twitter
    For Quick Alerts
    ALLOW NOTIFICATIONS  
    For Daily Alerts

    ನಿಮ್ಮ ಧರ್ಮ ಏನಿದ್ದರೂ ಸಿನಿಮಾಟೊಗ್ರಫಿ:ಆರ್ಎನ್ ಕೆ ಪ್ರಸಾದ್‌

    By Rajendra
    |

    PNK Prasad felicitated
    "ಅರೆ! ವ್ಹಾ!! ಸನ್ಮಾನ ಸಮಾರಂಭವೆಂದರೆ ಹೀಗಿರಬೇಕು. ಇಂಥಾ ಆಪ್ಯಾಯತೆ, ಆತ್ಮೀಯತೆ ನಮಗೂ ದೊರಕಬಾರದೇ?" ಎಂದು ಯಾವುದೇ ಕ್ಷೇತ್ರದಲ್ಲಿನ ಸಾಧಕರೂ ಈರ್ಷ್ಯೆಗೊಳಗಾಗಬಹುದಂತಹ ಸರಳ, ಸುಂದರ ಹಾಗೂ ಮುದನೀಡುವ ವಾತಾವರಣದಲ್ಲಿ, ಚಿತ್ರರಂಗದಲ್ಲಿನ ಜೀವಮಾನ ಸಾಧನೆಗಾಗಿ ಈ ಸಾಲಿನ ಪ್ರಶಸ್ತಿ ವಿಜೇತರಾದ ಆರ್.ಎನ್.ಕೆ.ಪ್ರಸಾದ್ ಅವರನ್ನು ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಸಂಘವು ಸನ್ಮಾನಿಸಿ, ಅವರನ್ನು ಆದರಾಭಿಮಾನಗಳ ಮಹಾಪೂರದಲ್ಲಿ ತೋಯಿಸಿತು.

    ಸಂಘದ ಸ್ಥಾಪಕ-ಅಧ್ಯಕ್ಷರಾದ ದಿ. ಡಿ.ವಿ. ರಾಜಾರಾಂ ಅವರ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದಆರ್.ಎನ್.ಕೆ.ಪ್ರಸಾದ್ ಅವರು, ಚಿತ್ರರಂಗದಲ್ಲಿನ ತಮ್ಮ ಆರಂಭದ ದಿನಗಳ ಅನುಭವಗಳನ್ನು ಯುವಪೀಳಿಗೆಯೊಂದಿಗೆ ಮುಕ್ತವಾಗಿ ಹಂಚಿಕೊಂಡರು. ಅಂದು ತಾವು ಅನುಭವಿಸಿದ ಕಷ್ಟನಷ್ಟಗಳನ್ನು ನೆನಪಿಸಿಕೊಳ್ಳುತ್ತಾ, "ಹಣ, ಹೆಸರು, ಕೀರ್ತಿ,ಯಶಸ್ಸು, ಇದಾವುದರೆಡೆಗೂ ಗಮನ ನೀಡದೆ, ಛಾಯಾಗ್ರಾಹಕರಾಗಿ ನಿಮ್ಮ ಕಾರ್ಯವನ್ನು ನಿಷ್ಠೆಯಿಂದ ನೆರವೇರಿಸಿ. ನಿಮ್ಮ ಧರ್ಮ ಏನಿದ್ದರೂ ಸಿನಿಮಾಟೊಗ್ರಫಿ ಮಾತ್ರ" ಎಂದು ಯುವಪೀಳಿಗೆಗೆ ಹಿತವಚನ ನೀಡಿದರು.

    DEBRIE, NEWALL, MITCHELL ಮುಂತಾದ ಹಳೆಯ ತಲೆಮಾರಿನ ಕ್ಯಾಮೆರಾ ಯಂತ್ರೋಪಕರಣಗಳ ಹೆಸರುಗಳು ಸಭೆಯಲ್ಲಿ ಸಂಚರಿಸಿ, ಅದೃಶ್ಯ ದೇವದೂತರಂತೆ ಇಡೀ ವಾತಾವರಣವನ್ನು ಉತ್ತೇಜಿಸಿ, ಕನ್ನಡದ ಖ್ಯಾತಛಾಯಾಗ್ರಾಹಕರಾದ 'ಮುಂಗಾರು ಮಳೆ" ಖ್ಯಾತಿಯ ಕೃಷ್ಣ, 'ದುನಿಯಾ" ಖ್ಯಾತಿಯ ಸತ್ಯ ಹೆಗಡೆ, ಪ್ರಸಕ್ತ ಸಾಲಿನ ರಾಜ್ಯಪ್ರಶಸ್ತಿವಿಜೇತ ಛಾಯಾಗ್ರಾಹಕರಾದ ಕೆ.ಎಂ. ವಿಷ್ಣುವರ್ಧನ್ ಆದಿಯಾಗಿ ಅಲ್ಲಿ ನೆರೆದಿದ್ದ ಎಲ್ಲರನ್ನೂ ಹರಸುತ್ತಿರುವಂತೆ ಭಾಸವಾಯಿತು.

    ಇಂತಹದೊಂದು ಅತ್ಯಂತ ಆತ್ಮೀಯವಾದ ಸಮಾರಂಭವನ್ನು ರೂಪಿಸಿದ ಹಿರಿಯ ತಲೆಮಾರಿನ ಛಾಯಾಗ್ರಾಹಕ ಬಿ.ಎಸ್. ಬಸವರಾಜ್ ಹಾಗೂ ವಿ. ಆರ್. ಚಂದ್ರಶೇಖರ್ ಅವರು ಆರ್.ಎನ್.ಕೆ.ಪ್ರಸಾದ್ ಅವರ ಸಾಧನೆಯ ಹಿರಿಮೆಯನ್ನು ಸಭೆಗೆ ವಿಸ್ತಾರಗೊಳಿಸಿದರು. (ದಟ್ಸ್‌ಕನ್ನಡ ಸಿನಿವಾರ್ತೆ)

    English summary
    Kannada films veteran cameraman RNK Prasad , he living in Chennai son of doyen of Kannada cinema R Nagendra Rao was felicitated in a simple and touching function by the Karnataka Cinematographers Association.
    Wednesday, May 25, 2011, 18:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X