twitter
    For Quick Alerts
    ALLOW NOTIFICATIONS  
    For Daily Alerts

    ಇದು ಅಂತಿಂಥ ಇತಿಹಾಸವಲ್ಲ ನಕ್ಸಲೈಟ್ 'ಇತಿಹಾಸ'

    By Rajendra
    |

    ಡೈಮಂಡ್ ಮೂವೀಸ್‌ರವರ ಚೊಚ್ಚಲ ಕಾಣಿಕೆ 'ಇತಿಹಾಸ'. ಈ ಹಿಂದೆ 'ತಂಗಾಳಿ' ಎಂಬ ಚಿತ್ರವನ್ನು ಕೈಗೆತ್ತಿಕೊಂಡಿದ್ದ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಕೀರ್ತಿವರ್ಧನ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 'ಇತಿಹಾಸ' ನಕ್ಸಲೈಟ್ ಹಿನ್ನೆಲೆಯುಳ್ಳ ಪ್ರೇಮ ಕಥಾನಕ. ಹರೀಶ್ ಜೊತೆಗೆ ನಾಯಕಿಯಾಗಿ ರಾಣಿ (ಬಾಜಿ, ಪೆರೋಲ್ ಹಾಗೂ ರಾಜಿ ಚಿತ್ರಗಳ ನಾಯಕಿ) ಅಭಿನಯಿಸುತ್ತಿದ್ದಾರೆ. ನಾಯಕನ ಸ್ನೇಹಿತರ ಪಾತ್ರಗಳಲ್ಲಿ ಅನಿಲ್, ಲಾರೆನ್ಸ್ ಹಾಗೂ ಶ್ರೀನಿವಾಸ್ ಕಾಣಿಸಿಕೊಳ್ಳಲಿದ್ದಾರೆ.

    ಯುವ ಉತ್ಸಾಹಿ ನಟ ಕಂ ನಿರ್ಮಾಪಕ ಹರೀಶ್ ಅವರ ಚೊಚ್ಚಲ 'ಇತಿಹಾಸ'ಕ್ಕಾಗಿ ಕಲರಿ ಮಾರ್ಷಲ್ ಆರ್ಟ್ಸ್ ಸಾಹಸದಲ್ಲಿ ಪರಿಣಿತಿಯನ್ನು ಪಡೆದು ಕ್ಯಾಮರಾ ಎದುರಿಸಲಿದ್ದಾರೆ. ಬೆಂಗಳೂರಿನಲ್ಲಿ ಮೊದಲ ಹಂತದ "ಇತಿಹಾಸ" ದೊಮ್ಮಲೂರು, ರಾಜರಾಜೇಶ್ವರಿನಗರ, ಬೆಸ್ಟ್ ಕ್ಲಬ್ ಸುತ್ತಮುತ್ತ ಚಿತ್ರೀಕರಣವಾಗಿದೆ.

    ಇತಿಹಾಸದ ಪುಟಗಳಲ್ಲಿ ಸೇರಲು ಚಿತ್ರ 'ಇತಿಹಾಸ' ಶೇಕಡ 50ರಷ್ಟು ಚಿತ್ರೀಕರಣ ಪೂರ್ಣಗೊಳಿಸಿ ಹಾಡುಗಳ ಚಿತ್ರೀಕರಣವನ್ನಷ್ಟೆ ಬಾಕಿ ಉಳಿಸಿಕೊಂಡಿದೆ. ಈ ಚಿತ್ರಕ್ಕಾಗಿ ಒಂದು ದಿನದ ಚಿತ್ರೀಕರಣವನ್ನು ಕಲ್ಲಿನ ಕೋಟೆಗೆ ಇತಿಹಾಸದಲ್ಲಿ ಪ್ರಸಿದ್ಧವಾದ ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದಾರೆ ಚಿತ್ರದ ನಿರ್ದೇಶಕರಾದ ಕೀರ್ತಿವರ್ಧನ. ಹಾಡುಗಳ ಚಿತ್ರೀಕರಣಕ್ಕಾಗಿ ಇವರು ಮಡಿಕೇರಿ, ಕುಶಾಲನಗರ ಹಾಗೂ ಅಂಡಮಾನ್ ದ್ವೀಪಕ್ಕೆ ತೆರಳಿದೆ ಈ ತಂಡ.

    ಪೀಟರ್ ಎಂ. ಜೋಸೆಫ್ ಸಂಗೀತ ಹಾಗೂ ಸಿನಿಟೆಕ್ ಸೂರಿ ಛಾಯಾಗ್ರಹಣ ಮಾಡಲಿದ್ದಾರೆ. ಚಿತ್ರಕಥೆ ನಿರೂಪಣೆಯಲ್ಲಿ ವಿಶೇಷ ಸ್ಟೈಲ್ ಅನುಸರಿಸಲಿದ್ದೇನೆ ಅಂತಾರೆ ನಿರ್ದೇಶಕರು. ಶೇಖರ್ ಹಾಗೂ ಗಿರೀಶ್ ಈ ಚಿತ್ರದ ಜಂಟಿ ನಿರ್ಮಾಪಕರು.ರವಿವರ್ಮ ಹಾಗೂ ಸುಬ್ಬು ಅವರ ಸಾಹಸ, ಸಂತೋಷ್ ಅವರ ಸಂಭಾಷಣೆ ಹಾಗೂ ಸಹನಿರ್ದೇಶನ ಈ ಚಿತ್ರಕ್ಕಿದೆ. ಪೋಷಕ ಪಾತ್ರಗಳಲ್ಲಿ ದೇವರಾಜ್, ಶ್ರೀನಾಥ್, ಸಾಧು ಕೋಕಿಲ, ಕಿಶೋರಿ ಬಲ್ಲಾಳ್ ಹಾಗೂ ಇನ್ನಿತರರು ಇದ್ದಾರೆ.

    Wednesday, November 10, 2010, 17:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X