ಕನ್ನಡ ಚಿತ್ರಗಳ ಅರಗಿಣಿ ರಾಗಿಣಿ ದ್ವಿವೇದಿಗೆ ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸುವಂತೆ ಬುಲಾವ್ ಬಂದಿದೆ. ರಾಗಿಣಿ ಅಭಿನಯದ ಲೇಟೆಸ್ಟ್ 'ಆರಕ್ಷಕ' ಚಿತ್ರಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆ ಮಾತುಗಳು ಕೇಳಿಬಂದಿವೆ. ಇದರಿಂದ ರಾಗಿಣಿ ಸಖತ್ ಖುಷಿಯಾಗಿದ್ದಾರೆ.
ರಾಗಿಣಿಗೆ ಬಾಲಿವುಡ್‌ನಿಂದ ಆಫರ್‌ಗಳು ಬರುತ್ತಿವೆಯಂತೆ. ಆದರೆ ಇದುವರೆಗೂ ಯಾವುದೇ ಚಿತ್ರಕ್ಕೂ ತಾನು ಇನ್ನೂ ಒಪ್ಪಿಗೆ ನೀಡಿಲ್ಲ. ಕಾಲ ಕೂಡಿಬಂದು ಎಲ್ಲವೂ ಸರಿ ಅನ್ನಿಸಿದರೆ ಹಿಂದಿ ಚಿತ್ರಕ್ಕೆ ಸಹಿ ಹಾಕುತ್ತೇನೆ ಎಂದಿದ್ದಾರೆ ರಾಗಿಣಿ. ಸದ್ಯಕ್ಕೆ ಆಕೆ ಒಳಗೆ ಹೋಗಲೋ ಬೇಡವೋ ಎಂಬಂತೆ ಬಾಲಿವುಡ್ ಹೊಸ್ತಿಲಲ್ಲಿ ನಿಂತಿದ್ದಾರೆ.
ಆದರೆ ಕನ್ನಡ ಚಿತ್ರರಂಗದಲ್ಲಿ ಸದಾಕಾಲ ಉಳಿಯಲು ಬಯಸುತ್ತೇನೆ. ಕನ್ನಡ ಚಿತ್ರರಂಗವನ್ನು ಯಾವುದೇ ಕಾರಣಕ್ಕೂ ಬಿಡಲ್ಲ ಎಂದು ರಾಗಿಣಿ ಖಡಕ್ ಆಗಿ ಹೇಳಿದ್ದಾರೆ. ಉಪ್ಪಿ ಜೊತೆಗಿನ 'ಆರಕ್ಷಕ' ಚಿತ್ರದ ಅಂಡರ್ ವಾಟರ್ ಹಾಡು ತನಗೆ ಚೊಚ್ಚಲ ಅನುಭವ. ಈ ಹಾಡು ತುಂಬಾನೇ ಖುಷಿ ಕೊಟ್ಟಿದೆಯಂತೆ. (ಏಜೆನ್ಸೀಸ್)