Englishবাংলাગુજરાતીहिन्दीമലയാളംதமிழ்తెలుగు
 
Share This Story

ಶೀಘ್ರದಲ್ಲೇ ತೆರೆಗೆ 'ಐತಲಕ್ಕಡಿ'

Posted by:
Published: Friday, March 26, 2010, 15:23 [IST]

ಕನ್ನಡ ಚಿತ್ರರಂಗದಲ್ಲೇ ವಿಭಿನ್ನ ಪ್ರಯತ್ನವೆನ್ನಬಹುದಾದ 'ಐತಲಕ್ಕಡಿ' ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ. ಚಿತ್ರಕುಟೀರ ಸಂಸ್ಥೆಯ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ 108ಕ್ಕೂ ಅಧಿಕ ಕಲಾವಿದರು ಅಭಿನಯಿಸಿದ್ದಾರೆ.

ನಮ್ಮ ಸ್ಟುಡಿಯೋದಲ್ಲಿ ಸಂಕಲನಗೊಂಡ ಚಿತ್ರಕ್ಕೆ ಪ್ರಸಾದ್ ಸ್ಟುಡಿಯೋದಲ್ಲಿ ಮಾತುಗಳ ಜೋಡಣೆ ನಡೆದಿದೆ. ಆಕಾಶ್ ಸ್ಟುಡಿಯೊದಲ್ಲಿ ಗ್ರಾಫಿಕ್ಸ್ ನಿಂದ ಸಿಂಗಾರಗೊಂಡ ಚಿತ್ರಕ್ಕೆ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಹಿನ್ನಲೆ ಸಂಗೀತ ಹಾಗೂ ಡಿಟಿಎಸ್ ಅಳವಡಿಸಲಾಗಿದೆ ಎಂದು ಚಿತ್ರಕುಟೀರ ಸಂಸ್ಥೆಯ ಮುಖ್ಯಸ್ಥರಾದ ಎಂ.ಜಿ.ರಾಮಮೂರ್ತಿ ತಿಳಿಸಿದ್ದಾರೆ.

ನಿರ್ಮಾಪಕರಲ್ಲೊಬ್ಬರಾಗಿರುವ ಬುಲೆಟ್‌ಪ್ರಕಾಶ್ ಹಾಗೂ ರಂಗಾಯಣರಘು ಚಿತ್ರದ ಪ್ರಮುಖ ಪಾತ್ರದಲ್ಲಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್, ನವರಸನಾಯಕ ಜಗ್ಗೇಶ್, ಸುದೀಪ್, ವಿಜಯ್, ವಿಜಯರಾಘವೇಂದ್ರ, ನೀತು, ಮುಂತಾದ ಕಲಾವಿದರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಈಗಾಗಲೆ ಬಿಡುಗಡೆಗೊಂಡಿರುವ ಚಿತ್ರದ ಧ್ವನಿಸುರುಳಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ಸಾಧುಕೋಕಿಲಾ 'ಐತಲಕ್ಕಡಿ' ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿರುವ ಜೆ.ಜಿ.ಕೃಷ್ಣ ಅವರು ಛಾಯಾಗ್ರಹಣ ನೀಡುವುದರೊಂದಿಗೆ ನಿರ್ದೇಶನವನ್ನು ಮಾಡಿದ್ದಾರೆ. ತುಷಾರ ರಂಗನಾಥ್ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಆರ್.ಡಿ.ರವಿ ಅವರ ಸಂಕಲನವಿದೆ.

ಎಲ್ಲ ಪ್ರಮುಖ ಸುದ್ದಿಗಳ ಮೇಲೆ ಒನ್ಇಂಡಿಯಾ ನೋಟ. ನಿರಂತರ ಸುದ್ದಿ ಪಡೆಯಲು Facebook ಮತ್ತು Twitter ಮೇಲೆ ಇರಲಿ ಕಣ್ಣು.
Topics: ಐತಲಕ್ಕಡಿ, ಬುಲೆಟ್ ಪ್ರಕಾಶ್, ರಂಗಾಯಣ ರಘು, ಸುದೀಪ್, ಜಗ್ಗೇಶ್, ವಿಜಯ್, ವಿಜಯ ರಾಘವೇಂದ್ರ, aithalakkadi, bullet prakash, rangayana raghu, ravichandran, sudeep, jaggesh, vijay
ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada