ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ 'ಚಿಂಗಾರಿ' ಚಿತ್ರ ಮುಂದಿನ ತಿಂಗಳು ಫೆಬ್ರವರಿ 3, 2012ರಂದು ರಾಜ್ಯದಾದ್ಯಂತ ಬಿಡುಗಡೆ ಆಗಲಿದೆ. ಒಟ್ಟೂ 110ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣಲಿರುವ ಚಿಂಗಾರಿ ಚಿತ್ರ, ಇನ್ನೂ ಹೆಚ್ಚು ಚಿತ್ರಮಂದಿರಗಳನ್ನು ಪಡೆದರೆ ಆಶ್ಚರ್ಯವಿಲ್ಲ. ಚಿಂಗಾರಿ 'ಹವಾ' ಇಡೀ ರಾಜ್ಯದ ತುಂಬಾ ಬಹಳಷ್ಟು ವ್ಯಾಪಿಸಿದೆ.
ಕಾರಣ, ಚಿಂಗಾರಿ ನಿರ್ಮಾಪಕರಾದ ಮಹಾದೇವ್ ಮತ್ತು ಮನು ಚಿತ್ರದ ಪ್ರಚಾರ ಕಾರ್ಯವನ್ನು ಸಾಕಷ್ಟು ವಿಭಿನ್ನ ಹಾಗೂ ಅಗತ್ಯಕ್ಕೆ ತಕ್ಕಂತೆ ಮಾಡುತ್ತಿದ್ದಾರೆ. ಚಿತ್ರದ ಬಗ್ಗೆ ಈಗಾಗಲೇ ಇರುವ ನಿರೀಕ್ಷೆ ಇನ್ನೂ ಹೆಚ್ಚಾಗಲು ಇದು ಕಾರಣ. ಜೊತೆಗೆ ಸಾರಥಿಯ ಯಶಸ್ಸಿನಿಂದ 'ಬಾಕ್ಸ್ ಆಫೀಸ್ ಕಿಂಗ್' ಎನಿಸಿರುವ ದರ್ಶನ್ ನೋಡಲು ಜನರು ಮುಗಿಬೀಳುವುದು ಖಂಡಿತ.
ಈಗಾಗಲೇ ಚಿಂಗಾರಿ ಹಾಡುಗಳು ಜನರ ಬಾಯಲ್ಲಿವೆ. ಚಿತ್ರ ನೋಡಲು ತುದಿಗಾಲಲ್ಲಿ ನಿಂತಿರುವ ಪ್ರೇಕ್ಷಕರು ಹಾಗೂ ದರ್ಶನ್ ಅಭಿಮಾನಿಗಳ ಬಗ್ಗೆ ಗೊತ್ತಿರುವ ಥಿಯೇಟರ್ ಮಾಲೀಕರು ಹೆಚ್ಚಿನ ಥಿಯೇಟರ್ ನೀಡದರೆ ಆಶ್ಚರ್ಯವೇನಿದೆ? ಹಾಗಾಗಿ ಚಿಂಗಾರಿಯ ಆರ್ಭಟಕ್ಕೆ ಸಾಕ್ಷಿಯಾಗಲು ಇನ್ನೂ ಹೆಚ್ಚಿನ ಚಿತ್ರಮಂದಿರಗಳು ಸಿಗಬಹುದು. ಈಗ ಬಿಡುಗಡೆಯ ಲಿಸ್ಟ್ ನಲ್ಲಿರುವ 112 ಚಿತ್ರಮಂದಿರಗಳು ಕಡಿಮೆಯೇನಲ್ಲ ಬಿಡಿ. (ಒನ್ ಇಂಡಿಯಾ ಕನ್ನಡ)