ಅಂಬಾರಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಯಶಸ್ವೀ ನಿರ್ದೇಶಕ ಎನಿಸಿಕೊಂಡಿರುವ ಎ. ಪಿ. ಅರ್ಜುನ್, ಸದ್ಯದಲ್ಲೇ ಅದ್ದೂರಿ ಚಿತ್ರದ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇನ್ನೇನು ಸದ್ಯದಲ್ಲೇ ಆಡಿಯೋ ಬಿಡುಗಡೆ ಸಮಾರಂಭ ನಡೆಯಲಿದೆ. ನಂತರ ತೆರೆಯ ಮೇಲೆ ಅದ್ದೂರಿಯ ಮೆರವಣಿಗೆ.
ಅರ್ಜುನ್ ಸರ್ಜಾ ಅಳಿಯ, ಚಿರಂಜೀವಿ ಸರ್ಜಾ ತಮ್ಮ 'ಧ್ರುವ ಸರ್ಜಾ' ನಾಯಕರಾಗಿರುವ ಈ ಚಿತ್ರದ ನಾಯಕಿ ಅಚ್ಚಕನ್ನಡತಿ ರಾಧಿಕಾ ಪಂಡಿತ್. ಶಂಕರ್ ರೆಡ್ಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಂಬಾರಿ ಎಂಬ ಹಿಟ್ ಚಿತ್ರ ಕೊಟ್ಟ ಅರ್ಜುನ್, ಅದ್ದೂರಿಯನ್ನೂ ಕೂಡ ಚೆನ್ನಾಗಿ ಮಾಡಿದ್ದಾರೆಂಬ ಮಾತು ಗಾಂಧಿನಗರದ ಅಂಗಳದಲ್ಲಿ ಕೇಳಿ ಬರುತ್ತಿದೆ.
ಅರ್ಜುನ್ ಅದ್ದೂರಿಯನ್ನು ನಿಧಾನವಾಗಿ ತೆರೆಗೆ ತರುತ್ತಿರುವ ಉದ್ದೇಶ ಚಿತ್ರ ಚೆನ್ನಾಗಿದೆ ಎಂಬ ಕಾರಣಕ್ಕೆ ಎಂಬುದು ಹಲವರ ಅಭಿಪ್ರಾಯ. ಕಾರಣ, ಸಾಕಷ್ಟು ಪರಿಶ್ರಮವಹಿಸಿ ಕಥೆ, ಚಿತ್ರಕಥೆ ಮಾಡಲಾಗಿದೆ. ಚಿತ್ರದ ಬಗ್ಗೆ ಧ್ರುವ ಸರ್ಜಾ ಅತೀವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಥೆ ಹಾಗೂ ಪಾತ್ರ ಚೆನ್ನಾಗಿದ್ದರೆ ಮಾತ್ರ ಒಪ್ಪಿಕೊಳ್ಳುವ ನಟಿ ರಾಧಿಕಾ ಪಂಡಿತ್ ನಾಯಕಿ.
ಹಾಡುಗಳು ಸಖತ್ ಚೆನ್ನಾಗಿದ್ದು ಮೋಡಿ ಮಾಡಲಿವೆ ಎಂಬುದು ಚಿತ್ರತಂಡದ ಅನಿಸಿಕೆ. ಆಡಿಯೋ ಬಿಡುಗಡೆ ದಿನ ಸದ್ಯದಲ್ಲೇ ಘೋಷಣೆಯಾಗಲಿದೆ. ಕನ್ನಡದ ಸಿನಿಪ್ರೇಕ್ಷಕರು ಅಪಾರ ನಿರೀಕ್ಷೆಯಿಟ್ಟು ಆಡಿಯೋ ಬಿಡುಗಡೆ ಹಾಗೂ ಚಿತ್ರ ತೆರೆಗೆ ಬರುವುದನ್ನೇ ಕಾಯುತ್ತಿದ್ದಾರೆ. ಕಾಯಿಸುತ್ತಿರುವ ಅರ್ಜುನ್ ಮೀಸೆಯಡಿ ನಗುತ್ತಿದ್ದಾರೆಂಬ ಸುದ್ದಿ ಗಾಂಧಿನಗರದ ನಾರದನಿಂದ ಹಬ್ಬಿದೆ. (ಒನ್ ಇಂಡಿಯಾ ಕನ್ನಡ)