ಇದುವರೆಗೂ ತಾನು ಅಭಿನಯಿಸಿದ 380 ಚಿತ್ರಗಳಲ್ಲಿ ಅಧಿಕವಾಗಿ ಕಾಣಿಸಿಕೊಂಡಿದ್ದು ಖಳನಟನಾಗಿಯೇ ಎಂದು ಪೋಷಕ ನಟ ಅವಿನಾಶ್ ಹೇಳಿದ್ದಾರೆ. ಅವರು ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನಭಾಗ್ಯ ಪಡೆಯಲು ಮಂತ್ರಾಲಯಕ್ಕೆ ಕುಟುಂಬ ಸಮೇತ ಆಗಮಿಸಿದ್ದರು.
ಮಠದಲ್ಲಿ ರಾತ್ರಿ ನಡೆದ ಪ್ರಹ್ಲಾದ ರಾಯರ ಚಿನ್ನದ ರಥೋತ್ಸವದಲ್ಲಿ ಪಾಲ್ಗೊಂಡರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇದುವರೆಗೂ ತಾನು ಕನ್ನಡದಲ್ಲಿ 340, ತೆಲುಗಿನಲ್ಲಿ 12, ತಮಿಳಿನಲ್ಲಿ 20 ಚಿತ್ರಗಳಲ್ಲಿ ಅಭಿನಯಿಸಿದ್ದೇನೆ.
'ಚಂದ್ರಮುಖಿ' (ಆಪ್ತಮಿತ್ರ) ಚಿತ್ರದ ಮೂಲಕ ಮೂರು ಭಾಷೆಗಳಲ್ಲಿ ಜನ ನನ್ನನ್ನು ಗುರುತಿಸುವಂತಾಯಿತು. ಇದುವರೆಗೂ ಹತ್ತಕ್ಕೂ ಹೆಚ್ಚು ಅತ್ಯುತ್ತಮ ನಟ ಪ್ರಶಸ್ತಿಗಳನ್ನು ಬಂದಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಮಠದ ಸಿಆರ್‌ಓ ನರಸಿಂಹ ಶಾಲು ಹೊದಿಸಿ ಫಲ ಮಂತ್ರಾಕ್ಷತೆಗಳನ್ನು ನೀಡಿ ಅವಿನಾಶ್ ಅವರನ್ನು ಗೌರವಿಸಿದರು. (ಏಜೆನ್ಸೀಸ್)