twitter
    For Quick Alerts
    ALLOW NOTIFICATIONS  
    For Daily Alerts

    ಹೊಸ ಬಾಳಿನ ಹೊಸಿಲಲಿ ನಿಂತಿರುವ ರಂಭಾ

    By Rajendra
    |

    ದಕ್ಷಿಣದ ಖ್ಯಾತ ತಾರೆ ರಂಭಾ ಅವರ ಮದುವೆ ತಿರುಪತಿ ಪುಣ್ಯಕ್ಷೇತ್ರದಲ್ಲಿ ಏಪ್ರಿಲ್ 8ರಂದು ನಡೆಯಲಿದೆ. ನಟಿ ರಂಭಾ ಅವರ ಕೈಹಿಡಿಯುತ್ತಿರುವ ವರನ ಹೆಸರು ಇಂದಿರನ್ ಪದ್ಮನಾಭಂ. ಈತ ಕೆನಡ ಮೂಲದ ಉದ್ಯಮಿ. ಮದುವೆ ಆಹ್ವಾನ ಪತ್ರಿಕೆ ಈಗಾಗಲೆ ಬಂಧುಮಿತ್ರರ ಕೈಸೇರಿದೆ ಎಂದು ಮೂಲಗಳು ಖಚಿತಪಡಿಸಿವೆ.

    ಮದುವೆ ಆರತಕ್ಷತೆ ಕಾರ್ಯಕ್ರಮ ಏಪ್ರಿಲ್ 11ರಂದು ಚೆನ್ನ್ನೈ ನಗರದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಜನವರಿ 27ರಂದು ಚೆನ್ನೈನ ಹೋಟೆಲ್ ಗ್ರ್ಯಾಂಡ್ ಶೆರಟಾನ್ ನಲ್ಲಿ ರಂಭಾ ನಿಶ್ಚಿತಾರ್ಥ ಸಹ ಅದ್ದೂರಿಯಾಗಿ ನಡೆದಿತ್ತು. ರಂಭಾ ಮೂಲ ಹೆಸರು ವಿಜಯ ಲಕ್ಷ್ಮಿ. ಬೆಳ್ಳಿತೆರೆಗೆ ಅಡಿಯಿಟ್ಟ ಬಳಿಕ ಹೆಸರು ರಂಭಾ ಎಂದಾಯಿತು. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ, ಬಂಗಾಳಿ ಮತ್ತು ಭೋಜ್ ಪುರಿ ಭಾಷೆಗಳಲ್ಲಿ ನಟಿಸಿದ ಖ್ಯಾತಿ ರಂಭಾ ಅವರದು.

    ಕನ್ನಡದಲ್ಲಿ ಅನಾಥರು, ಸಾಹುಕಾರ, ಗಂಡುಗಲಿ ಕುಮಾರರಾಮ, ಪಾಂಡುರಂಗ ವಿಠಲ, ಭಾವ ಭಾಮೈದ, ಓ ಪ್ರೇಮವೆ, ಸರ್ವರ್ ಸೋಮಣ್ಣ ಚಿತ್ರಗಳಲ್ಲಿ ರಂಭಾ ಅಭಿನಯಿಸಿದ್ದಾರೆ. ಸದ್ಯಕ್ಕೆ ನಾವು ನೀವು ಮಾಡಬೇಕಾದ ಕೆಲಸ ಎಂದರೆ...ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ.

    Friday, March 19, 2010, 16:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X