ಕನ್ನಡದ ಮೇಲಿನ ಬಹುಪ್ರೀತಿಯ ಕಾರಣಕ್ಕೆ ರಮ್ಯಾ ಪರಭಾಷೆಯಲ್ಲಿನ ಅವಕಾಶಗಳನ್ನು ಹುಡುಕಿಕೊಂಡು ಹೋಗುತ್ತಿಲ್ಲ. ಆದರೆ ತಾನಾಗಿಯೇ ಬಂದ ಅವಕಾಶಗಳನ್ನು ಬಿಡುತ್ತಿಲ್ಲ. ಕಾರಣ, ರಮ್ಯಾ ಪ್ರಕಾರ ಕಲಾವಿದರಿಗೆ ಭಾಷೆಯ ಹಂಗಿರಬಾರದು. ಹಾಗಾಗಿಯೇ ಅವರು ಪರಭಾಷೆಯ ಚಿತ್ರಗಳಲ್ಲಿ ನಟಿಸಿ ಮತ್ತೆ ಬೆಂಗಳೂರಿಗೆ ಬಂದು ಬಿಡುತ್ತಾರೆ.
"ನನಗೆ ಎಲ್ಲಾ ಭಾಷೆಗಳಲ್ಲೂ ನಟಿಸಬೇಕೆಂಬ ಆಸೆ. ಪ್ರತಿಭೆಗೆ ಭಾಷೆ ಯಾವುದಾದರೇನು? ನನ್ನ ಮೊದಲ ಪ್ರಾಶಸ್ತ್ಯ ಕನ್ನಡ ಚಿತ್ರಗಳಿಗೆ" ಎನ್ನುತ್ತಾರೆ ರಮ್ಯಾ. ಸದ್ಯ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ನಟಿಸುತ್ತಿರುವ ರಮ್ಯಾ, ಕಠಾರಿ ವೀರ ಸುರಸುಂದರಾಂಗಿ ಚಿತ್ರದಲ್ಲಿ ದೇವಲೋಕದ ಅಪ್ಸರೆ ಪಾತ್ರದಲ್ಲಿ ನಟಿಸಿದ್ದಾರೆ.
ಒಟ್ಟಿನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾಲಿಗೆ ರಮ್ಯಾ ಕೂಡ ಸೇರ್ಪಡೆಯಾದಂತಾಗಿದೆ. ಶಿವಣ್ಣ ಕೆಲವು ವರ್ಷಗಳ ಹಿಂದೆಯೇ ರಿಮೇಕ್ ಚಿತ್ರಗಳಿಗೆ ಗುಡ್ ಬೈ ಹೇಳಿದ್ದರು. ನೆನಪಿರಲಿ ಖ್ಯಾತಿಯ ಪ್ರೇಮ್ ಕುಮಾರ್ ಕೂಡ ಇದೇ ರೀತಿ ಘೋಷಣೆ ಮಾಡಿದ್ದರೂ, ಅವಕಾಶಗಳ ಕೊರತೆಯಿಂದ ತನ್ನ ನಿಲುವಿನಿಂದ ಹಿಂದೆ ಸರಿಯಬೇಕಾಗಿ ಬಂದಿತ್ತು.
ಇದೀಗ ರಮ್ಯಾ ನಡೆ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿರುವುದಂತೂ ನಿಜ. ಕಾರಣ, ರಮ್ಯಾಳಂತ ನಟಿ ಮಾತ್ರ ಈ ನಿರ್ಧಾರ ಮಾಡಲು ಸಾಧ್ಯವೋ ಏನೋ! ಒಟ್ಟಿನಲ್ಲಿ ರಮ್ಯಾ ಅಭಿಮಾನಿಗಳು ಖುಷಿಯಾಗಿದ್ದಾರೆ. ಕನ್ನಡ ಚಿತ್ರರಂಗದ ಏಳಿಗೆಗೆ ರಮ್ಯಾರ ಈ ನಡೆ ಸಹಕಾರಿಯಾದರೆ ರಮ್ಯಾಗೆ ಇನ್ನಷ್ಟು ಅಭಿಮಾನಿಗಳು ಖಾತ್ರಿ. (ಒನ್ ಇಂಡಿಯಾ ಕನ್ನಡ)