•  

ನಟಿ ರಮ್ಯಾ ಮತ್ತು ಯಶ್ ನಡುವೆ ಕೋಲ್ಡ್ ವಾರ್

ಮಂಗಳವಾರ, ಜನವರಿ 31, 2012, 10:29 [IST]
ಗೋಲ್ಡನ್ ಗರ್ಲ್ ರಮ್ಯಾ ಹಾಗೂ ಯಶ್ ನಡುವೆ ಆಲ್ ಈಸ್ ನಾಟ್ ವೆಲ್ ಎಂಬ ಸ್ಫೋಟಕ ಸುದ್ದಿ ಇದೆ. ಇದೇ ಮೊದಲ ಬಾರಿಗೆ ಇವರಿಬ್ಬರೂ 'ಲಕ್ಕಿ' ಚಿತ್ರದಲ್ಲಿ ಕೆಲಸ ಮಾಡುತ್ತಿದ್ದು ಇಬ್ಬರ ನಡುವಿನ ಅಂತರ ಅಗಾಧವಾಗಿ ಬೆಳೆದಿದೆ ಎಂಬ ಗುಸುಗುಸು ಗಾಂಧಿನಗರದಲ್ಲಿ ಡ್ಯಾನ್ಸ್ ಮಾಡುತ್ತಿದೆ.

'ಲಕ್ಕಿ' ಆಡಿಯೋ ಬಿಡುಗಡೆ ವೇಳೆಯಂತೂ ಇವರಿಬ್ಬರ ನಡುವೆ ಏನೋ ಆಗಬಾರದ್ದು ಆಗಿದೆ ಎಂಬ ಸಣ್ಣ ಅನುಮಾನ ಸುಳಿದಾಡುತ್ತಿತ್ತು. ಆದರೆ ಇವರಿಬ್ಬರ ನಡುವೆ ಅಂತಹದ್ದೇನು ಆಗಿಲ್ಲ ಎಂಬುದು ಅವರ ಮಾತುಗಳಲ್ಲೇ ವ್ಯಕ್ತವಾಗುತ್ತಿತ್ತು.

ರಮ್ಯಾ ಮಾತನಾಡುತ್ತಾ, 'ಲಕ್ಕಿ' ಚಿತ್ರಕ್ಕಾಗಿ ಯಶ್ ಸಿಕ್ಕಾಪಟ್ಟೆ ವರ್ಕ್ ಮಾಡಿದ್ದಾನೆ. ಥೇಟ್ ಸುದೀಪ್ ತರಹ ಅದು ಮಾಡು, ಇದು ಮಾಡು ಎನ್ನುತ್ತಿದ್ದ ಎಂದಿದ್ದಾರೆ ರಮ್ಯಾ. ಇದಕ್ಕೆ ಯಶ್, ನಾನು ರಮ್ಯಾ ತರಹ ಹುಟ್ಟು ಕಲಾವಿನಲ್ಲ. ಗಂಟೆಗಟ್ಟಲೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರೂ ಶಾಟ್ ರೆಡಿ ಎಂದ ತಕ್ಷಣ ಪರ್ಫೆಕ್ಟ್ ಅಭಿನಯ ನೀಡಿ ಓಕೆ ಮಾಡುತ್ತಿದ್ದರು.

ನಾನು ತುಂಬಾ ರಿಹರ್ಸಲ್ಸ್ ಮಾಡುತ್ತಿದ್ದೆ. ಆದರೆ ರಮ್ಯಾ ರಿಹರ್ಸಲ್ಸ್ ಇಲ್ಲದೇನೆ ಅಭಿನಯಿಸುತ್ತಿದ್ದರು ಎಂದು ಯಶ್ ಕೊಂಡಾಡಿ ಗಾಂಧಿನಗರದ ಬಾಯಿಗೆ ಗೋದ್ರೇಜ್ ಬೀಗ ಜಡಿದಿದ್ದಾರೆ. ಆದರೂ ಗಾಂಧಿನಗರಕ್ಕೆ ಇವರಿಬ್ಬರ ಮೇಲಿನ ಅನುಮಾನ ಬಗೆಹರಿದಿಲ್ಲ. (ಏಜೆನ್ಸೀಸ್)
User Comments
sonu priya 31 Jan 2012 01:03 pm
ಯಶ್ ಇಸ್ ನಾಟ್ ಥಟ್ ಕಿಂಡ ಆಫ್ ಪೆರ್ಸೋನ್ ಮಿಘ್ತ್ ಬಿ ಅತ್ತಿತುದೆ ಫ್ರೊಂ ರಮ್ಯ
[ ಅಭಿಪ್ರಾಯ ಬರೆಯಿರಿ ]
    Upcoming Matches
SL Vs PAK - 1st Twenty20 Fri 1st Jun Int2020
SL Vs PAK - 2nd Twenty20 Sun 3rd Jun Int2020
ENG Vs WI - 3rd Test at Edgbaston Thu 7th Jun Test
Follow Oneindia Kannada on Twitter
Oneindia Kannada Facebook fan page
Write Comments on this Article