Chinnikrishna 02 Feb 2012 11:43 am
ಮಾನ್ಯ ದಟ್ಸ್ ಕನ್ನಡದವರೇ ಸುಮ್ಮನೆ ತಪ್ಪು ಮಾಹಿತಿಗಳನ್ನು ಕೊಡಬೇಡಿ. ಅಂಬರೀಶ್ & ದರ್ಶನ್ ನಟಿಸುತ್ತಿರೋದು ಎಂಡಿ ಶ್ರೀಧರ್ ನಿರ್ದೇಶನದ ಬುಲ್ ಬುಲ್ ಚಿತ್ರದಲ್ಲಿ.
E KUMAR 02 Feb 2012 11:14 am
chigari is not remake of Darling please make correction and publish sir bul bul is relasing this week the shoting is not started yet .
[ ಅಭಿಪ್ರಾಯ ಬರೆಯಿರಿ ]
    Upcoming Matches
SL Vs PAK - 1st Twenty20 Fri 1st Jun Int2020
SL Vs PAK - 2nd Twenty20 Sun 3rd Jun Int2020
ENG Vs WI - 3rd Test at Edgbaston Thu 7th Jun Test
Follow Oneindia Kannada on Twitter
Oneindia Kannada Facebook fan page
Write Comments on this Article