ಸತತ ಮೂರು ವರ್ಷಗಳಿಂದ ಅಯ್ಯಪ್ಪ ಸ್ವಾಮಿ ಮಾಲೆ ಧರಿಸುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಬಾರಿಯೂ ಅಯ್ಯಪ್ಪ ಮಾಲೆ ಹಾಕಿದ್ದಾರೆ. ಶಿವಣ್ಣನಿಗೆ ಗುರುಗಳು ಹಿರಿಯ ನಟ ಶಿವರಾಂ. ಇಪ್ಪತ್ತೊಂದು ದಿನಗಳ ಕಾಲ ಶಿವಣ್ಣ ಅಯ್ಯಪ್ಪ ವ್ರತಾಚರಣೆ ಮಾಡುತ್ತಿದ್ದಾರೆ.
ಶಿವರಾಜ್ ಕುಮಾರ್ ಅವರ ನಾಗವಾರ ಮನೆಯಲ್ಲಿ ಪೂಜೆ ಮೂಲಕ ಮಾಲೆ ಸ್ವೀಕರಿಸಲಾಯಿತು. ಶಿವಣ್ಣನ ಜೊತೆ ನಿರ್ದೇಶಕ ರಘುರಾಂ, ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ ಚಂದ್ರಶೇಖರ್ ಅವರೂ ಶಬರಿಮಲೆಗೆ ಪಾದ ಬೆಳೆಸುತ್ತಿದ್ದಾರೆ. ಇವರೆಲ್ಲಾ 21 ದಿನಗಳ ವ್ರತಾಚರಣೆ ಬಳಿಕ ಫೆಬ್ರವರಿ 16ರಂದು ಶಬರಿಮಲೆಗೆ ಹೊರಡಲಿದ್ದಾರೆ.
ಅಯ್ಯಪ್ಪ ಸ್ವಾಮಿ ದರ್ಶನ ಭಾಗ್ಯ ಪಡೆದುಕೊಂಡು ಫೆಬ್ರವರಿ 19ಕ್ಕೆ ಹಿಂತಿರುಗಲಿದ್ದಾರೆ. ಈ ಹಿಂದೆ ವರನಟ ಡಾ.ರಾಜ್‌ಕುಮಾರ್ ಜೊತೆ ಶಬರಿಮಲೆಗೆ ಶಿವಣ್ಣ ಹೋಗುತ್ತಿದ್ದರು. ಅಣ್ಣಾವ್ರು ಮಾಲೆ ಹಾಕಿದಾಗಿನ ವಸ್ತ್ರಗಳನ್ನೇ ಶಿವಣ್ಣ ಬಳಸುತ್ತಿರುವುದು ವಿಶೇಷ. (ಒನ್‌ಇಂಡಿಯಾ ಕನ್ನಡ)