Englishবাংলাગુજરાતીहिन्दीമലയാളംதமிழ்తెలుగు
 
Share This Story

'ಭದ್ರ'ನ ಕೈಹಿಡಿದ ಮುಂಬೈ ಚಿಂಗಾರಿ ಡೈಸಿ ಶಾ

Posted by:
Published: Thursday, November 18, 2010, 13:13 [IST]

ಎಲ್ಲವೂ ಸರಿ ಹೋಗಿದ್ದರೆ ಈಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಚಿಂಗಾರಿ'ಗೆ ಬಂಗಾರಿಯಾಗಬೇಕಿತ್ತು. ಅದ್ಯಾಕೋ ಏನೋ ನಿರ್ದೇಶಕ ಹರ್ಷ, ಡೈಸಿ ಶಾರಿಗೆ ಚಾನ್ಸ್ ಕೊಡಲಿಲ್ಲ. ಅಲ್ಲಿ ಕೈತಪ್ಪಿದ ಅವಕಾಶ 'ಭದ್ರ' ರೂಪದಲ್ಲಿ ಕೈಹಿಡಿದಿದೆ. ಪ್ರಜ್ವಲ್ ದೇವರಾಜ್‌ಗೆ ಹೊಸ ಜೋಡಿ ಸಿಕ್ಕಂತಾಗಿದೆ.

ಡೈಸಿ ಶಾ ಈ ಹಿಂದೆ 'ಎನ್‌ಕೌಂಟರ್ ದಯಾನಾಯಕ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅದು ಪೂರ್ಣ ಪ್ರಮಾಣದ ನಾಯಕಿ ಪಾತ್ರವಲ್ಲ. ಈಗ 'ಭದ್ರ' ಚಿತ್ರದ ಮೂಲಕ ಡೈಸಿ ಪೂರ್ಣ ಪ್ರಮಾಣದನಾಯಕಿಯಾಗಿ ಕನ್ನಡಕ್ಕೆ ಅಡಿಯಿಡುತ್ತಿದ್ದಾರೆ. ಈಕೆ ಸಂಭಾವನೆ ಸಿಕ್ಕಾಪಟ್ಟೆ ತುಟ್ಟಿ ಎಂಬ ಕಾರಣಕ್ಕೆ 'ಚಿಂಗಾರಿ' ಅವಕಾಶ ಕೈತಪ್ಪಿತ್ತು ಎಂಬ ಮಾತುಗಳು ಕೇಳಿಬಂದಿದ್ದವು.

ಅತಿ ಶೀಘ್ರದಲ್ಲೆ ಸೆಟ್ಟೇರಲಿರುವ ಭದ್ರ ಚಿತ್ರವನ್ನು ಎನ್ ಕುಮಾರ್ ನಿರ್ಮಿಸುತ್ತಿದ್ದು ಮಗೇಶ್ ಕುಮಾರ್ ಆಕ್ಷನ್, ಕಟ್ ಹೇಳಲಿದ್ದಾರೆ. ಇದು ತೆಲುಗಿನ ಯಶಸ್ವಿ ಚಿತ್ರ 'ರಣಂ' ರೀಮೇಕ್. ಮೂಲ ಚಿತ್ರದಲ್ಲಿ ಗೋಪಿಚಂದ್ ಪೋಷಿಸಿದ್ದ ಪಾತ್ರಕ್ಕೆ ಪ್ರಜ್ವಲ್ ದೇವರಾಜ್ ಜೀವ ತುಂಬಲಿದ್ದಾರೆ.

ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada
Subscribe Newsletter
Coupons