Englishবাংলাગુજરાતીहिन्दीമലയാളംதமிழ்తెలుగు
 
Share This Story

ಫೋರ್ ಪ್ಯಾಕ್ ನಲ್ಲಿ ಹ್ಯಾಟ್ರಿಕ್ ಹೀರೋ

Posted by:
Published: Saturday, March 27, 2010, 16:28 [IST]

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೂರು ವಿಭಿನ್ನ ಅವತಾರಗಳಲ್ಲಿ ಕಾಣಿಸಲಿದ್ದಾರೆ. ಮೈಲಾರಿ ಚಿತ್ರಕ್ಕಾಗಿ ಈ ವಿಭಿನ್ನ ಗೆಟಪ್ ಗಳನ್ನು ಶಿವಣ್ಣ ಹಾಕಲಿದ್ದಾರೆ ಎಂಬುದು ಗಾಂಧಿನಗರದ ಬಿಸಿಬಿಸಿ ಸಮಾಚಾರ. ಇಪ್ಪತ್ತನಾಲ್ಕರ ಹರೆಯದ ವಿದ್ಯಾರ್ಥಿ, ಭೂಗತ ದೊರೆ ಹಾಗೂ ಪತ್ರಕರ್ತನಾಗಿ ಶಿವಣ್ಣ ಈ ಚಿತ್ರದಲ್ಲಿ ದರ್ಶನ ನೀಡಲಿದ್ದಾರಂತೆ.

ಅದರಲ್ಲೂ ಭೂಗತ ದೊರೆಯ ಪಾತ್ರಕ್ಕೆ ಜೀವತುಂಬಲು ಶಿವಣ್ಣ ಕಳೆದ ನಾಲ್ಕು ತಿಂಗಳಿಂದ ಕಸರತ್ತು ಮಾಡುತ್ತಿದ್ದಾರಂತೆ. ಶಿವಣ್ಣನ ಕಸರತ್ತು ಒಂದು ಹಂತಕ್ಕೆ ಬಂದಿದ್ದು ''ಫೋರ್ ಪ್ಯಾಕ್'' ದೇಹ ಸಿದ್ಧವಾಗಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಆರ್ ಚಂದ್ರು. ಚಿತ್ರದ ನಾಯಕಿಗಾಗಿ ಮುಂಬೈ ಬೆಡಗಿಯೊಬ್ಬರನ್ನು ಕರೆತರುವ ಬಗ್ಗೆಯೂ ಕಸರತ್ತು ನಡೆದಿದೆ.

ಗುರುಕಿರಣ್ ಸಂಗೀತ ಸಂಯೋಜಿಸುತ್ತಿರುವ ಮೈಲಾರಿ ಚಿತ್ರವನ್ನು ಕನಕಪುರ ಶ್ರೀನಿವಾಸ್ ನಿರ್ಮಿಸುತ್ತ್ತಿದ್ದಾರೆ. ಈ ಹಿಂದೆ ಇವರು ಶಿವರಾಜ್ ಕುಮಾರ್ ಜೊತೆ 'ಯುವರಾಜ' ಮತ್ತು 'ಸಂತ' ಚಿತ್ರಗಳನ್ನು ನಿರ್ಮಿಸಿದ್ದರು. ಶಿವಣ್ಣನಿಗೆ ಮೋಹಕ ತಾರೆ ಸದಾ ಜೊತೆಯಾಗಲಿದ್ದಾರೆ ಎಂಬ ಸುದ್ದಿಯೂ ಉಂಟು.

ಎಲ್ಲ ಪ್ರಮುಖ ಸುದ್ದಿಗಳ ಮೇಲೆ ಒನ್ಇಂಡಿಯಾ ನೋಟ. ನಿರಂತರ ಸುದ್ದಿ ಪಡೆಯಲು Facebook ಮತ್ತು Twitter ಮೇಲೆ ಇರಲಿ ಕಣ್ಣು.
Topics: ಮೈಲಾರಿ, ಶಿವರಾಜ್ ಕುಮಾರ್, ಹ್ಯಾಟ್ರಿಕ್ ಹೀರೋ, ಸದಾ, ಮೊನಾಲೀಸಾ, ಆರ್ ಚಂದ್ರು, ಮೋಹಿನಿ, mylari, shivrajkumar, hatrick hero, sada, r chandru, srinivas, mohini, monalisa, fourpack
ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada