Englishবাংলাગુજરાતીहिन्दीമലയാളംதமிழ்తెలుగు

ಕಾರು ಅಪಘಾತ; ನಟಿ ಶ್ರುತಿ ಪ್ರಾಣಾಪಾಯದಿಂದ ಪಾರು

Posted by:
Published: Friday, January 14, 2011, 12:32 [IST]
 

ಕನ್ನಡ ಚಿತ್ರರಂಗದ ಜನಪ್ರಿಯ ತಾರೆ ಶ್ರುತಿ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಅಪಘಾತಕ್ಕೀಡಾಗಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಗುರುವಾರ (ಜ.13)ರಾತ್ರಿ ನಡೆದಿದೆ. ಶ್ರುತಿ ಅವರು ಹಾಸನ ಕಡೆಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದರು. ಘಟನೆಯ ವಿವರಗಳು ಹೀಗಿವೆ.

ಶ್ರುತಿ ಅವರು ತಮ್ಮ ತಾಯಿ ಹಾಗೂ ಇಬ್ಬರು ಸಹಾಯಕರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಲಿಗೆರೆ ಕ್ರಾಸ್ ಬಳಿ ಇನ್ನೋವಾ ಕಾರು ಅಪಘಾತಕ್ಕೀಡಾಗಿದೆ.

ರಸ್ತೆ ಉಬ್ಬು ತಪ್ಪಿಸಲು ಕಾರಿನ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಹಿಂದೆ ಬರುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಎರಡೂ ವಾಹನಗಳು ಜಖಂಗೊಂಡಿದ್ದು, ನಟಿ ಶ್ರುತಿ ಹಾಗೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. [ಅಪಘಾತ]

English summary
Kannada actress Shruthi met with an road accident on her way to Bangalore on Thursday (Jan.13) night. But she narrowly escapes from injuries. She was returning from Hassan to Bangalore with his mother and two assistants. The driver of the car suddenly applies a break to avoid road hump. At the same time truck was coming off Highway when it lost control, smashed into the back of a Innova car. But no one was seriously hurt.
ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada
Subscribe Newsletter
Coupons