•  

ಸಿಸಿಎಲ್ ಟೂರ್ನಿಗೆ ಮಾಧ್ಯಮಗಳ ದಿವ್ಯ ಅಲಕ್ಷ್ಯ

ಮಂಗಳವಾರ, ಜನವರಿ 31, 2012, 12:48 [IST]
CCL - Season 2
ಸಿಸಿಎಲ್ ಪಂದ್ಯಗಳನ್ನು ಕರ್ನಾಟಕ ಮಾಧ್ಯಮ ಲೋಕ ಅಲಕ್ಷಿಸಿದೆಯೇ, ಬರಿಷ್ಕರಿಸಿದೆಯೇ? ಇಂಥದೊಂದು ಗುಮಾನಿ ನಿಮ್ಮನ್ನು ಕಾಡದೇ ಇರದು. ನಮಗಂತೂ ಕಾಡಿದೆ. ಯಾಕೆಂದರೆ ಸಿಸಿಎಲ್ ಪಂದ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಗಳು ನಿಮಗೆ ಪ್ರಿಂಟ್ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಲಭ್ಯವಾಗುತ್ತಿಲ್ಲ.

ದಿನದಿಂದ ದಿನಕ್ಕೆ ಭರಪೂರವಾಗಿ ಪ್ರೇಕ್ಷಕರನ್ನು ಆಕರ್ಷಿಸುತ್ತಿರುವ ಸಿಸಿಎಲ್ ಪಂದ್ಯವಾಳಿ ಸನ್ ನೆಟ್ವರ್ಕ್ ಸಮೂಹ ವಾಹಿನಿಯಲ್ಲಿ ನೇರಪ್ರಸಾರಗೊಳ್ಳುತ್ತಿದೆ. ಕರ್ನಾಟಕ ಬುಲ್ಡೋಜರ್ ಆಡುವ ಪಂದ್ಯಗಳನ್ನು ಉದಯ ವಾಹಿನಿ ಮತ್ತು ಇತರ ಗುಂಪುಗಳಲ್ಲಿ ಆಡುವ ತಂಡಗಳ ಪಂದ್ಯಗಳನ್ನು ಸನ್ ಗ್ರೂಪ್ ನ ಇತರ ವಾಹಿನಿಗಳು ನೇರ ಪ್ರಸಾರ ಮಾಡುತ್ತಿವೆ.

ಚೆನ್ನೈ ಮತ್ತು ಬೆಂಗಳೂರು ನಡುವಿನ ಪಂದ್ಯವನ್ನು ವೀಕ್ಷಿಸಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ವೀಕ್ಷಿಸಿದರೆ ಬೆಂಗಳೂರು ಮತ್ತು ಮುಂಬೈ ನಡುವಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾನುವಾರದ ಪಂದ್ಯವನ್ನು ದಾಖಲೆಯ ನಲವತ್ತು ಸಾವಿರ ಪ್ರೇಕ್ಷಕರು ವೀಕ್ಷಿಸಿದ್ದಾರೆ. ಇಂಡಿಯ- ಪಾಕಿಸ್ತಾನ ಏಕದಿವಸೀಯ ಪಂದ್ಯಕ್ಕೆ ಇಷ್ಟು ಸಂಖ್ಯೆಯಲ್ಲಿ ಪ್ರೇಕ್ಷಕರು ಜಮಾಯಿಸುವುದನ್ನು ನಾವು ನೋಡಿದ್ದೇವೆ. ಬರೀ ಬೆಂಗಳೂರು ಮಾತ್ರವೇಕೆ ಹೈದರಾಬಾದ್, ಕೊಚ್ಚಿ, ಚೆನ್ನೈನಲ್ಲೂ ಸಿಸಿಎಲ್ ಪಂದ್ಯಗಳಿಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಉದಯವಾಣಿ ದೈನಿಕ, ಸಂಜೆವಾಣಿ ಪತ್ರಿಕೆ ಬಿಟ್ಟರೆ ಉಳಿದ ಪ್ರಿಂಟ್ / ಎಲೆಕ್ಟ್ರಾನಿಕ್ ಮಾಧ್ಯಮದವರಿಗೆ ಸಿಸಿಎಲ್ ಟೂರ್ನಿ ಬಹುಷಃ ಒಂದು ಹಾಟ್ ಸುದ್ದಿ ಅಲ್ಲದಿರಬಹುದು. ಏನೇ ಇರಲಿ, ಇಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಜಾಣನಡೆಗೆ ಹೆಸರುವಾಸಿಯಾದ ಸನ್ ನೆಟ್ವರ್ಕ್ ಅಂಗ ಸಂಸ್ಥೆಯಾದ ಉದಯವಾಹಿನಿ, ಸಿಸಿಎಲ್ ಪಂದ್ಯಗಳ ಮೂಲಕ ತನ್ನ ಟಿ ಆರ್ ಪಿ ಯನ್ನು ಇನ್ನಷ್ಟು ಹೆಚ್ಚಿಸಿ ಕೊಂಡಿರುವುದಂತೂ ನಿಜ. ಯಾರೇ ಕೂಗಾಡಲಿ, ಯಾರೇ ಹೋರಾಡಲಿ ನಿಮ್ಮ ಪ್ರಸಿದ್ದ ಕನ್ನಡ ಅಂತರ್ಜಾಲ ತಾಣವಾದ 'ಒನ್ಇಂಡಿಯಾಕನ್ನಡ' ಸಿಸಿಎಲ್ ಟೂರ್ನಿಯ ಫಲಿತಾಂಶ, ತಾರಾ ರಂಗು ಬಳಿದುಕೊಂಡ ಆಕರ್ಷಕ ಚಿತ್ರಗಳನ್ನು ಪ್ರಕಟಿಸಿದೆ, ಪ್ರಕಟಿಸುತ್ತದೆ, ನೋಡುತ್ತಾಯಿರಿ.

User Comments
altaf 05 Feb 2012 06:10 pm
ಮಾಧ್ಯಮಗಳ ನಿಲುವು ಸ್ವಾಗತಾರ್ಹ.ಪ್ರತಿದಿನ ಕ್ರಿಕೆಟ್ ಕ್ರಿಕೆಟ್ ಅಂತ ತನ್ನ ಕೆಲಸ ಕಾರ್ಯಗಳನ್ನು ಬಿಟ್ಟು ಟಿವಿ ಎದುರು ಕುಳಿತು ಹೆಂಡ್ತಿ ಮಕ್ಕಳ ಹೊಟ್ಟೆ ತುಂಬಿಸದೆ ಮತ್ತೂ ಬಡತನದತ್ತ ಪರಿವಾರವನ್ನು ಕೊಂಡೊಯ್ಯುತ್ತಿರುವ ಈ ಕಾಲದಲ್ಲಿ ಮಾಧ್ಯಮ ಸ್ವಲ್ಪನಾದರೂ ಮಧ್ಯಮ ವರ್ಗದ ಸಮಾಜಕ್ಕೆ ಕಳಕಳಿಯನ್ನು ತೋರಿಸುತ್ತಿರುವುದು ಸ್ವಾಗತಾರ್ಹ.
[ ಅಭಿಪ್ರಾಯ ಬರೆಯಿರಿ ]
   
    Upcoming Matches
SL Vs PAK - 1st Twenty20 Fri 1st Jun Int2020
SL Vs PAK - 2nd Twenty20 Sun 3rd Jun Int2020
ENG Vs WI - 3rd Test at Edgbaston Thu 7th Jun Test
Follow Oneindia Kannada on Twitter
Oneindia Kannada Facebook fan page
Write Comments on this Article