•  

ಜ.28ರಂದು ನಮ್ಮಣ್ಣ ಡಾನ್ ರಮೇಶ್ ಫ್ಲಾಷ್ ಮಾಬ್

ಶುಕ್ರವಾರ, ಜನವರಿ 27, 2012, 15:31 [IST]
ಜನಪ್ರಿಯ ನಟ ರಮೇಶ್ ಅರವಿಂದ್ ಮೊಟ್ಟ ಮೊದಲ ಬಾರಿಗೆ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಜ.28ರ ಶನಿವಾರ ಸಂಜೆ 5ಗಂಟೆಗೆ ಅವರು ಫ್ಲಾಷ್ ಮಾಬ್ ನಡೆಸಲಿದ್ದಾರೆ. ಅಂದರೆ ಇದ್ದಕ್ಕಿಂದ್ದಂತೆ ದಿಢೀರ್ ಎಂದು ಯಾವುದಾರು ಒಂದು ಮಾಲ್‌ನಲ್ಲಿ ಪ್ರತ್ಯಕ್ಷವಾಗುವುದು. ಅಲ್ಲಿನವರೊಂದಿಗೆ ಕುಣಿಯುವುದು.

ಆದರೆ ಯಾವ ಮಾಲ್‌ನಲ್ಲಿ ಎಂಬುದು ಮಾತ್ರ ಸಸ್ಪೆನ್ಸ್. ಮೊದಲೇ ಹೇಳಿದರೆ ಜನ ಜಂಗುಳಿ ಜಮಾಯಿಸಿ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ರಮೇಶ್ ಈ ಬಗ್ಗೆ ಸಸ್ಪೆನ್ಸ್ ಕಾದಿರಿಸಿದ್ದಾರೆ. ಬೆಂಗಳೂರಿನ ಯಾವುದಾದರೂ ಮಾಲ್‌ನಲ್ಲಿ ಶನಿವಾರ ದಿಢೀರ್ ಪ್ರತ್ಯಕ್ಷವಾಗಿ ಸರ್ಪ್ರೈಸ್ ನೀಡಲಿದ್ದಾರೆ. (ಎಲ್ಲಿ ನಡೆಯಬಹುದು ಎಂಬ ಸಣ್ಣ ಸುಳಿವು ಇದೇ ಪುಟದಲ್ಲಿದೆ!!)

ಕೇವಲ 10 ನಿಮಿಷಗಳ ಕಾಲ ಈ ನೃತ್ಯಪ್ರದರ್ಶನ ನಡೆಯಲಿದೆ. ಒಂದು ವೇಳೆ ನಿಮಗೆ ಆ ಅದೃಷ್ಟವಿದ್ದರೆ ರಮೇಶ್ ಜೊತೆ ನೀವೂ ಕುಣಿಯಬಹುದು. ಈ ಫ್ಲಾಷ್ ಮಾಬ್‌ನಲ್ಲಿ 'ನಮ್ಮಣ್ಣ ಡಾನ್' ಚಿತ್ರತಂಡದ ತಾರೆಗಳೂ ಕುಣಿಯಲಿರುವುದು ವಿಶೇಷ. ಫ್ಲಾಷ್ ಮಾಬ್‌ನಲ್ಲಿ ಜನಪ್ರಿಯ ನಟನೊಬ್ಬ ಪಾಲ್ಗೊಳ್ಳುತ್ತಿರುವುದು ಭಾರತದಲ್ಲಿ ಇದೇ ಮೊದಲು ಎನ್ನಲಾಗಿದೆ. (ಏಜೆನ್ಸೀಸ್)
User Comments
ರುಚಿತಾ 27 Jan 2012 07:11 pm
ಯುರೇಕಾ ಗೊತ್ತಾಯ್ತು ಮಲ್ಲೇಶ್ವರಂನಲ್ಲಿ...ಅಲ್ಲಿರುವುದು ಒಂದೇ ಮಾಲ್ ಹಹಹ್ಹ!!!!
[ ಅಭಿಪ್ರಾಯ ಬರೆಯಿರಿ ]
    Upcoming Matches
SL Vs PAK - 1st Twenty20 Fri 1st Jun Int2020
SL Vs PAK - 2nd Twenty20 Sun 3rd Jun Int2020
ENG Vs WI - 3rd Test at Edgbaston Thu 7th Jun Test
Follow Oneindia Kannada on Twitter
Oneindia Kannada Facebook fan page
Write Comments on this Article