Englishবাংলাગુજરાતીहिन्दीമലയാളംதமிழ்తెలుగు

ರಾಧಿಕಾ ಪಂಡಿತ್‌ಗೆ ಮೂರನೆ ಬಾರಿ ಫಿಲಂಫೇರ್

Posted by:
Published: Monday, June 27, 2011, 17:09 [IST]
 

ಈಗಾಗಲೆ ಎರಡು ಬಾರಿ ಫಿಲಂಫೇರ್ ಪ್ರಶಸ್ತಿ ಪಡೆದಿರುವ ಮೊಗ್ಗಿನ ಮನಸು ಖ್ಯಾತಿಯ ರಾಧಿಕಾ ಪಂಡಿತ್‌ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. ಈ ಬಾರಿಯೂ ಅವರ ಕೊರಳಿಗೆ ಪ್ರಶಸ್ತಿ ಮಾಲೆ ಬಿದ್ದಿದೆ. 'ಕೃಷ್ಣನ್ ಲವ್ ಸ್ಟೋರಿ' ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ ಎನ್ನುತ್ತವೆ ನಂಬಲರ್ಹ ಮೂಲಗಳು.

ಮೊಗ್ಗಿನ ಮನಸು, ಲವ್ ಗುರು ಚಿತ್ರಗಳಿಗಾಗಿ ರಾಧಿಕಾ ಪಂಡಿತ್‌ಗೆ ಕ್ರಮವಾಗಿ 2008 ಹಾಗೂ 2009ರಲ್ಲಿ ಫಿಲಂಫೇರ್ ಪ್ರಶಸ್ತಿ ಬಂದಿತ್ತು. ಈಗ ಮತ್ತೊಮ್ಮೆ 58ನೇ ಐಡಿಯಾ ಫಿಲಂಫೇರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ ರಾಧಿಕಾ ಪಂಡಿತ್. ಪ್ರಶಸ್ತಿ ಇನ್ನೂ ಪ್ರಕಟವಾಗದಿದ್ದರೂ ರಾಧಿಕಾಗೆ ಪ್ರಶಸ್ತಿ ಬಂದಿರುವ ಸುದ್ದಿ ಮಾತ್ರ ಲೀಕ್ ಆಗಿದೆ.

ಜುಲೈ 2, 2011ರಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹೈದರಾಬಾದ್‌ನಲ್ಲಿ ನಡೆಯಲಿದೆ. ಅಂದು ಅಧಿಕೃತವಾಗಿ ಪ್ರಶಸ್ತಿಗಳನ್ನು ಪ್ರಕಟಿಸಲಾಗುತ್ತದೆ. ಅತ್ಯುತ್ತಮ ನಟಿ ಪ್ರಶಸ್ತಿ ವಿಭಾಗದಲ್ಲಿ ರಾಧಿಕಾ ಪಂಡಿತ್ ಅವರಿಗೆ ಪ್ರಬಲ ಸ್ಪರ್ಧಿಗಳಾರು ಇಲ್ಲದಿರುವುದು ಸುನಾಯಾಸವಾಗಿ ಪ್ರಶಸ್ತಿ ಅವರ ಪಾಲಾಗಿದೆ ಎನ್ನಲಾಗಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

English summary
Kannada actress Radhika Pandit, who is basking on the success of her latest film Hudugru, is said to have won the Best Actress Filmfare award for her third time and this she is bagging the award for her performance in film Krishnan Love Story.
ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada
Subscribe Newsletter
Coupons