•  

ಸಿಸಿಎಲ್ ಪಾಯಿಂಟ್ಸ್ ಪಟ್ಟಿ; ಯಾರ ಮುಡಿಗೆ ಕಪ್?

ಸೋಮವಾರ, ಜನವರಿ 30, 2012, 18:37 [IST]
Celebrity Cricket League
ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಒಟ್ಟು 4 ಪಂದ್ಯಗಳಲ್ಲಿ ಎರಡನ್ನು ಗೆದ್ದಿದೆ. ಚೆನ್ನೈ ರೈನೋಸ್ ವಿರುದ್ಧ ಸೋತಿರುವ ತಂಡ ಮುಂಬೈ ಹೀರೋಸ್ ತಂಡವನ್ನು ಭಾನುವಾರ (ಜ.29) ಮಣ್ಣು ಮುಕ್ಕಿಸಿ ನೀರು ಕುಡಿಸಿ ಮನೆಗೆ ಕಳುಹಿಸಿದೆ.

ಕಿಕ್ಕಿರಿದ ಕೆಎಸ್‌ಸಿಎ ಮೈದಾನದಲ್ಲಿ ಭಾನುವಾರ (ಜ.29) ನಡೆದ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ರೋಚಕ 13 ರನ್‌ಗಳ ಗೆಲುವು ದಾಖಲಿಸಿದೆ. ಸಖತ್ ಜಾಲಿ ಕೊಟ್ಟ ಈ ಪಂದ್ಯ ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕಿಂತಲೂ ಜಿದ್ದಾಜಿದ್ದಿಯಾಗಿತ್ತು. ಕಣ್ಣಿಗೆ ಹಬ್ಬ, ಮನಸ್ಸಿಗೆ ಮುದ ನೀಡಿದ ಈ ಪಂದ್ಯ ನೋಡದವ ನಿಜಕ್ಕೂ ಪಾಪಿ ಎನ್ನಬಹುದು.

ಫೆಬ್ರವರಿ 5ರಂದು ವಿಶಾಖಪಟ್ಟಣಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೇರಳ ಸ್ಟ್ರೈಕರ್ಸ್‌ನ್ನು ಕರ್ನಾಟಕ ಬುಲ್ಡೋಜರ್ಸ್ ತಂಡ ಮುಖಾಮುಖಿಯಾಗಲಿದೆ. ಪಂದ್ಯ ಮಧ್ಯಾಹ್ನ 2 ರಿಂದ 6 ಗಂಟೆಗೆ ನೇರ ಪ್ರಸಾರದಲ್ಲಿ ಕಣ್ತುಂಬಿಕೊಳ್ಳಬಹುದು. ಸಿಸಿಎಲ್ ತಂಡಗಳ ಪಾಯಿಂಟ್ಸ್ ಪಟ್ಟಿ ಈ ಕೆಳಕಂಡಂತಿದೆ. ಯಾರ ಮುಡಿಗೆ ಕಪ್ ಸಿಗಬಹುದು? ಗೆಸ್ ಮಾಡಿ ಕಾಮೆಂಟ್ ಹೊಡೀರಿ.


ತಂಡ



ಪಂದ್ಯಗಳು



ಗೆಲುವು



ಟೈ



ಸೋಲು



ಪಾಯಿಂಟ್ಸ್



ನೆಟ್‍ ರನ್‌ರೇಟ್



ಕರ್ನಾಟಕ ಬುಲ್ಡೋಜರ್ಸ್



4



2



0



2



4



1.061



ತೆಲುಗು ವಾರಿಯರ್ಸ್



4



3



1



0



7



1.187



ಚೆನ್ನೈ ರೈನೋಸ್



4



2



0



2



4



-0.268



ಮುಂಬೈ ಹೀರೋಸ್



4



1



1



2



3



-0.190



ಕೇರಳ ಸ್ಟೈಕರ್ಸ್



3



1



0



2



2



-0.382



ಬೆಂಗಾಲ್ ಟೈಗರ್ಸ್



3



1



0



2



2



-2.086


User Comments
devraj 31 Jan 2012 09:37 am
ಭಲೇ ಸುದೀಪ್ ಅಂಡ್ ಕಂಪನಿ !!!!!!!!!! ಹೀಗೆಯೇ ಮುನ್ನುಗ್ಗುತ್ತಿರಿ!!!!!! ಜೈ ಕರ್ನಾಟಕ!!!!!!! ಜೈ ಕನ್ನಡಾಂಬೆ!!!!!!!!!
ranga 31 Jan 2012 09:30 am
ಕರ್ನಾಟಕ ಬುಲ್ಡೋಜರ್ಸ್
[ ಅಭಿಪ್ರಾಯ ಬರೆಯಿರಿ ]
    Upcoming Matches
SL Vs PAK - 1st Twenty20 Fri 1st Jun Int2020
SL Vs PAK - 2nd Twenty20 Sun 3rd Jun Int2020
ENG Vs WI - 3rd Test at Edgbaston Thu 7th Jun Test
Follow Oneindia Kannada on Twitter
Oneindia Kannada Facebook fan page
Write Comments on this Article