Englishবাংলাગુજરાતીहिन्दीമലയാളംதமிழ்తెలుగు

ಸುದೀಪ್ ವಿಷ್ಣುವರ್ಧನ ಚಿತ್ರ ಸೂಪರ್ ಡೂಪರ್ ಹಿಟ್

Posted by:
Published: Friday, January 13, 2012, 10:17 [IST]
 

ಸುದೀಪ್ ವಿಷ್ಣುವರ್ಧನ ಚಿತ್ರ ಸೂಪರ್ ಡೂಪರ್ ಹಿಟ್

ಸುದೀಪ್ ಅಭಿನಯದ ವಿಷ್ಣುವರ್ಧನ ಚಿತ್ರ ಭರ್ಜರಿ ಯಶಸ್ಸು ದಾಖಲಿಸಿದ್ದು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿದೆ. ರಾಜ್ಯದಾದ್ಯಂತ ಈ ಚಿತ್ರ ಭರ್ಜರಿ ಪ್ರದರ್ಶನ ಕಂಡಿದ್ದು ಬಾಕ್ಸಾಫೀಸ್ ಫಸಲು ಚೆನ್ನಾಗಿದ್ದು ಅತ್ತ ನಿರ್ಮಾಪಕ ದ್ವಾರಕೀಶ್ ಹಾಗೂ ವಿತರಕ ಕೆ ಸಿಎನ್ ಕುಮಾರ್ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಿದೆ.

ವಿಷ್ಣುವರ್ಧನ ಚಿತ್ರದ ಮೊದಲ ನಾಲ್ಕು ವಾರದ ಗಳಿಕೆ ಸುದೀಪ್ ಅಭಿನಯದ ಎಲ್ಲ ಚಿತ್ರಗಳ ದಾಖಲೆಯನ್ನೂ ಅಳಿಸಿಹಾಕಿದೆ ಎಂದಿದ್ದಾರೆ ಯೋಗೀಶ್ ದ್ವಾರಕೀಶ್. ಒಟ್ಟಿನಲ್ಲಿ ದ್ವಾರಕೀಶ್‍ಗೆ ಈ ಚಿತ್ರ ಸೆಕೆಂಡ್ ಲೈಫು ಕೊಟ್ಟಿದೆ. ಆಪ್ತಮಿತ್ರನಂತೆ ಮತ್ತೊಮ್ಮೆ ಕೈಹಿಡಿದಿದೆ.

ತೆಲುಗು ಚಿತ್ರಗಳ ಹವಾ ಜೋರಾಗಿರುವ ಹೈದರಾಬಾದ್ ಕರ್ನಾಟಕ ಭಾಗದಲ್ಲೂ ವಿಷ್ಣುವರ್ಧನ ಚಿತ್ರ ಧೂಳೆಬ್ಬಿಸಿತ್ತು. ತೆಲುಗು, ತಮಿಳು ಭಾಷೆಗೂ ರೀಮೇಕ್ ಆಗುವ ಸಿದ್ಧತೆಯಲ್ಲಿದೆ. ಚಿತ್ರವನ್ನು ವೀಕ್ಷಿಸಿರುವ ಬಾಲಿವುಡ್ ನಟ ವಿವೇಕ್ ಒಬೆರಾಯ್ ಕೂಡ ಹಾಡಿ ಹೊಗಳಿದ್ದಾರೆ. (ಒನ್‍ಇಂಡಿಯಾ ಕನ್ನಡ)

English summary
Sudeep lead Kannada movie Vishnuvardhana has been officially declared as the first super hit film of 2011. According to industry sources, the movie has made a fantastic business.
ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada
Subscribe Newsletter
Coupons