twitter
    For Quick Alerts
    ALLOW NOTIFICATIONS  
    For Daily Alerts

    ಪರಭಾಷೆ ಚಿತ್ರಗಳ ವಿರುದ್ಧ ಸಿದ್ಲಿಂಗು, ಕೋ ಕೋ ಗುಡುಗು

    |

    ಪರಭಾಷೆ ಚಿತ್ರಗಳಿಗೆ ಹೆಚ್ಚಿನ ಥಿಯೇಟರ್ ನೀಡುತ್ತಿರುವ ಕನ್ನಡ ಚಿತ್ರೋದ್ಯಮದ ವಿತರಕರ ವಿರುದ್ಧ ಸಿದ್ಲಿಂಗು ಮತ್ತು ಕೋ ಕೋ ಚಿತ್ರತಂಡಗಳು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದವು. ಕನ್ನಡ ನೆಲದಲ್ಲಿ ಪರಭಾಷೆ ಚಿತ್ರಗಳಿಗೆ ಮಣೆ ಹಾಕುವ ಸಂಪ್ರದಾಯ ಹೊಸದೇನೂ ಅಲ್ಲ. ಆದರೆ ಇದೀಗ ಎಚ್ಚೆತ್ತುಕೊಂಡಿರುವ ಕನ್ನಡ ಚಿತ್ರ ನಿರ್ಮಾಪಕರು ಸುದ್ದಿಗೋಷ್ಠಿ ನಡೆಸಿ ಸುದ್ದಿಯಾಗುತ್ತಿದ್ದಾರೆ.

    ನಾಳೆ, ಜನವರಿ 12ರಂದು ತಮಿಳಿನ 'ನಂಬನ್' ಚಿತ್ರ ಕರ್ನಾಟಕದ ಬಹಳಷ್ಟು ಥಿಯೇಟರುಗಳಲ್ಲಿ ಬಿಡುಗಡೆ ಆಗುತ್ತಿದೆ. ಜೊತೆಗೆ ಶುಕ್ರವಾರ ತೆಲುಗಿನ 'ಬಿಸಿನೆಸ್ ಮನ್' ಕೂಡ ಬಿಡುಗಡೆ ಆಗಲಿದೆ. ಅದೇ ದಿನ ಬಿಡುಗಡೆ ಘೋಷಿಸಿರುವ ಕನ್ನಡದ 2 ಚಿತ್ರಗಳಾದ ಸಿದ್ಲಿಂಗು ಮತ್ತು ಕೋ ಕೋ, ಸಾಕಷ್ಟು ನಿರೀಕ್ಷೆಗಳ ನಡುವೆಯೂ ಥಿಯೇಟರ್ ಸಮಸ್ಯೆಯಿಂದ ನಡುಗುತ್ತಿದ್ದಾರೆ.

    ಕಾರಣ, ಪರಭಾಷಾ ಚಿತ್ರಕ್ಕೆ ಕನ್ನಡಿಗರ ಪ್ರತಿಕ್ರಿಯೆ ಯಾವಾಗಲೂ ಚೆನ್ನಾಗಿಯೇ ಇರುತ್ತೆ ಎನ್ನುವುದು ಒಂದು, ಜೊತೆಗೆ ಸೀಮಿತ ಮಾರುಕಟ್ಟೆಯನ್ನು ಅವಲಂಬಿಸಿರರುವ ಕನ್ನಡ ಚಿತ್ರಗಳು ಆ ಮಟ್ಟಿಗೆ ಶ್ರೀಮಂತವಾಗಿಲ್ಲದೇ ಇರುವುದು ಇನ್ನೊಂದು. ಈಗ, ಈ ಎರಡೂ ಚಿತ್ರತಂಡಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬಹಳಷ್ಟು ನಿರ್ಮಾಪಕರನ್ನು ಒಟ್ಟಾಗಿಸಿದೆ.

    ಇಂದು, ನಿರ್ಮಾಪಕರ ಸಂಘ ಹಾಗೂ ಸಿದ್ಲಿಂಗು ಮತ್ತು ಕೋ ಕೋ ತಂಡಗಳ ಮುಂದಾಳತ್ವದಲ್ಲಿ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದೆ. ಇದಕ್ಕೊಂದು ಪರಿಹಾರ ಹುಡುಕುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಚಿತ್ರತಂಡ ಚಲನಚಿತ್ರ ವಾಣಿಜ್ಯಮಂಡಳಿಯ ಮೊರೆಹೋಗಿದೆ. ಸಿದ್ಲಿಂಗು ಮತ್ತು ಕೋ ಕೋಗೆ ನಾಡಿದ್ದು ಬಿಡುಗಡೆ ಒಂದುಕಡೆ, ಥಿಯೇಟರ್ ಸಮಸ್ಯೆ ಇನ್ನೊಂದು ಕಡೆ.

    ಹೀಗೆ ಎರಡು ಒತ್ತಡಗಳ ನಡುವೆ ಕನ್ನಡ ಚಿತ್ರಗಳು ನಲುಗಬೇಕಾದ ಪರಿಸ್ಥಿತಿಗೆ ಕಾರಣವಾಗಿರುವವರು ಕೂಡ ಚಿತ್ರೋದ್ಯಮದ ಒಂದು ಅನಿವಾರ್ಯ ಅಂಗವಾಗಿರುವ 'ವಿತರಕರು' ಎಂಬುದೇ ದೊಡ್ಡ ವಿಪರ್ಯಾಸ. ಕನ್ನಡ ಚಿತ್ರಗಳಿಗೆ ಕರ್ನಾಟಕದಲ್ಲಿ ಥಿಯೇಟರ್ ಸಮಸ್ಯೆ ಇನ್ನಾದರೂ ಒದಗದಿರಲಿ ಎಂಬುದು ಸಿನಿಪ್ರೇಕ್ಷಕರ ಹಾಗೂ ಚಿತ್ರೋದ್ಯಮದ ಒಕ್ಕೊರಲ ಕೂಗು. (ಒನ್ ಇಂಡಿಯಾ ಕನ್ನಡ)

    English summary
    Kannada movie Sidlingu and Ko Ko team jointly called Press-meet today, 11th Jan. 2012. This is against of the release of non-kannada movies, more numbers of theaters in Kranataka. 
 
    Thursday, January 12, 2012, 10:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X