Englishবাংলাગુજરાતીहिन्दीമലയാളംதமிழ்తెలుగు

ಹೈದರಾಬಾದ್‌ ನಲ್ಲಿ ಮಾಲಾಶ್ರೀ ಮೊಕ್ಕಾಂ

Posted by:
Published: Thursday, February 18, 2010, 11:12 [IST]
 

ರಾಮು ಎಂಟರ್‌ಪ್ರೈಸಸ್‌ನಲ್ಲಿ ರಾಮು ನಿರ್ಮಿಸುತ್ತಿರುವ ಅದ್ದೂರಿ 'ವೀರ' ಚಿತ್ರದ ಚಿತ್ರೀಕರಣವು ಬೆಂಗಳೂರಿನಲ್ಲಿ 45 ದಿವಸಗಳ ಚಿತ್ರೀಕರಣಮುಗಿಸಿ, ಚಿತ್ರತಂಡವು ಹೈದರಾಬಾದ್‌ಗೆ ತೆರಳಿತು. ಇದೇ ಸೋಮವಾರದಿಂದ ಹೈದರಾಬಾದ್‌ನಲ್ಲಿ ಚಿತ್ರೀಕರಣ ಮುಂದುವರೆಯಲಿದೆ.

ಸುಮಾರು 15 ದಿವಸಗಳ ಕಾಲ ಹೈದರಾಬಾದ್ ನಗರದ ಸುತ್ತಮುತ್ತ ಚಿತ್ರೀಕರಣ ನಡೆಯಲಿದ್ದು, ಮೈನವಿರೇಳಿಸುವ ಚೇಸಿಂಗ್ ಹಾಗೂ ಹೊಡೆದಾಟದ ಸನ್ನಿವೇಶಗಳನ್ನು ಚಿತ್ರಿಸಿಕೊಳ್ಳಲಾಗುವುದೆಂದು ತಿಳಿಸಿರುವ ನಿರ್ಮಾಪಕ ರಾಮು, ಹೈದರಾಬಾದ್ ಚಿತ್ರೀಕರಣ ನಂತರ ಚಿತ್ರ ತಂಡವು ಮತ್ತಷ್ಟು ಚಿತ್ರೀಕರಣಕ್ಕಾಗಿ ಬ್ಯಾಂಕಾಕ್, ಮಕಾವೋಗೆ ತೆರಳಲಿದೆ ಎಂದು ತಿಳಿಸಿದ್ದಾರೆ.

ಚಿತ್ರಕ್ಕೆ ರವಿ ಶ್ರೀವತ್ಸ ಸಂಭಾಷಣೆ, ವರದನ್ (ಜೋಷ್ ಖ್ಯಾತಿ) ಸಂಗೀತ, ರಾಜೇಶ್ (ಬಾಂಬೆ) ಛಾಯಾಗ್ರಹಣ, ಇಮ್ರಾನ್ ನೃತ್ಯ, ರಾಮ್‌ಲಕ್ಷ್ಮಣ್ ರಾಖೀ ರಾಜೇಶ್, ವಿಜಯ್ ಸಾಹಸ, ರಮೇಶ್‌ಬಾಬು ನಿರ್ಮಾಣ ನಿರ್ವಹಣೆ ಶೇಷು ನಿರ್ದೇಶನ ಸಹಕಾರವಿದ್ದು, ಆಯುಧ, ಚಾಮುಂಡಿ, ಚಿತ್ರಗಳನ್ನು ನಿರ್ದೇಶಿಸಿದ ಅಯ್ಯಪ್ಪ ಪಿ. ಶರ್ಮ, ಚಿತ್ರವನ್ನು ನಿರ್ದೇಶಿಸುತ್ತಿದ್ದು, ಎಂ.ಕೆ. ಶರ್ಮ ಆಗಿ ಪರಿಚಯವಾಗಲಿದ್ದಾರೆ.

ತಾರಾಗಣದಲ್ಲಿ ಮಾಲಾಶ್ರೀ, ರಾಧಿಕಾಗಾಂಧಿ, ಕೋಮಲ್‌ಕುಮಾರ್, ಆಶಿಷ್ ವಿದ್ಯಾರ್ಥಿ, ಸಯ್ಯಾಜಿ ಶಿಂಧೆ, ರಾಹುಲ್‌ದೇವ್ (ಬಾಂಬೆ) ಸಿ.ಆರ್. ಸಿಂಹ, ಸತ್ಯ (ಹೈದರಾಬಾದ್) ಶರಣ್ (ಹೈದರಾಬಾದ್) ದೊಡ್ಡಣ್ಣ, ಸಾಧುಕೋಕಿಲ, ಸತ್ಯಜಿತ್, ಹೆಚ್.ಎಂ.ಟಿ. ನಂದ ಮುಂತಾದವರಿದ್ದಾರೆ.

ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada
Subscribe Newsletter
Coupons