Englishবাংলাગુજરાતીहिन्दीമലയാളംதமிழ்తెలుగు

ಅಜ್ಞಾತವಾಸದಿಂದ ಎದ್ದುಬಂದ ಆ ದಿನಗಳು ಚೇತನ್

Posted by:
Published: Wednesday, February 2, 2011, 15:08 [IST]
 

ಆ ದಿನಗಳು ಚೇತನ್ ಎಲ್ಲಿ ಎಂದು ಕೇಳುತ್ತಿರುವ ಅಭಿಮಾನಿಗಳಿಗೆ ಕಡೆಗೂ ಉತ್ತರ ಸಿಕ್ಕಿದೆ. ಇಷ್ಟು ದಿನ ಅವರು ಎಲ್ಲಿ ಹೋದರು ಎಂಬ ಪ್ರಶ್ನೆ ಕಾಡುತ್ತಿತ್ತು. ಚೇತನ್ ಈಗ 'ಬಿರುಗಾಳಿ'ಯಂತೆ ಚಿತ್ರ ನಿರ್ದೇಶಕನಾಗಿ ಹೊಸ ಅವತಾರದಲ್ಲಿ ಮರಳಿದ್ದಾರೆ. ಈ ಮೂಲಕ ಚೇತನ್‌ ನಟನೆಯಿಂದ ನಿರ್ದೇಶನಕ್ಕೆ ಮುಂಬಡ್ತಿ ಪಡೆದಂತಾಗಿದೆ.

ಕತೆ, ಚಿತ್ರಕತೆ ಸಿದ್ಧಪಡಿಸಿಕೊಳ್ಳಲು ಚೇತನ್ ಇಷ್ಟು ದಿನ ಅಜ್ಞಾತವಾಸದಲ್ಲಿದ್ದರು. ಈಗ ಚಿತ್ರಕತೆ ಸಿದ್ಧವಾಗಿದ್ದು ಅಜ್ಞಾತವಾಸದಿಂದ ಎದ್ದು ಬಂದಿದ್ದಾರೆ. ಚಿತ್ರಕತೆ ರಚನೆಗೆ ಕರಿಷ್ಮ ಭಾರದ್ವಾಜ್ ಎಂಬುವವರು ಚೇತನ್‌ಗೆ ಸಾಥ್ ನೀಡಿದ್ದಾರೆ.

ಆಕ್ಷನ್, ಕಟ್ ಹೇಳುವುದರ ಜೊತೆಗೆ ಸ್ವತಃ ನಟಿಸಲಿದ್ದಾರೆ ಚೇತನ್. ನಾಯಕಿ ಪಾತ್ರಕ್ಕೆ ಐಂದ್ರಿತಾ ರೇ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಚಿತ್ರದ ಉಳಿದ ಪಾತ್ರವರ್ಗ ಹಾಗೂ ತಾಂತ್ರಿಕ ಬಳಗದ ಆಯ್ಕೆ ಇನ್ನಷ್ಟೆ ನಡೆಯಬೇಕಾಗಿದೆ. ಮಣಿಕಾಂತ್ ಕದ್ರಿ ಅವರ ಸಂಗೀತ ಚಿತ್ರಕ್ಕಿರುತ್ತದೆ.

ಈ ಚಿತ್ರವನ್ನು ಕಾನ್ಫಿಡೆಂಟ್ ಗ್ರೂಫ್ ನಿರ್ಮಿಸುತ್ತಿದ್ದು ಶೀಘ್ರದಲ್ಲೆ ವಿವರಗಳನ್ನು ತಿಳಿಸುವುದಾಗಿ ಚೇತನ್ ಹೇಳಿದ್ದಾರೆ. ಈ ಚಿತ್ರಕ್ಕೆ ಸಂಬಂಧಿಸದಂತೆ ಫೆಬ್ರವರಿ 12ರಂದು ವಿವರಗಳನ್ನು ನೀಡಲಿದ್ದಾರೆ. ಅಲ್ಲಿಯವರೆಗೂ ವೇಟ್ ಅಂಡ್ ವಾಚ್.

English summary
Aa Dinagalu fame Chetan turn as director. He will be directing a new film which has also been scripted by him along with his friend Karishma Bharadwaj. Manikanth Khadri to score music. The other cast and crew is now being worked out.
ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada
Subscribe Newsletter
Coupons