Englishবাংলাગુજરાતીहिन्दीമലയാളംதமிழ்తెలుగు
 
Share This Story

ಈ ವಾರ ಬೊಂಬಾಟ್ ಕಾರ್ ಜೊತೆಗೆ ಅಭಿರಾಮ್

Posted by:
Published: Wednesday, May 5, 2010, 12:22 [IST]

ಈ ಶುಕ್ರವಾರ(ಮೇ.7) ಸಣ್ಣ ಬಜೆಟ್ ನ ಎರಡು ಚಿತ್ರಗಳಾದ 'ಬೊಂಬಾಟ್ ಕಾರ್' ಹಾಗೂ 'ಅಭಿರಾಮ್' ತೆರೆಕಾಣುತ್ತಿವೆ. ದೊಡ್ಡ ಬಜೆಟ್ ಚಿತ್ರಗಳಾದ ಪ್ರಕಾಶ್ ರೈ ನಿರ್ದೇಶಿಸಿ, ನಿರ್ಮಿಸಿ ಅಭಿನಯಿಸಿರುವ ನಾನೂ ನನ್ನ ಕನಸು, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ನೂರು ಜನ್ಮಕು ಹಾಗೂ ರಮೇಶ್ ಅರವಿಂದರ ಪ್ರೀತಿಯಿಂದ ರಮೇಶ್ ಚಿತ್ರಗಳು ಒಂದು ವಾರ ಮುಂದೂಡಲ್ಪಟ್ಟಿವೆ.

ರಾಮ ನಾರಾಯಣ್ ನಿರ್ದೇಶನದ 120ನೇ ಚಿತ್ರ ಬೊಂಬಾಟ್ ಕಾರ್. ಈ ಹಿಂದೆ ಅವರು ಜಗದೀಶ್ವರಿ, ಭೈರವಿ, ದಾಕ್ಷಾಯಿಣಿ, ಶ್ರೀ ಕಾಳಿಕಾಂಬ, ಶಾಂಭವಿ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದರು. ಇದೀಗ ಬರುತ್ತಿರುವ ಬೊಂಬಾಟ್ ಕಾರ್ ಸಹ ಮಕ್ಕಳ ಚಿತ್ರ. ಒಂದು ಗಂಟೆಗೂ ಹೆಚ್ಚು ಕಾಲ ಗ್ರಾಫಿಕ್ಸ್ ಚಿತ್ರದಲ್ಲಿನ ವಿಶೇಷ.ಚಿತ್ರದಲ್ಲಿ ಕಾರು ರೋಬೋಟ್ ರೀತಿಯಲ್ಲಿ ಬಳಕೆಯಾಗಿದೆ. ಬೇಬಿ ಕಾರ್ತಿಕ್ ಪ್ರಧಾನ ಪಾತ್ರದಲ್ಲಿ ಅಭಿನಯಿಸಿರುವ ಚಿತ್ರ. ತಾರಾಗಣದಲ್ಲಿ ರಮ್ಯಕೃಷ್ಣ, ಶರಣ್, ರವಿಶಂಕರ್, ಸಂಗೀತಾ, ದೊಡ್ಡಣ್ಣ ಮತ್ತಿತರರಿದ್ದಾರೆ.

ಈ ವಾರ ತೆರೆಕಾಣುತ್ತಿರುವ ಮತ್ತೊಂದು ಚಿತ್ರ ಆದಿಶೇಷ ಆರ್ಟ್ಸ್ ಲಾಂಛನದಲ್ಲಿ ಶೀಲಾ ವೆಂಕಟೇಶ್ವರಲು ಅವರು ನಿರ್ಮಿಸಿರುವ 'ಅಭಿರಾಮ್'. ಪ್ರೇಮಪ್ರಧಾನ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವವರು ಶ್ರೀನಿವಾಸ ಗುಂಡರೆಡ್ಡಿ. ನಿರ್ದೇಶಕರಿಗೆ ಇದು ಚೊಚ್ಚಲ ಯತ್ನ. 'ಅಭಿರಾಮ್' ಪಾತ್ರದಲ್ಲಿ ಸಂತೋಷ್, ನಾಯಕಿಯರಾಗಿ ಅಕ್ಷತ ಹಾಗೂ ಸ್ವಾತಿ ಅಭಿನಯಿಸಿರುವ ಚಿತ್ರದ ತಾರಾಬಳಗದಲ್ಲಿ ಸುಂದರಶ್ರೀ, ವೇಣುಗೋಪಾಲ್, ದಯಾನಂದಶರ್ಮ, ಶ್ರೀಕಂಠ, ರಮೇಶ್‌ಆತ್ರೇಯ ಮುಂತಾದವರಿದ್ದಾರೆ.

ಮುರಳಿ ವೈ ಕೃಷ್ಣ ಚಿತ್ರದ ಛಾಯಾಗ್ರಾಹಕರಾಗಿದ್ದು, ಬಸೀರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಮೇನಕಶ್ರೀನಿವಾಸ್ 'ಅಭಿರಾಮ್' ಚಿತ್ರದ ಸಂಕಲನಕಾರರಾಗಿದ್ದು, ಆಕ್ಷನ್‌ಮೂರ್ತಿ ಹಾಗೂ ಅಲ್ಟಿಮೆಟ್ ಶಿವು ಸಾಹಸ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ವಿಕ್ರಮಾರ್ಕುಡು ಸತೀಶ್ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ರಾಜ್ ನೃತ್ಯ ಸಂಯೋಜಿಸಿದ್ದಾರೆ.

ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada