Englishবাংলাગુજરાતીहिन्दीമലയാളംதமிழ்తెలుగు
 
Share This Story

ನಾಗಶೇಖರ್ ನಾಯಕನಾಗಿ ಒಮ್ಮೊಮ್ಮೆ

Posted by:
Published: Wednesday, May 5, 2010, 15:20 [IST]

ಗೋಲ್ಡನ್ ಐ ಪಿಕ್ಚರ್ಸ್ ಸಂಸ್ಥೆಯ ಮೂಲಕ 'ಒಮ್ಮೊಮ್ಮೆ' ಎಂಬ ನೂತನ ಚಿತ್ರ ಆರಂಭವಾಗುತ್ತಿದೆ. 'ಪಯಣ', 'ಸಂಚಾರಿ' ಚಿತ್ರಗಳನ್ನು ನಿರ್ದೇಶಿಸಿರುವ ಕಿರಣ್‌ಗೋವಿ ಈ ಚಿತ್ರದ ನಿರ್ದೇಶಕರು. 'ಪಯಣ' ಚಿತ್ರದಿಂದ ರವಿಶಂಕರ್ ಅವರನ್ನು, 'ಸಂಚಾರಿ' ಚಿತ್ರದಿಂದ ಶರಣ್ ರನ್ನು ನಾಯಕರನ್ನಾಗಿ ಚಿತ್ರರಂಗಕ್ಕೆ ಪರಿಚಯಿಸಿದ ಕಿರಣ್‌ಗೋವಿ 'ಒಮ್ಮೊಮ್ಮೆ' ಚಿತ್ರದ ಮೂಲಕ ನಾಗಶೇಖರ್‌ನನ್ನು ಪೂರ್ಣಪ್ರಮಾಣದ ನಾಯಕನನಾಗಿ ಮಾಡುತ್ತಿದ್ದಾರೆ.

ಕಿರಣ್‌ಗೋವಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಾಗಶೇಖರ್ ಹಾಗೂ ಶಿವರಾಜ್ ಅವರೊಂದಿಗೆ ನಿರ್ಮಾಣದಲ್ಲೂ ಭಾಗಿಯಾಗಿದ್ದಾರೆ. ಮೇ 16ರಂದು ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಹಾಡುಗಳ ಧ್ವನಿಮುದ್ರಣ ಆರಂಭವಾಗಲಿದ್ದು, ಚಿತ್ರೀಕರಣ ಜುಲೈ ಅಂತ್ಯ ಅಥವಾ ಆಗಸ್ಟ್‌ನಲ್ಲಿ ಪ್ರಾರಂಭವಾಗಲಿದೆ. ಮಡಿಕೇರಿಯಲ್ಲಿ 35ದಿನಗಳ ಚಿತ್ರೀಕರಣ ನಡೆಯಲಿದೆ.

ಕನ್ನಡ ಚಿತ್ರರಂಗದ 25ಜನ ನಿರ್ದೇಶಕರು ಅಭಿನಯಿಸುತ್ತಿರುವುದು ಈ ಚಿತ್ರದ ವಿಶೇಷ. ಇದ್ದಲ್ಲದೆ ಮೂರು ಪ್ರಖ್ಯಾತ ನಾಯಕಿಯರ ನಟನೆ ಕೂಡ ಈ ಚಿತ್ರಕ್ಕೆ ಲಭ್ಯವಿದೆ. ಐದು ಹಾಡುಗಳನ್ನೊಳಗೊಂಡಿರುವ ಈ ಚಿತ್ರಕ್ಕೆ ಅರ್ಜುನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಸತ್ಯ ಹೆಗ್ಡೆ ಛಾಯಾಗ್ರಹಣ, ಜೋನಿಹರ್ಷರ ಸಂಕಲನ ಈ ನೂತನ ಚಿತ್ರಕ್ಕಿದೆ.

ಎಲ್ಲ ಪ್ರಮುಖ ಸುದ್ದಿಗಳ ಮೇಲೆ ಒನ್ಇಂಡಿಯಾ ನೋಟ. ನಿರಂತರ ಸುದ್ದಿ ಪಡೆಯಲು Facebook ಮತ್ತು Twitter ಮೇಲೆ ಇರಲಿ ಕಣ್ಣು.
Topics: ಒಮ್ಮೊಮ್ಮೆ, ನಾಗಕಿರಣ್, ಕಿರಣ್ ಗೋವಿ, ಸಂಚಾರಿ, ಅರಮನೆ, ಸಂಜು ವೆಡ್ಸ್ ಗೀತಾ, ommomme, nagashekar, kiran govi, aramane, sanju weds geetha
ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada