ಚಿಕ್ಕಮಗಳೂರಿನ ಚಿಕ್ಕಮಲ್ಲಿಗೆ ದೀಪಾ ಸನ್ನಿಧಿಗೆ ಸ್ಯಾಂಡಲ್‌ವುಡ್‌ನಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡು. ಈಕೆಯ ಅಭಿನಯದ ಎರಡು ಚಿತ್ರಗಳು 'ಸಾರಥಿ' ಹಾಗೂ 'ಪರಮಾತ್ಮ' ಭರ್ಜರಿ ಪ್ರದರ್ಶನ ಕಾಣುತ್ತಿವೆ.
ಈ ಬಿಸಿಯಲ್ಲೇ ದೀಪಾರನ್ನು ಮತ್ತೊಂದು ಚಿತ್ರ ಹುಡುಕಿಕೊಂಡು ಬಂದಿದ್ದು, 'ಜಾನೂ' ಕೈಹಿಡಿದಿದ್ದಾರೆ. 'ಪರಮಾತ್ಮ' ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಜಯಣ್ಣ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಚಿತ್ರದ ನಾಯಕ ನಟ ಯಶ್.
ಇಂದಿನಿಂದ (ನ.9) 'ಜಾನೂ' ಚಿತ್ರೀಕರಣ ಆರಂಭವಾಗಿದೆ. ಮೊದಲ ಹಂತದ ಚಿತ್ರೀಕರಣ 12 ದಿನಗಳ ಕಾಲ ಮಡಿಕೇರಿಯಲ್ಲಿ ನಡೆಯಲಿದೆ. ಎರಡನೇ ಹಂತದ ಚಿತ್ರೀಕರಣ ಬೀದರ್, ಗುಲ್ಬರ್ಗ, ಸುರಪುರದ ಸುಂದರ ತಾಣಗಳಲ್ಲಿ ನಡೆಯಲಿದೆ.
ಚಿತ್ರದ ಪಾತ್ರವರ್ಗದಲ್ಲಿ ರಂಗಾಯಣ ರಘು, ಸಾಧು ಕೋಕಿಲ, ಶೋಭಾರಾಜ್ ಇದ್ದಾರೆ. ಛಾಯಾಗ್ರಹಣ ಕೃಷ್ಣ ಅವರದು. ವಿ ಹರಿಕೃಷ್ಣ ಸಂಗೀತ ನಿರ್ದೇಶನವಿರುವ ಚಿತ್ರಕ್ಕೆ ಪ್ರೀತಂ ಗುಬ್ಬಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. (ಒನ್‌ಇಂಡಿಯಾ ಕನ್ನಡ)





















